ವಿಜಯ ದರ್ಪಣ ನ್ಯೂಸ್….
ಪ್ರಕೃತಿ ಮಾತೆಗೆ ಗೌರವ ಕೊಡಿ, ವಿನಾಶಪಡಿಸಿದರೆ ಉಳಿಗಾಲವಿಲ್ಲ :ನಟ ನಿರ್ದೇಶಕ ಎಸ್.ನಾರಾಯಣ್

ಬೆಂಗಳೂರು: ಶಂಕರಮಠ ವಾರ್ಡ್ ಮತ್ತು ಕಮಲನಗರ ವಾರ್ಡ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜನಜಾಗೃತಿ ಅಭಿಯಾನ ಸಸಿ ನೆಡುವ ಮತ್ತು ಉಚಿತವಾಗಿ ಸಸಿ ವಿತರಣೆ ಹಾಗೂ ಸಿಹಿ ವಿತರಣೆ ಕಾರ್ಯಕ್ರಮ.
ನಟ, ನಿರ್ದೇಶಕ ಎಸ್.ನಾರಾಯಣ್ ರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಸಮಾಜ ಸೇವಕಿ ಶ್ರೀಮತಿ ವಿಶಾಲಾಕ್ಷಿ ಶಿವರಾಜುರವರು ಸಸಿ ನೆಟ್ಟು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.
ಎಸ್.ನಾರಾಯಣ್ ರವರು ಮಾತನಾಡಿ ಪ್ರಕೃತಿ ಮಾತೆ ಮನುಷ್ಯ ಕಡೆಗಣಿಸಿದರೆ ಮನುಷ್ಯ ಜೊತೆಯಲ್ಲಿ ಪ್ರಾಣಿ, ಪಕ್ಷಿಗಳಿಗೂ ಉಳಿಗಾಲವಿಲ್ಲ.
ಭೂತಾಯಿ ಎನ್ನುತ್ತೇವೆ ತಾಯಿ ನಂತರ ಭೂತಾಯಿಗೆ ಎಲ್ಲರು ಗೌರವ ಕೊಡಬೇಕು. ಭೂಮಿ ತಾಯಿ ನಮಗೆ ಅನ್ನ, ನೀರು, ಆಶ್ರಯ ಕೊಡುತ್ತಾಳೆ. ಭೂತಾಯಿ ದ್ರೋಹ ಮಾಡಬಾರದು. ಪ್ರತಿಯೊಂದು ಮನೆಯ ಮುಂದೆ ಸಸಿ ನೆಟ್ಟು ಪೋಷಣೆ ಮಾಡಿ, ಪರಿಸರ ಉಳಿಸಿ ಎಂದು ಹೇಳಿದರು.
ಎಮ್.ಶಿವರಾಜುರವರು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಮರ, ಗಿಡಗಳನ್ನು ಕಡಿದು ಪರಿಸರ ಹಾಳು ಮಾಡಲಾಗುತ್ತಿದೆ.
ಅಭಿವೃದ್ಧಿಯ ಜೊತೆಯಲ್ಲಿ ಪರಿಸರ ಉಳಿಸುವ ಕಾರ್ಯವಾಗಬೇಕು. ಪ್ರತಿಯೊಬ್ಬರು ಪ್ರತಿದಿನ ಪರಿಸರ ಉಳಿಸುವಲ್ಲಿ ಕಾರ್ಯವಹಿಸಬೇಕು ಎಂದು ಹೇಳಿದರು.











