ವಿಜಯ ದರ್ಪಣ ನ್ಯೂಸ್…..
ಕುರುಹಿನಶೆಟ್ಟಿ ಕೇಂದ್ರ ಸಂಘ ನೂತನವಾಗಿ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಮತ್ತು ಸಾಕಮ್ಮ ಭವನ ಭೂಮಿಪೂಜೆ

ಬೆಂಗಳೂರು: ವಿ.ವಿ.ಪುರಂನಲ್ಲಿರುವ ಕುರುಹಿನಶೆಟ್ಟಿ ಕೇಂದ್ರ ಸಂಘ ನೂತನವಾಗಿ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಮತ್ತು ಸಾಕಮ್ಮ ಭವನ ಭೂಮಿ ಪೂಜೆ
ದಿವ್ಯ ಸಾನಿಧ್ಯವನ್ನು ಕುರುಹಿನ ಶೆಟ್ಟಿ ಸಮಾಜದ ಬೇಟಗೇರಿ, ಗದಗ್ ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು, ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ವೀರಭಿಕ್ಷಾವರ್ತಿ ನೀಲಕಂಠ ಮಠ ಹುಬ್ಬಳ್ಳಿ ರವರು. ಭೂಮಿ ಪೂಜೆಯನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿಸೂರ್ಯ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಶಾಸಕ ಉದಯ್ ಗರುಡಾಚಾರ್, ವಿಧಾನಪರಿಷತ್ ಸದಸ್ಯರಾದ ಕೇಶವಪ್ರಸಾದ್, ಟಿ.ಎ.ಶರವಣ, ಅಧ್ಯಕ್ಷ ಬಿ.ಲಿಂಗೇಶ್ವರ್ , ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ರೂಪಲಿಂಗೇಶ್ವರ್ ರವರು ಭೂಮಿ ಪೂಜೆ ನೇರವೆರಿಸಿದರು.

ಸಚಿವ ರಾಮಲಿಂಗಾರೆಡ್ಡಿರವರು ಮಾತನಾಡಿ ಕುರುಹಿನಶೆಟ್ಟಿ ಕೇಂದ್ರ 98 ವರ್ಷದ ಇತಿಹಾಸವಿದೆ ಮತ್ತು ಸಾಕಮ್ಮನವರು ಈ ಜಾಗ ಕೊಡುಗೆಯಾಗಿ ನೀಡಿದ್ದಾರೆ.
ಅತಿ ಸಣ್ಣ ಸಮುದಾಯ 16ಲಕ್ಷ ಜನಸಂಖ್ಯೆ ಇದೆ ಕಷ್ಟಪಟ್ಟು ಕೆಲಸ ಮಾಡುವ ಕಾಯಕ ಸಮುದಾಯ.
ಹೆಣ್ಣು ಮಕ್ಕಳ ಹಾಸ್ಟಲ್ ಮಾಡಿ ವಿದ್ಯಾರ್ಥಿನಿಯರು ಬಹಳ ಕಷ್ಟ ಬರುತ್ತಾರೆ. ಕುರುಹಿನಶೆಟ್ಟಿ ಕೇಂದ್ರ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು.
ಕುರುಹಿನಶೆಟ್ಟಿ ಸಮುದಾಯಕ್ಕೆ 2ಎಕರೆ ಭೂಮಿಯನ್ನು ಹೊಸಕೋಟೆ ಜಾಗ ನೀಡಲಾಗಿದೆ 1ಕೋಟಿ ಸಹಾಯ ಧನ ಸರ್ಕಾರ ನೀಡಿದ್ದಾರೆ ಇನ್ನು ಹೆಚ್ಚಿನ ಸಹಕಾರ ನೀಲಾಗುವುದು
ಸಂಸದ ತೇಜಸ್ವಿ ಸೂರ್ಯ ಮಾತನಾಡಿ ನಮ್ಮ ಊರು ಚಿಕ್ಕಮಗಳೂರುನಲ್ಲಿ ನಮ್ಮ ಮನೆ ಸುತ್ತಮುತ್ತ ಕುರುಹಿನಶೆಟ್ಟಿ ಸಮಾಜದವರ ಜೊತೆಯಲ್ಲಿ ಹಬ್ಬ ಅಚರಣೆ ಮಾಡಲಾಗುತ್ತಿದೆ.ಲೋಕಸಭಾ ಸದಸ್ಯರ ಅನುದಾನದಲ್ಲಿ ನಾನು ವಿದ್ಯಾರ್ಥಿ ನಿಲಯಕ್ಕೆ ನೀಡುತ್ತೇನೆ.
