--Ads--

ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

On: June 11, 2026 3:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್……

ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಜೂನ್ 11 ಮೈಸೂರು ಜಿಲ್ಲೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಆಶೀರ್ವಾದದಿಂದ ಇವತ್ತು ನಾನು ನಗರಾಭಿವೃದ್ಧಿ ಸಚಿವನಾಗಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ರಾಜ್ಯದ ಜನತೆಯ ಋಣ ಭಾರವನ್ನು ಅಭಿವೃದ್ಧಿ ಕೆಲಸಗಳ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಲು ಸವಿಸುತ್ತೇನೆ ಎಂದು ಹೇಳಿದರು

ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಮಿತಿಯ ಸದಸ್ಯ ಮೆಲ್ಲಹಳ್ಳಿ ಎಂ ಪ್ರಸಾದ್ ರವರ ನೇತೃತ್ವದಲ್ಲಿ ಮುಖಂಡರು ಯಜಮಾನರುಗಳು ನೂತನ  ಸಚಿವರಾಗಿ ನೇಮಕಗೊಂಡಿರುವ ಡಾ ಯತಿಂದ್ರ ಸಿದ್ದರಾಮಯ್ಯ ನವರನ್ನು ಭೇಟಿಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು

ಗೌರವ ಸ್ವೀಕರಿಸಿ ಮಾತನಾಡಿದ  ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ ನಿಮ್ಮ ಪ್ರೀತಿಯ ಅಭಿಮಾನ ಸದಾ ಹೀಗೆ ಇರಲಿ ಎಂದು ಹೇಳಿದ ಅವರು ನಾನು ಈ ಮಟ್ಟಕ್ಕೆ ಬೆಳೆಯಲು ಸಚಿವನಾಗಲು ಕಾರಣಕರ್ತರಾದ ವರುಣ ವಿಧಾನಸಭಾ ಕ್ಷೇತ್ರದ ಜನತೆಯ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಹಾಗೂ ಹಿರಿಯರ ಆಶೀರ್ವಾದವೇ ಕಾರಣವಾಗಿದ್ದು ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ನನಗೆ ನಗರಾಭಿವೃದ್ಧಿ ಸಚಿವರಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಾನು ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ನಿಬಾಯಿಸುವ ಜೊತೆಗೆ ನಗರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದಾಗಿ ತಿಳಿಸಿದರು

ಈ ಸಮಯದಲ್ಲಿ ಮಾಜಿ ಯಜಮಾನ್ ಗವಿ, ಮಾಜಿ ಗ್ರಾ ಪಂ ಸದಸ್ಯ ಪೈಲ್ವಾನ್ ಕುಮಾರ್, ಲಷ್ಮಿಪುರ ಗ್ರಾ ಪಂ ಸದಸ್ಯ ಸಿದ್ದರಾಜು ಕಾರ್ಯದ ಪ್ರಸನ್ನ ಸೇರಿದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now