ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸಮುದಾಯ ಭವನಗಳ ಮುಂದುವರಿದ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್
ತಾಂಡವಪುರ ಜುಲೈ 6ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀ ಬಸವ ಭವನ, ಶ್ರೀ ಈಡಿಗ ಸಮುದಾಯ ಭವನ, ಶ್ರೀ ಮಡಿವಾಳ ಸಮುದಾಯ ಭವನ, ಶ್ರೀ ಒಕ್ಕಲಿಗ ಸಮುದಾಯ ಭವನ, ಸವಿತಾ ಸಮುದಾಯ ಭವನ, ಶ್ರೀ ಕುಂಬಾರ ಸಮುದಾಯ ಭವನ, ಬಾಬು ಜಗಜೀವನ್ ರಾಮ್ ಸಮುದಾಯ ಭವನ ಹಾಗೂ ಭೋವಿ ಸಮುದಾಯ ಭವನಗಳ ಮುಂದುವರಿದ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಪರಿಶೀಲಿಸಿದರು
ಇಂದು ಶಾಸಕರು ಸಮುದಾಯ ಭವನಗಳ ಪ್ರಗತಿ ಮತ್ತು ಸ್ಥಿತಿಗತಿಗಳ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಗಳು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು
ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದ್ದು, ಈ ದಿಸೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಂಜನಗೂಡು ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ನಾಗೇಶ್ ರಾಜ್ ನರಸಿಂಹ ಸ್ವಾಮಿ , ಶಿವಪ್ಪ ದೇವರು , ಕಡಜಟ್ಟಿ ಮಹೇಶ್ , ಶಿವನಾಗಪ್ಪ , ಗಣೇಶ್ , ಕೃಷ್ಣಪ್ಪ , ಮಂಜುನಾಥ್ , ಅಭಿನಂದನ್ ಚಂದನ್ , ಸತೀಶ್ ಗೌಡ ಶಿವಣ್ಣ ಮರೀಶೆಟ್ಟಿ ಪ್ರಕಾಶ್ ಗಿರೀಶ್ , ಪ್ರಸನ್ನ , ದೇವರಾಜ್ , ಕುಮಾರ್ , ಪುಟ್ಟಸ್ವಾಮಿ , ಅರೂರಪ್ಪ , ಶ್ರೀನಿವಾಸ್ ಪಾಪಣ್ಣ , ಬಾಲಾಜಿ , ಕಗ್ಗಲೀಹುಂಡಿ ಮಹದೇವು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಮುಂತಾದವರು ಹಾಜರಿದ್ದರು