ಜನರ ಗೌರವಸ ಮಾನಕ್ಕೆ ಬಟ್ಚೆ ಕೊಟ್ಟ ಸಮಾಜ ಕುರುಹಿನಶೆಟ್ಟಿ ಸಮಾಜ. ಯೋಜನೆಗಳು ತಲುಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಕುರುಹಿನಶೆಟ್ಟಿ ಸಮಾಜ ಜೊತೆಯಲ್ಲಿ ಇದೆ.
ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡಡಿರುವುದು ನೇಕಾರಿಕೆ ಉದ್ಯಮ. ನಮ್ಮ ತಂದೆಯವರು ಹಾಸ್ಟಲ್ ನಲ್ಲಿ ಪದವಿಗಳಿಸಿದರು, ಕುರುಹಿನಶೆಟ್ಟಿ ವಿದ್ಯಾರ್ಥಿ ನಿಲಯ ದಿಂದ ಅನುಕೂಲವಾಗಲಿದೆ.
ಕೇಶವಪ್ರಸಾದ್ ಮಾತನಾಡಿ ಕುರುಹಿನಶೆಟ್ಟಿ ಸಮಾಜ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಕಟ್ಚಡ ನಿರ್ಮಾಣ ನನ್ನ ವಿಧಾನಪರಿಷತ್ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಎಂದು ಹೇಳಿದರು.
ಕುಸುಮಾ ಹನುಮಂತರಾಯಪ್ಪ ತಾಯಿ ಸಾಕಮ್ಮರವರ ಆಶೀರ್ವಾದ ಎಲ್ಲರ ಮೇಲೆ ಇರಲಿ. ಮನುಷ್ಯ ಗೌರವಯುತ ಜೀವನ ಮಾಡಲು ಅನ್ನ, ಅರಿವೆ , ಆಶ್ರಯ ಉದ್ಯೋಗ ಮುಖ್ಯ.ಹಣ ಮುಖ್ಯವಲ್ಲ ಶಿಕ್ಷಣ ಮುಖ್ಯ.
ಸಮಾಜದ ವಿದ್ಯಾರ್ಥಿಗಳ ಅನುಕೂಲಕ್ಕೆ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡುತ್ತಿರುವುದು ಉತ್ತಮ ಕಾರ್ಯ.ಕುರುಹಿನಶೆಟ್ಟಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದರು.
ಅಧ್ಯಕ್ಷ ಬಿ.ಲಿಂಗೇಶ್ವರ್ ಮಾತನಾಡಿ ಕುರುಹಿನಶೆಟ್ಟಿ ಕೇಂದ್ರ ಸಂಘ ಸ್ಥಾಪನೆಯಾಗಿ 98ವರ್ಷಗಳು ಸಂದಿದೆ. ನಮ್ಮ ಸಮಾಜದ ಸಾಕಮ್ಮರವರು ಕೊಡಗೆಯಾಗಿ ಕೊಟ್ಟ ಜಾಗವಿದು. ಅತ್ಯಂತ ಹಳೆಯ ಕಟ್ಟಡವಾಗಿದ್ದು. ನೂತನ ಕಟ್ಟಡ ಕಟ್ಟಲಿದ್ದುಅಂದಾಜು 13ಕೋಟಿ ವೆಚ್ಚವಾಗಲಿದೆ. 250ವಿದ್ಯಾರ್ಥಿಗಳು ಹಾಸ್ಟಲ್ ನಲ್ಲಿ ಇರಬಹುದು ಮತ್ತು ಶತಮಾನ ಸಂಭ್ರಮದಲ್ಲಿ ಕಟ್ಟಡ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರವರು ಆಗಮಿಸಿ ಶುಭ ಕೋರಿ, ಸಂಘದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದರು









