--Ads--

ಅರಿಯುತ್ತಾ, ಯೋಚಿಸುತ್ತಾ, ಬೆಳೆಯುತ್ತಾ, ನಾವು ನೀವು…….

On: June 22, 2026 7:58 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅರಿಯುತ್ತಾ, ಯೋಚಿಸುತ್ತಾ, ಬೆಳೆಯುತ್ತಾ, ನಾವು ನೀವು…….

ಹಿಂದು, ಹಿಂದುತ್ವ, ಮನುವಾದ, ಪುರೋಹಿತಶಾಹಿ, ಬ್ರಾಹ್ಮಣ್ಯ, ವರ್ಣಾಶ್ರಮ, ಜಾತೀಯತೆ, ಅಸ್ಪೃಶ್ಯತೆ, ಜಾತ್ಯಾತೀತತೆ, ರಾಷ್ಟ್ರೀಯವಾದ, ಭಾರತೀಯತೆ, ಇಸ್ಲಾಮೀಕರಣ, ಕ್ರಿಶ್ಚಿಯಾನೀಕರಣ,
ಸಂವಿಧಾನೀಕರಣ,
ವಿಶ್ವ ಮಾನವತೆ,
ನಾಗರೀಕತೆ…………

ಈ ಪದಗಳ ಅರ್ಥ,
ಇದರ ಮೂಲ ಅರ್ಥ,
ಇದರ ಗೂಡಾರ್ಥ,
ಇದರ ಮೂಲ ಆಶಯ,
ಇದರ ವಿಶಾಲ ಅರ್ಥ,
ಇದರ ಅರಿಯಲಾರದ ಅರ್ಥ,
ಇದರ ಗುಪ್ತ ಆಶಯ,
ಇದರ ಒಳ ಸಂಚು,
ಇದರ ಆಳ ಅರ್ಥ,
ಇದರ ವಾಸ್ತವ ಅರ್ಥ,
ಇದರ ಪ್ರಾಯೋಗಿಕ ಆಶಯ,
ಇದರ ಮೂಲ ಆಚರಣೆ,
ಇದರ ಬೆಳವಣಿಗೆ,
ಇದರ ಈಗಿನ ಆಚರಣೆ,……….

ಜನರ ಸ್ವಾಭಾವಿಕ ವರ್ತನೆ,
‌ನಂತರ ಬೆಳೆದ ನಾಗರಿಕ ವರ್ತನೆ,
ಜನರ ಆಧುನಿಕ ವರ್ತನೆ,
ತಾಂತ್ರಿಕ ಬೆಳವಣಿಗೆ,
ಪ್ರಜಾಪ್ರಭುತ್ವ,
ಅಭಿವ್ಯಕ್ತಿ ಸ್ವಾತಂತ್ರ್ಯ,
ಸಂಪರ್ಕ ಕ್ರಾಂತಿ,
ಧಾರ್ಮಿಕ ನಂಬಿಕೆಗಳು,
ಶೈಕ್ಷಣಿಕ ಕ್ರಮಗಳು,
ಆರ್ಥಿಕ ಅವಲಂಭನೆ ಮತ್ತು ಅಸಮಾನತೆ,
ಸಾಮಾಜಿಕ ಅಸಮಾನತೆ,
ಮಾನಸಿಕ ಸ್ಥಿತಿ,
ಆಸೆ, ದುರಾಸೆ, ಭಯ, ನಿರೀಕ್ಷೆ ಗೊಂದಲಗಳು,
ಬದುಕಿನ ಸಮಯದ ಉದ್ದೇಶ………..

ಇವುಗಳ ಬಗ್ಗೆ ಯೋಚಿಸುತ್ತಾ, ಸತ್ಯದ ಬಗ್ಗೆ, ವಾಸ್ತವದ ಬಗ್ಗೆ ಹುಡುಕಾಟ ನಡೆಸುತ್ತಾ ಹೋದರೆ ನಿಮಗೆ ನಿಮ್ಮ ನಿಜ ವ್ಯಕ್ತಿತ್ವದ ಪರಿಚಯವಾಗುತ್ತಾ ಹೋಗುತ್ತದೆ.

