--Ads--

ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ

On: July 5, 2026 11:30 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ 

ಶಿಡ್ಲಘಟ್ಟ : ತಾಲ್ಲೂಕಿನ ಬಸವಾಪಟ್ಟಣ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ.)ಅವರ ವಿಶೇಷ ತಂಡ ಗುಪ್ತ ಮಾಹಿತಿ ಸಂಗ್ರಹಿಸಿ ದಿಢೀ‌ರ್ ದಾಳಿ ನಡೆಸಿ,7 ಮಂದಿಯನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣದ ಬಳಿ ಜೂಜಾಟದ ಅಡ್ಡೆಯಲ್ಲಿ ಪಣಕ್ಕೆ ಇಟ್ಟಿದ್ದ 2,02,800 ರೂ.ಗಳ ನಗದು, 7ಮೊಬೈಲ್‌ ಫೋನ್ ಹಾಗೂ 3 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಿದ ಮಾಲನ್ನು ಮುಂದಿನ ಕ್ರಮಕ್ಕಾಗಿ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಲಾಗಿದೆ.
ಬಂಧಿತರನ್ನು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಮನೋಜ್ (27),ಬಸವಾಪಟ್ಟಣದ ನಿಖಿಲ್ (31) ,
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಕೆ.ದೇವರಾಜ್(43),ಚಿಂತಾಮಣಿ ತಾಲ್ಲೂಕಿನ ಕೊನಂಪಲ್ಲಿಯ ಕೆ.ಆರ್‌.ಮಂಜುನಾಥರೆಡ್ಡಿ(46),
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಗುಟ್ಟಹಳ್ಳಿಯ ಕೆ.ಎಂ. ಮುನಿಕೃಷ್ಣ (53), ಗುಡಿಬಂಡೆ ತಾಲ್ಲೂಕಿನ ದಿನ್ನಹಳ್ಳಿಯ ಶ್ರೀನಿವಾಸ (27), ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಗೋವಿಂದಪ್ಪ(65),ಎಂದು ಗುರುತಿಸಲಾಗಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಶಾಸಕ ಬಿ.ಎನ್.ರವಿಕುಮಾ‌ರ್ ಅವರ ವೇತನದಿಂದ 9,600 ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಬುಕ್, ಲೇಖನ ಸಾಮಗ್ರಿ ವಿತರಣೆ

ದಲಿತರ ಧೋರಣೆ ,ಭ್ರಷ್ಟಾಚಾರ ಹಾಗೂ ಅಡಳಿತ ವೈಫಲ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ  ಜು-6ರಂದು ಧರಣಿ

ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಶಂಕೆಯಿಂದ ಸುಮಾರು 20 ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥ: ಆರೋಗ್ಯ ಅಧಿಕಾರಿಗಳ ಭೇಟಿ 

ಡಾ.ಬಿ.ಆ‌ರ್.ಅಂಬೇಡ್ಕರ್ ಜ್ಞಾನ ಅಕಾಡೆಮಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಪರಿಕರ ವಿತರಣೆ

ಪ್ರತಿಯೊಬ್ಬರು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾಗವಹಿಸಿ :ಆರ್ ಎಂ ಉಮೇಶ್ 

ವೀರಾಪುರ ರೈಲ್ವೆ ಅಂಡರ್‌ಪಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಸೂಚನೆ : ಶಾಸಕ ಬಿ.ಎನ್.ರವಿಕುಮಾ‌ರ್