ವಿಜಯ ದರ್ಪಣ ನ್ಯೂಸ್….
ಮತದಾನದಿಂದ ಯಾರು ಕೂಡ ವಂಚಿತ ಆಗಬಾರದು
ಎಸ್ಐಆರ್ಗೆ ಅಗತ್ಯ ಮಾಹಿತಿ ನೀಡಿ :ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸೂಚನೆ

ತಾಂಡವಪುರ ಜುಲೈ ಏಳು: ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬಿಳಿಗೆರೆ, ವರುಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬೂತ್ ಮಟ್ಟದ ಸಭೆ ನಡೆಸಿ ಮತದಾನದಿಂದ ಯಾರೂ ಕೂಡ ಉಚಿತ ಆಗದಂತೆ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಬಿ ಎಲ್ ಓ ಗಳು ಮನೆ ಮನೆಗೆ ಬರುತ್ತಿದ್ದು ನೀವು ಅಗತ್ಯ ಮಾಹಿತಿ ನೀಡಿ ಮತರಪಟ್ಟಿಗೆ ಸೇರ್ಪಡೆಸಿ ಎಂದು ನಗರ ಅಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ರಾಮಯ್ಯ ಸೂಚನೆ ನೀಡಿದರು
ಇಂದು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಪಕ್ಷದ ಕಾರ್ಯಕರ್ತರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಗತ್ಯ ಬದಲಾವಣೆಗಳನ್ನು ನಿಯಮಾನುಸಾರ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅರಿವು ಮೂಡಿಸುವಂತೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಸಮರ್ಪಕವಾಗಿ ಚಲಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.
ಎಸ್ಐಆರ್ ಎಂದರೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಾಗಿದೆ. ನಿಮ್ಮ ಮನೆಯ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ನಿಮ್ಮ ಹೆಸರು, ವಿಳಾಸ, ವಯಸ್ಸು ಮತ್ತು ಅಗತ್ಯ ದಾಖಲೆಗಳ ನಿಖರವಾದ ವಿವರಗಳನ್ನು ನೀಡಿ, ನಿಮ್ಮ ಮತದಾನದ ಹಕ್ಕನ್ನು ಖಚಿತ ಪಡಿಸಿಕೊಳ್ಳಲು ಈ ಪ್ರಕ್ರಿಯೆ ಚುನಾವಣಾ ಆಯೋಗದಿಂದ ನಡೆಸಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಈ ಪ್ರಕ್ರಿಯೆಯ ಬಗ್ಗೆ ಯಾವುದೇ ಗೊಂದಲಗಳಿಗೆ ಒಳಗಾಗದೆ, ಅಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನು ಒದಗಿಸಿ.ನೀವು ಹೊಸದಾಗಿ ಮತದಾರರ ಪಟ್ಟಿಗೆ ಸೇರಲು, ತಿದ್ದುಪಡಿ ಮಾಡಲು ಅಥವಾ ಹೆಸರು ತೆಗೆದುಹಾಕಲು ಇದು ಸಹಕಾರಿಯಾಗಲಿದ್ದು, ಮತದಾರರ ಪಟ್ಟಿಯಲ್ಲಿರುವ ನಿಮ್ಮ ಸರಿಯಾದ ಹೆಸರು, ನೀವು ಪ್ರಸ್ತುತ ವಾಸಿಸುತ್ತಿರುವ ಸ್ಥಳದ ಸಂಪೂರ್ಣ ವಿಳಾಸ, ವಯಸ್ಸು, ೧೮ ವರ್ಷಕ್ಕಿಂತ ಮೇಲ್ಪಟ್ಟವರು ಎಂದು ದೃಢೀಕರಿಸುವ ದಾಖಲೆಗಳು, ಪ್ರಸ್ತುತ ಚಾಲ್ತಿಯಲ್ಲಿರುವ ನಿಮ್ಮ ಫೋನ್ ಸಂಖ್ಯೆ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ ವೋಟರ್ ಐಡಿ, ಜಾತಿ ಪ್ರಮಾಣ ಪತ್ರ ಮತ್ತು ವಾಸಸ್ಥಳ ಧೃಢೀಕರಣದಂತಹ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸುವ ಮೂಲಕ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ತಹಶೀಲ್ದಾರ್ ಮಹೇಶ್, ನಂಜನಗೂಡು ತಾಲೂಕು ದಂಡಾಧಿಕಾರಿ ಸ್ಮಿತಾ ರಾಮನ್ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಜರಾಲ್ಡ್ ರಾಜೇಶ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುದ್ದು ರಾಮೇಗೌಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ವಕೀಲರರಾದ ಎಮ್ ಸೀ ಹುಂಡಿ ಶಿವಪ್ರಸಾದ್ ಸಕಳ್ಳಿ ಬಸವರಾಜು ಬೊಗತ್ಗಳ್ಳಿ ಮಣಿ ವರುಣ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ ರಾಯನ ಹುಂಡಿ ರವಿ ಬಿರಿಗೆರೆ ಗುಂಡಪ್ಪ ಜಯಶೀಲ ನಂಜುಂಡೇಗೌಡ ವರಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ ಕೆ ಎಸ್ ಹುಂಡಿ ರವಿ ಸಜ್ಜೆ ಹುಂಡಿ ರವಿ ಕುಮಾರ್, ವರಕೋಡು ಉಮೇಶ್, ವರುಣ ಚಿಕ್ಕದೇವಯ್ಯ, ಚೋರ್ನಳ್ಳಿ ರಾಜು, ಚಿಕ್ಕಳ್ಳಿ ವೆಂಕಟೇಶ್, ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕೆ ಎಸ್ ಹುಂಡಿ ರವಿ, ಪಾಪಣ್ಣ ಕಿರಾಳು ಸಂತೋಷ್, ಸಿದ್ದರಾಮ ಹುಂಡಿ. ಸಿದ್ದರಾಮ, ಹೊಸಳ್ಳಿ ಶೇಖರ, ಬಸವರಾಜು, ಬಲರಾಮ, ಕುಮಾರ, ಪ್ರಭಾಕರ್, ರಾಜಮಹದೇವ್, ಪಿಳ್ಳಳ್ಳಿ ಶಿವಕುಮಾರ್, ಹೊಸಳ್ಳಿ ಕುಮಾರ್, ರಾಮಣ್ಣ, ವರುಣ ಹಾಗೂ ಸುತ್ತಮುತ್ತ ಗ್ರಾಮಗಳ ಮುಖಂಡರು ಹಾಜರಿದ್ದರು.