ಆದರೆ ನೀವು,
ಇವುಗಳನ್ನು ನೀವು ನಿಮ್ಮ ಧರ್ಮ ಗ್ರಂಥಗಳಾದ ಭಗವದ್ಗೀತೆ, ಖುರಾನ್, ಬೈಬಲ್ ಮುಂತಾದ ಪುಸ್ತಕಗಳಲ್ಲಿ ಹುಡುಕಬಾರದು, ನಿಮ್ಮ ಅಲ್ಲಾ, ಶಿವ, ಜೀಸಸ್ ಗಳಲ್ಲಿ ಕೇಳಬಾರದು, ನಿಮ್ಮ ಹಿರಿಯರು, ವಿದ್ವಾಂಸರು, ಆದರ್ಶ ಪುರುಷರು ಮುಂತಾದವರ ಪುಸ್ತಕ ಪ್ರವಚನಗಳಲ್ಲಿ ಹುಡುಕಬಾರದು.
ಏಕೆಂದರೆ ಅದರಲ್ಲಿ ಹುಡುಕಿದರೆ ಅವರು ಮತ್ತು ಅವರ ನಂಬಿಕೆ, ಚಿಂತನೆ,ಅನುಭವ ಮತ್ತು ಅಭಿಪ್ರಾಯಗಳು ನಿಮಗೆ ಸಿಗುತ್ತವೆ.ಕೆಲವು ಸ್ಪಷ್ಟ ಮತ್ತೆ ಕೆಲವು ಅಸ್ಪಷ್ಟವಾಗಿ ಮತ್ತೆ ನಿಮಗೆ ಈಗಿನ ಪರಿಸ್ಥಿತಿಯಲ್ಲಿ ಗೊಂದಲವಾಗುವ ಸಾಧ್ಯತೆ ಇದೆ………

ಹಾಗಾದರೆ ಹುಡುಕುವುದೆಲ್ಲಿ ….?

ನನ್ನ ಅಭಿಪ್ರಾಯದಲ್ಲಿ ಇದನ್ನು ನಾವು ನಮ್ಮಲ್ಲಿಯೇ ಹುಡುಕಬೇಕು. ಅಂದರೆ…..

ನಾವು ಈಗಿರುವ ನಮ್ಮ ಸ್ಥಾನದಲ್ಲಿಯೇ ನಿಂತು ಈ ಕ್ಷಣದ ನಮ್ಮ ಅರಿವಿನಿಂದ, ನಮ್ಮ ಮನೆ, ಬೀದಿ, ಊರು, ರಾಜ್ಯ, ದೇಶ ಮತ್ತು ವಿಶ್ವದ ಆಗುಹೋಗುಗಳಿಂದ…….

ನಮ್ಮ ತಂದೆ ತಾಯಿ, ನಮ್ಮ ಸುತ್ತಮುತ್ತಲಿನ ಜನರಿಂದ ಮತ್ತು ಜಗತ್ತಿನ ಮೂಲೆಮೂಲೆಯ ಜನರ, ವಿವಿಧ ವರ್ಗದ ವಿವಿಧ ಹಂತದ ಜನರ ವರ್ತನೆಗಳಿಂದ,

ನಮಗೆ ಲಭ್ಯವಿರುವ ಮತ್ತು ಸಾಧ್ಯವಿರುವ ಎಲ್ಲಾ ಮಾಧ್ಯಮಗಳಿಂದ ಮತ್ತು ನೀವು ಈಗಾಗಲೇ ಓದು, ಅನುಭವ, ಅವಶ್ಯಕತೆ, ಅನಿವಾರ್ಯತೆ, ಘರ್ಷಣೆ, ಗೊಂದಲ, ಸಹಕಾರ, ಸಹಿಷ್ಣುತೆ ಎಲ್ಲವನ್ನೂ ಒಳಗೊಂಡ, ಪಂಚೇಂದ್ರಿಯಗಳಿಂದ ಸಿಕ್ಕ ಮತ್ತು ಅರಿಷಡ್ವರ್ಗಗಳ ಪ್ರಲೋಭನೆಯ ಮಿತಿಯಲ್ಲಿ ಯೋಚಿಸಿದರೆ ಮೇಲಿನ ಪದಗಳ ಅರ್ಥ ಸಂಪೂರ್ಣ ಸತ್ಯ ಅಲ್ಲದಿದ್ದರೂ ಅದರ ವಾಸ್ತವ ಅರ್ಥ ಸಿಗುತ್ತದೆ ಮತ್ತು ನಿಮ್ಮ ಮನಸ್ಸಿನ ಆಳಕ್ಕೆ ನಾಟುತ್ತದೆ…..

ಇಲ್ಲದಿದ್ದರೆ, ಯಾರೋ ಬರೆದ, ಯಾರೋ ಹೇಳಿದ, ಎಲ್ಲೋ ಕೇಳಿದ, ಯಾವ ರೂಪದಲ್ಲೋ ನೋಡಿದ ವಿಷಗಳೇ ಮುಖ್ಯವಾಗಿ ನಿಮ್ಮತನ ಇರುವುದೇ ಇಲ್ಲ……….

