ವಿಜಯ ದರ್ಪಣ ನ್ಯೂಸ್….
ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಯುವಜನರ ಜವಾಬ್ದಾರಿಗಳು ಕುರಿತು ಸಂವಾದ ನಡೆಸಿದ ದರ್ಶನ್ ಧ್ರುವನಾರಾಯಣ್

ತಾಂಡವಪುರ ಜುಲೈ 9 : ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಯುವಜನರ ಜವಾಬ್ದಾರಿಗಳು ಕುರಿತು ಸಂವಾದ ನಡೆಸಿದ ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಪ್ರಜಾಪ್ರಭುತ್ವದಲ್ಲಿ ಯುವ ಜನತೆಯ ಜವಾಬ್ದಾರಿಗಳನ್ನು ಕುರಿತು ಗಂಭೀರವಾದ ಸಂವಾದವನ್ನು ನಡೆಸಿದರು.
ಅವರು ಇಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಯಂಗ್ ಕರ್ನಾಟಕ ವಿಧಾನಸಭೆ ಸಚಿವಾಲಯ ಹಾಗೂ ಯಂಗ್ ಇಂಡಿಯನ್ಸ್ ಬೆಂಗಳೂರು ಆಯೋಜಿಸಿದ್ದ ‘ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ (YIP)–2026’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾರ್ಥಿ ಮಿತ್ರರೊಂದಿಗೆ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವ ನಾಯಕತ್ವದ ಪಾತ್ರ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಯುವಜನರ ಜವಾಬ್ದಾರಿಗಳು ಕುರಿತು ಸಂವಾದ ನಡೆಸಿದ ಶಾಸಕರು
ಭಾರತವು ವಿಶ್ವದ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ದೇಶದ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಕೇವಲ ಭವಿಷ್ಯದ ನಾಯಕರು ಮಾತ್ರವಲ್ಲ, ಇಂದಿನ ಸಮಾಜದಲ್ಲಿ ಬದಲಾವಣೆಯನ್ನು ತರಬಲ್ಲ ಶಕ್ತಿಯೂ ಹೌದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು, ಸಂವಿಧಾನದ ಆಶಯಗಳನ್ನು ಅಳವಡಿಸಿಕೊಂಡು, ಸಮಾಜಮುಖಿ ಚಿಂತನೆಯೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯುವ ನಾಯಕತ್ವ ಇಂದು ಅಗತ್ಯವಾಗಿದೆ. ಎಂದು ಸಂವಾದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿರು.
ಈ ಸಂದರ್ಭದಲ್ಲಿ MLC ಕೆ. ಎಸ್ ನವೀನ್ , ಅಧ್ಯಕ್ಷ ಹರೀಶ್ , ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು.









