--Ads--

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ 

On: June 11, 2026 3:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ 

ಶಿಡ್ಲಘಟ್ಟ : ರೈತರಿಗೆ ನೀಡುವ ಹನಿ ನೀರಾವರಿ ಸೌಲಭ್ಯ ಅಥವಾ ಇತರೆ ಕೃಷಿ ಪರಿಕರಗಳು ಕಾಲಕ್ರಮೇಣ ಹಾಳಾಗಿದ್ದು ಐದು ವರ್ಷಗಳ ಹಿಂದೆ ಈ ಯೋಜನೆ ಪಡೆದ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಮತ್ತೆ ಕೊಡಬೇಕು’ ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ರೈತನ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ರೇಷ್ಮೆ ಇಲಾಖೆ ವತಿಯಿಂದ ರೈತರ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಗೆ ನೀಡುವ ಹನಿ ನೀರಾವರಿ ಸೌಲಭ್ಯ ಅಥವಾ ಇತರೆ ಕೃಷಿ ಪರಿಕರಗಳು ಕಾಲಕ್ರಮೇಣ ಹಾಳಾಗಿದ್ದು, ಐದು ವರ್ಷಗಳ ಹಿಂದೆ ಈ ಯೋಜನೆ ಪಡೆದ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಮತ್ತೆ ನೀಡಬೇಕು ಎಂದು ಕೋರಿದರು.
ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆ ಮನೆ, ಹಿಪ್ಪುನೇರಳೆ ತೋಟದ ನಿರ್ವಹಣೆ, ಯೂರಿಯಾದ ಮಿತ ಬಳಕೆ ಕುರಿತು ರೈತರು ಗುಂಪು ಚರ್ಚೆ ನಡೆಸಿ ಗೊತ್ತಿರುವ ವಿಷಯಗಳನ್ನು ಹೇಳಿ ಗೊತ್ತಿರದ ವಿಷಯಗಳನ್ನು ಇತರೆ ರೈತರಿಂದ ತಿಳಿದುಕೊಂಡು ಪರಸ್ಪರ ವಿಷಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಭಾರತಿ, ರೈತರಾದ ಮುನಿರಾಜು, ಹಿತ್ತಲಹಳ್ಳಿ ಸುರೇಶ್, ರಾಮಕೃಷ್ಣಪ್ಪ, ಮೋಹನ್‌, ಪುಟ್ಟೇಗೌಡ, ಮುರಳಿ, ಬಿ.ಮಂಜು, ದೇವೇಗೌಡ, ಮುನಿಕೃಷ್ಣ, ಕೇಶವಮೂರ್ತಿ ರೈತರ ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now