ಜಗತ್ತಿನ ಪ್ರತಿ ಜೀವಿಯೂ ಸ್ವತಂತ್ರ. ಪ್ರತಿಯೊಬ್ಬರ ಜೀವನವೂ ಅವರ ದೇಹ ಮತ್ತು ಆಲೋಚನೆಗಳ ಮೇಲೆಯೇ ನಡೆಯುತ್ತದೆ. ಅವರ ಅನುಭವಗಳ ಮೂಟೆ ಹೊತ್ತೇ ಸಾಗಬೇಕು.

ಇಡೀ ಬರಹದ ಒಟ್ಟು ಆಶಯ ……..

ಹಳೆಯದೆಲ್ಲಾ ತಪ್ಪು, ಇತಿಹಾಸ ಮತ್ತು ಹಿರಿಯರ ಜ್ಞಾನ ಅಪ್ರಯೋಜಕ ಎಂದಲ್ಲಾ. ಇತಿಹಾಸದ ಅನುಭವದ ಬೆಳಕಿನಲ್ಲಿ ನಿಮ್ಮ ಸ್ವಂತದ ಆಲೋಚನೆ ಮೂಡಲಿ. ಹೊಸ ಹೊಸ ಚಿಂತನೆ ಹೊರಬರಲಿ. ಯಾರಿಗೂ ಗುಲಾಮರಾಗದೆ ಎಲ್ಲವನ್ನೂ ಪ್ರಶ್ನಿಸಿ ಸರಿ ಎನಿಸಿದಲ್ಲಿ ಒಪ್ಪಿಕೊಳ್ಳಿ. ಧರ್ಮ ಗ್ರಂಥಗಳು ವಿಕಾಸವಾದವಾಗಬೇಕೆ ಹೊರತು ವಿನಾಶವಾಗಬಾರದು.

ನೀವು ನೀವಾಗಿರಿ. ಯಾವುದೋ ತತ್ವ ಸಿದ್ದಾಂತಗಳ ದಾಸರಾಗದೆ ಕಾಲನ ಕರೆ ಬರುವವರೆಗೂ ಸ್ವತಂತ್ರವಾಗಿರಿ.

ನಿಮ್ಮ ಬದುಕು ನಿಮ್ಮ ಹಕ್ಕು.
ಆದರೆ ವಾಸ್ತವ ಸನ್ನಿವೇಶಗಳ ಮತ್ತು ನೀವು ಈಗಿರುವ ಪರಿಸ್ಥಿತಿಯ ಮಿತಿಯಲ್ಲಿ ಮಾತ್ರ…..
ಅದೇ ಸಾಮಾನ್ಯ ಜ್ಞಾನ……

ಜೈ ಭೀಮ್,
ಜೈ ಶ್ರೀ ರಾಮ್,
ಶರಣು ಶರಣಾರ್ಥಿ,
ಹರಿ ಓಂ,
ಹರ ಹರ ಮಹದೇವ್,
ಓಂ ನಮಃ ಶಿವಾಯ,
ಹರೇ ರಾಮ ಹರೇ ಕೃಷ್ಣ,
ಜೈ ಹನುಮಾನ್,
ಜೈ ಭಗವಾನ್,
ಜೈ ಸದ್ಗುರು,
ನಮೋ ಮಂಜುನಾಥ,
ನಮೋ ವೆಂಕಟೇಶ,
ಸ್ವಾಮಿ ಶರಣಂ ಅಯ್ಯಪ್ಪ ,
ಓಂ ಶಕ್ತಿ,
ಓಂ ಕಲ್ಕಿ,
ನಮೋ ಬುದ್ಧಾಯ,
ಲಾಲ್ ಸಲಾಂ,
ಜೈ ಭಾರತ್,
ಓಂ ಶಕ್ತಿಮಾತಾ,
ಸಾಧು ಸಾಧು ಸಾಧು,
ಜೈ ಸನಾತನ,
ಜೈ ಬಸವೇಶ್ವರ,…….

ಹೀಗೆ ದೂರವಾಣಿಯಲ್ಲಿ ಅಥವಾ ನೇರವಾಗಿ ಭೇಟಿಯಾದಾಗ ಭಾರತೀಯ ಸಮಾಜದಲ್ಲಿ ವಿನಿಮಯ ಮಾಡಿಕೊಳ್ಳುವ ಪದಗಳ ಉದಾಹರಣೆ ಇದು. ಈ ದೇಶದ ವೈವಿಧ್ಯತೆಯನ್ನು ಸಾರುತ್ತದೆ ಮತ್ತು ಅದೇ ಸಮಯದಲ್ಲಿ ವಿಭಜಕ ಮನೋಭಾವವನ್ನು ಸಹ ಸೂಚಿಸುತ್ತದೆ….

