ವಿಜಯ ದರ್ಪಣ ನ್ಯೂಸ್….
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕ್ರೀಡಾಕೂಟ ಆಯೋಜನೆ: ಪ್ರಧಾನ ಕಾರ್ಯದರ್ಶಿ ಕ್ರಿಕೆಟ್ ತಂಡಕ್ಕೆ ಗೆಲುವು

ತಾಂಡವಪುರ ಜುಲೈ 25 ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರ ಕ್ರೀಡಾಕೂಟಕ್ಕೆ ಚಾಲನೆ ದೊರಕಿದ್ದು, ಮೊದಲ ದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯದಲ್ಲಿ ಅಧ್ಯಕ್ಷ -11 ತಂಡವನ್ನು ಮಣಿಸಿದ ಪ್ರಧಾನ ಕಾರ್ಯದರ್ಶಿ-11 ತಂಡ ಗೆಲುವಿನ ನಗೆಬೀರಿದೆ.
ಮೈಸೂರು ವಿವಿಯ ಓವಲ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ನಾಲ್ಕು ತಂಡಗಳು ಭಾಗವಹಿಸಿದ್ದವು. ಮೊದಲ ಪಂದ್ಯವನ್ನಾಡಿದ ಅಧ್ಯಕ್ಷ-11 ಗ್ರಾಮಾಂತರ ಉಪಾಧ್ಯಕ್ಷ-11 ತಂಡವನ್ನು 3 ರನ್ ಗಳ ಅಂತರದಿಂದ ಸೋಲಿಸಿ ಫೈನಲ್ಸ್ ಪ್ರವೇಶಿಸಿತು. 6 ಓವರ್ ಗಳಲ್ಲಿ 49 ರನ್ ಗಳನ್ನು ಕಲೆ ಹಾಕಿದ ಅಧ್ಯಕ್ಷರ ತಂಡ ಗ್ರಾ.ಉಪಾಧ್ಯಕ್ಷರ ತಂಡವನ್ನು 46 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.
ಎರಡನೇ ಪಂದ್ಯದಲ್ಲಿ ಗ್ರಾ. ಕಾರ್ಯದರ್ಶಿ ತಂಡವನ್ನು ಸೋಲಿಸಿದ ಪ್ರಧಾನ ಕಾರ್ಯದರ್ಶಿ ತಂಡ ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಗ್ರಾಮಾಂತರ ಕಾರ್ಯದರ್ಶಿ ತಂಡ ಗೆಲುವು ದಾಖಲಿಸಿತು.
ಫೈನಲ್ ಪಂದ್ಯದಲ್ಲಿ ಅಧ್ಯಕ್ಷ -11 ತಂಡ ನೀಡಿದ 42 ರನ್ ಗಳ ಗುರಿಯನ್ನು ಇನ್ನು 2 ಬಾಲ್ ಬಾಕಿ ಇರುತೆಯೆ ಗುರಿ ಮುಟ್ಟುವ ಮೂಲಕ ಪ್ರ. ಕಾರ್ಯದರ್ಶಿ -11 ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಕ್ರೀಡಾಕೂಟಕ್ಕೆ ಚಾಲನೆ : ಇದಕ್ಕು ಮುನ್ನ ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯದ ಅಧ್ಯಕ್ಷ ಟಿ.ರವೀಂದ್ರ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು.
ಎಪಿಎನ್ ಪ್ರಾಪರ್ಟಿಸ್ ಮಾಲೀಕ ಎ.ಪಿ. ನಾಗೇಶ್ ಮತ್ತು ಅಂಬಾರಿ ಟಿವಿ ವಾಹಿನಿಯ ಮಾಲೀಕ, ವಕೀಲ ಆರ್. ಹೊಯ್ಸಳ ಅವರು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿದರು.
ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ರೇವಣ ಸಿದ್ದಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಖಜಾಂಚಿ ಎನ್. ಸುರೇಶ್, ಗ್ರಾ. ಉಪಾಧ್ಯಕ್ಷ ಹೆಚ್. ಎಸ್. ವೆಂಕಟಪ್ಪ, ಗ್ರಾಮೀಣ ಕಾರ್ಯದರ್ಶಿ ದಾರಾ ಮಹೇಶ್ ಹಾಜರಿದ್ದರು.

ಹಿಂದಿನ ಕಾಲಕ್ಕೂ ಇಂದಿಗೂ ಪತ್ರಿಕೋದ್ಯಮ ಕ್ಷೇತ್ರ ಸಾಕಷ್ಟು ಬದಲಾಗಿದೆ. ಅಂದು ಮಾಹಿತಿ ಸಂಗ್ರಹಿಸಲು ಬಹಳ ಕಷ್ಟ ಪಡುತಿದ್ದರು. ಇಂದು ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ಸುಲಭವಾಗಿ ಸಿಗುತ್ತಿದೆ. ಆದರೆ, ಆ ಮಾಹಿತಿಯಲ್ಲಿ ಮೌಲ್ಯ ಸಿಗುತ್ತಿಲ್ಲ. ಪತ್ರಕರ್ತರು ಯಾವುದೇ ಮುಲಾಜಿಗೆ ಒಳಗಾಗದೆ ಕೆಲಸ ನಿರ್ವಹಿಸಬೇಕು
– ಪ್ರೊ. ರೇವಣ್ಣ ಸಿದ್ದಪ್ಪ, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮೈವಿವಿ.









