--Ads--

ಶಿಕ್ಷಕರು, ವೈದ್ಯರು ಎಂದು ನಿವೃತ್ತರಾಗುವುದಿಲ್ಲ, ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು :-ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು

On: July 5, 2026 12:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ, ಹಳೆಯ ವಿದ್ಯಾರ್ಥಿಗಳ ಸಮ್ಮಿಲನ , ಎಲ್ ಬಿ.ರಾಜಪ್ಪ ಅಭಿನಂದನಾ ಕಾರ್ಯಕ್ರಮ

ಶಿಕ್ಷಕರು, ವೈದ್ಯರು ಎಂದು ನಿವೃತ್ತರಾಗುವುದಿಲ್ಲ, ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು :-ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು

ಬೆಂಗಳೂರು: ರಾಜಾಜಿನಗರ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ನಿವೃತ್ತ ದೃಹಿಕ ಶಿಕ್ಷಕ ಎಲ್.ಬಿ.ರಾಜಪ್ಪರವರಿಗೆ ಅಭಿನಂದನಾ ಸಮಾರಂಭ.

ಬೇಲಿಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು, ಶಾಸಕ ಎಸ್.ಸುರೇಶ್ ಕುಮಾರ್ , ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಸಂಘದ ಗೌರವಾಧ್ಯಕ್ಷ ಆರ್.ವಿ.ಹರೀಶ್, ಮಾಜಿ ಮಹಾಪೌರರು ಜೆ.ಹುಚ್ಚಪ್ಪ, ನಿವೃತ್ತ ದೃಹಿಕ ಶಿಕ್ಷಕ ಎಲ್.ಬಿ.ರಾಜಪ್ಪ, ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳಾದ ಎಸ್.ಕೇಶವಮೂರ್ತಿ,
ಜಿ.ಕೃಷ್ಣಮೂರ್ತಿ, ಮೋಹನ್ ಕುಮಾರ್ ಹಳೆಯ ವಿದ್ಯಾರ್ಥಿಗಳ ಸಂಘದ ಮಂಜುನಾಥ್, ಅಶೋಕರಾವ್, ಟಿ.ಹೆಚ್.ರಾಜು, ರಮೇಶ್ ಉಮೇಶ್ ರವರು
ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿಗಳಾದ ಈಶ್ವರಪ್ಪ, ವಿರುಪಾಕ್ಷಪ್ಪ, ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ದೊಡ್ಡಣ್ಣ, ಡಾ.ಪ್ರಮೋದ್ ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮೀಗಳು ರವರು ಮಾತನಾಡಿ ಹಳೆಯ ವಿದ್ಯಾರ್ಥಿಗಳು ಎಂದು ಹಳಬರ ಆಗುವುದಿಲ್ಲ, ಹಿರಿಯ ವಿದ್ಯಾರ್ಥಿಗಳು ಎಂದು ಹೇಳಬಹುದು.

ಎಲ್.ಬಿ.ರಾಜಪ್ಪರವರು ದೃಹಿಕ ಶಿಕ್ಷಣದಲ್ಲಿ ಉತ್ತಮ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ನಿವೃತ್ತ ಶಿಕ್ಷಕರು ಎಂದು ಹೇಳಿಕೊಳ್ಳಬಾರದು. ವೈದ್ಯರು, ಶಿಕ್ಷಕರು ಎಂದು ನಿವೃತ್ತರಾಗುವುದಿಲ್ಲ. ಅವರ ಶಾಲೆಯಿಂದ ನಿವೃತ್ತಿ ನಂತರವು ಮಕ್ಕಳಿಗೆ ಪಾಠ ಮಾಡಬಹುದು.

ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು. ನಾವು ಮಕ್ಕಳಾಗಿ ಸೇರಲು ಉತ್ತಮ ಅವಕಾಶ ಸಿಗುವುದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವಾಗಿದೆ. ಅಕ್ಷರ ಜೊತೆಯಲ್ಲಿ ಸಂಸ್ಕಾರ ಕಲಿಸಬೇಕು. ಶಿಕ್ಷಣದಲ್ಲಿ ಹೊಸ ವಿದ್ಯಾಭ್ಯಾಸದ ವ್ಯವಸ್ಥೆ ತರಬೇಕು ಎಂದು ಹೇಳಿದರು.

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಎಲ್ ಬಿ.ರಾಜಪ್ಪರವರು ದೃಹಿಕ ಶಿಕ್ಷಕರಾಗಿ 35ವರ್ಷ ಸೇವೆ ಸಲ್ಲಿಸಿದ್ದಾರೆ ಅವರ ಹತ್ತಿರ ಕಲಿತು ನೂರಾರು ವಿದ್ಯಾರ್ಥಿಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಚದ ಕ್ರೀಡಾಪಟುಗಳಾಗಿ ರೂಪಗೊಂಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಸ್ನೇಹ ಸಂಪಾದಿಸಿರುವ ಎಲ್.ಬಿ.ರಾಜಪ್ಪ ರವರ ಸೇವೆ ಸ್ಮರಣಿಯ.

ಬಸವೇಶ್ವರ ಸಹಕಾರ ಸಂಘದಲ್ಲಿ ನಮಗೆ ಜಾಗ ಕೊಟ್ಟಿರುವ ಕಾರಣದಿಂದ ವಿಕಸನ ಉಚಿತ ಟ್ಯೂಶನ್ ನಡೆಸಿದ ಪ್ರತಿಫಲದಿಂದ 4500ಸಾವಿರ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಕಾರಣವಾಯಿತು.

ಶಿಕ್ಷಕರಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ, ನಮ್ಮ ತಾಯಿಯವರು ಸಹ ಶಿಕ್ಷಕಿಯಾಗಿದ್ದರು. ಇಂದು ಸಹ ನನ್ನನು ಶಿಕ್ಷಕಿಯ ಮಗ ಎಂದು ಗುರುತಿಸುತ್ತಾರೆ.

ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ರವರು ಮಾತನಾಡಿ ಬಸವೇಶ್ವರ ಸಹಕಾರ ಸಂಘ ಗ್ಯಾರೇಜ್ ನಲ್ಲಿ ಆರಂಭವಾದ ಶಾಲೆ ಇಂದು ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳದಿದೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದಿಂದ ಬಂದು ನೆಲಸಿರುವ ಸಂಖ್ಯೆ ಹೆಚ್ಚು ಇದೆ. ವಿದ್ಯಾರ್ಥಿಗಳು ಹಳಬರು ಆಗುವುದಿಲ್ಲ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳೆ ಅವರು ಬೆಳಯುತ್ತಾರೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವಿಕಾಸ ಸೌಧದಲ್ಲಿ  ನಡೆದ ಕೆ ಆರ್ ಎಸ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ 

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