ಈ ಪದಗಳ ವಿನಿಮಯ ಅನೇಕ ಅರ್ಥಗಳನ್ನು ಸಹ ಸೂಚಿಸುತ್ತದೆ ಅದು ಭಕ್ತಿಯ ಸಂಕೇತವು ಆಗಿರಬಹುದು, ಸ್ವಾಭಿಮಾನವು ಆಗಿರಬಹುದು, ಮೂಡನಂಬಿಕೆಯೂ ಆಗಿರಬಹುದು, ಸೈದ್ಧಾಂತಿಕವೂ ನಿಲುವುಗಳು, ಸಂಘಟನಾತ್ಮಕ ಶಕ್ತಿಯು ಆಗಿರಬಹುದು, ಭಯದ ಸಂಕೇತವು ಆಗಿರಬಹುದು, ಗುಲಾಮಿತನದ ಮನೋಭಾವವು ಆಗಿರಬಹುದು, ರಾಜಕೀಯವು ಆಗಿರಬಹುದು……

ಈ ಎಲ್ಲಾ ಮಾನಸಿಕ ಸಂಕೋಲೆಗಳನ್ನು ಬಿಡಿಸಿಕೊಂಡು ಸ್ವಚ್ಛಂದ ಮಾನವೀಯ – ನಾಗರಿಕ – ಜೀವಪರ ನಿಲುವುಗಳಲ್ಲಿ ಜೀವನ ದರ್ಶನ ಮಾಡುವುದು ಒಂದು ಅದ್ಭುತ ಅನುಭವ. ಹುಟ್ಟುವ ಮಗು ಆ ಕ್ಷಣದಿಂದಲೇ ಅನೇಕ ಸಂಬಂಧಗಳ ಬಲೆಯೊಳಗೆ ಸಿಲುಕಿ ಬಿಡುತ್ತದೆ ತನ್ನ ಬದುಕನ್ನು ಸ್ವಚ್ಛಂದವಾಗಿ ಅನುಭವಿಸಲು ಈ ಕಲುಷಿತ ವಾತಾವರಣ ಬಿಡುವುದಿಲ್ಲ.ಬೆಳೆಯುತ್ತಾ ಬೆಳೆಯುತ್ತಾ ಸಂಕುಚಿತವಾಗುತ್ತಾ ಸಾಗುತ್ತದೆ…….

ನಾವು ಭಾವಿಸುವ ಬೆಳವಣಿಗೆ, ನಾವು ನಿರೀಕ್ಷಿಸುವ ಅಭಿವೃದ್ಧಿ, ನಮ್ಮ ಆಶಯದ ಸಾಧನೆ ವಾಸ್ತವಿಕವಾಗಿ ಬಹುತೇಕ ವಸ್ತು ಸಂಸ್ಕೃತಿಯ ಯಶಸ್ಸನ್ನು ಅವಲಂಬಿಸಿರುತ್ತದೆ. ಅದರ ಪರಿಣಾಮವೇ ಮನುಷ್ಯನೊಳಗೆ ಸಣ್ಣತನ ಸೃಷ್ಟಿಯಾಗಿ ಬಿಡುತ್ತದೆ. ದ್ವೇಷ, ಅಸೂಯೆ, ಶ್ರೇಷ್ಠತೆಯ ವ್ಯಸನ, ದುರಾಸೆ ಇವುಗಳು ಮೇಲುಗೈ ಪಡೆಯುತ್ತದೆ. ಆದರೂ ಈ ವಾಸ್ತವ ಬದುಕಿನಲ್ಲಿ ಈ ಎಲ್ಲದರ ನಡುವೆ ನಾವು ಜೀವನ ಸಾಗಿಸಲೇಬೇಕಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಈ ಬಲೆಯೊಳಗೆ ಸಿಲುಕದೆ ಅಂತರ್ಯದಲ್ಲಿ ವಿಶಾಲ ಮನೋಭಾವವನ್ನು , ಮುಕ್ತ ವಾತಾವರಣವನ್ನು ಉಳಿಸಿಕೊಂಡು, ಬೆಳೆಸಿಕೊಂಡು ನಮ್ಮ ಚಿಂತನೆಗಳನ್ನ ಹೆಚ್ಚು ವೈಜ್ಞಾನಿಕವಾಗಿ ವೈಚಾರಿಕವಾಗಿ ಈ ಪ್ರಕೃತಿಯ ಮೂಲಕ್ಕೆ ನಿಷ್ಠರಾಗಿ ಬದುಕಬೇಕಿದೆ.

ಮೇಲಿನ ಘೋಷಣೆಗಳು ಗೌರವ ಪೂರ್ವಕವಾಗಿ ನಮ್ಮ ತನ್ನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇರುವುದಾದರೆ ಅದು ಸ್ವಾಗತ ಅಥವಾ ಸಹನೀಯ. ಆದರೆ ಅದು ವಿಭಜಕ ಮನೋಭಾವದ ಇತರರನ್ನು ಕೀಳಾಗಿ ಕಾಣುವ ಅಥವಾ ಇತರರಲ್ಲಿ ದ್ವೇಷವನ್ನ ಸೃಷ್ಟಿ ಮಾಡುವ ರೀತಿಯಲ್ಲಿ ಆ ಪದಗಳ ಪ್ರಯೋಗವಾದರೆ ಅದು ನಿಜಕ್ಕೂ ದುರಾದೃಷ್ಟಕರ……

ಈ ರೀತಿಯ ಪದಗಳ ಹೆಚ್ಚು ಪ್ರಯೋಗ ಮಾಡುವವರನ್ನು ಗಮನಿಸಿ ನೋಡಿ. ಅವರ ಬಗ್ಗೆ ಅಭಿಮಾನ, ಪ್ರೀತಿಗಿಂತ ಒಂದು ರೀತಿಯ ಭಯ ನಮ್ಮಲ್ಲಿ ಆವರಿಸುತ್ತದೆ. ಏಕೆಂದರೆ ಬಹುತೇಕ ಅವರ ಘೋಷಣೆಗಳು ಅಕ್ರಮಣಕಾರಿಯಾಗಿರುತ್ತದೆ. ಇದು ಇತರರಲ್ಲಿ ಮತ್ತಷ್ಟು ಅಭದ್ರತೆ ಕಾಡಲು ಶುರುವಾಗುತ್ತದೆ…..

ಒಟ್ಟಿನಲ್ಲಿ ಈ ಪದ ಪ್ರಯೋಗ ಸಂಪೂರ್ಣ ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅದು ನಮ್ಮ ನಾಗರೀಕ ಸಮಾಜದ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳಿಗೆ ಪೂರಕವಾಗಿದ್ದರೆ ಮಾತ್ರ ಅದನ್ನು ಸ್ವೀಕರಿಸಬಹುದು. ಏಕೆಂದರೆ ಎಲ್ಲ ತತ್ವ ಸಿದ್ಧಾಂತಗಳಿಗಿಂತ ಮಾನವೀಯತೆಯೇ ಅತ್ಯಂತ ಶ್ರೇಷ್ಠ ಜೀವಪರ ನಿಲುವುಗಳನ್ನು ಹೊಂದಿರುತ್ತದೆ. ಸೈದ್ದಾಂತಿಕ, ಧಾರ್ಮಿಕ, ರಾಜಕೀಯ ಭಿನ್ನಾಭಿಪ್ರಾಯಗಳು ಈಗಿನ ಆಧುನಿಕ ಕಾಲದಲ್ಲಿ ಈ ಸಮಾಜವನ್ನು ಮತ್ತಷ್ಟು ನೆಮ್ಮದಿಯಿಂದ ದೂರ ತೆಗೆದುಕೊಂಡು ಹೋಗಲು ನಾವು ಬಿಡಬಾರದು.

ಏನೇ ಆಗಲಿ ಸದಾ ಶಾಂತಿ ಪ್ರೀತಿ ಸಹನೆಯತ್ತ ಎಲ್ಲರ ಮನಸ್ಸುಗಳು ಹರಿಯಲಿ. ಇರುವ ಜೀವನ ಸಮಯದಲ್ಲಿ ನೆಮ್ಮದಿಯಿಂದ, ತೃಪ್ತಿಯಿಂದ ಬದುಕೋಣ. ಇಂದಿನ ಸಂಘರ್ಷಮಯ ವಾತಾವರಣದಲ್ಲಿ ನಮ್ಮ ಸಂತೋಷದ ದಿನಗಳು ಬಹಳಷ್ಟು ಕಡಿಮೆಯಾಗುತ್ತಿವೆ. ಆ ನಗುವಿನ ದಿನಗಳು ಹೆಚ್ಚಾಗಲಿ ಅದಕ್ಕೆ ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳುವಳಿಯನ್ನು ಕಟ್ಟೋಣ ಎಂದು ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now