ವಿಜಯ ದರ್ಪಣ ನ್ಯೂಸ್……
ಅಭಿವೃದ್ಧಿ ಪರ ಮತ್ತು ಜನಪರವಾದ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು : ಮಲ್ಲಿಕಾರ್ಜುನ ದೇವರು

ಬೆಂಗಳೂರು : ಜುಲೈ 10 :ವೀರಶೈವ ವಿಚಾರ ವೇದಿಕೆ ಟ್ರಸ್ಟ್ (ರಿ )ವತಿಯಿಂದ ಮಾಸಿಕ 292 ಕಾರ್ಯಕ್ರಮ ಹಾಗೂ ಪತ್ರಿಕಾ ದಿನ ಆಚರಣೆ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು
ಮ|| ನಿ॥ ಪ್ರ|| ಶ್ರೀ ಮಲ್ಲಿಕಾರ್ಜುನ ದೇವರು ಸ್ವಾಮಿಗಳು
ಪೀಠಾಧ್ಯಕ್ಷರು, ಶ್ರೀ ಸರ್ಪಭೂಷಣ ಮಠ, ಬೆಂಗಳೂರು ಶ್ರೀ ದೊಡ್ಡಮಠ, ಅರಕಲಗೂಡು, ಹಾಸನ ಜಿಲ್ಲೆ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಮಲ್ಲಿಕಾರ್ಜುನ ದೇವರು ಸ್ವಾಮಿಗಳು ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿಗೆ ಪೂರಕವಾದ ಶಕ್ತಿಯಾಗಿದೆ.ಜೊತೆಗೆ ನಿಷ್ಪಕ್ಷಪಾತ ಹಾಗೂ ಜವಾಬ್ದಾರಿಯುತ ವರದಿಗಾರಿಕೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಭಿವೃದ್ಧಿ ಪರ ಮತ್ತು ಜನಪರವಾದ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ ಸಮಾಜದ ಪ್ರಗತಿಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಿಕಾ ದಿನಾಚರಣೆ ಕೇವಲ ಆಚರಣೆಯಲ್ಲ, ಸಮಾಜಕ್ಕಾಗಿ ದುಡಿಯುವ ಪತ್ರಕರ್ತರ ಸೇವೆಯನ್ನು ಗೌರವಿಸುವ ದಿನವಾಗಿದೆ. ಪತ್ರಕರ್ತರು ಸಮಾಜದ ಹಿತದೃಷ್ಟಿಯಿಂದ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು.
ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಪತ್ರಕರ್ತನ ಹೊಣೆಗಾರಿಕೆಯಾಗಿದೆ. ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಜವಾಬ್ದಾರಿಯನ್ನು ಪತ್ರಕರ್ತರು ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಚಂದ್ರಶೇಖರ್ ಯಲಬುರ್ತಿ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು

ಇದೇ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮಾತನಾಡಿದ ಗಣ್ಯರು ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ನಾಡಿನ ಜನರ ದನಿಯಾಗಿ ಕೆಲಸ
ಮಾಡುತ್ತಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಆರ್. ಮಹಿಳಾ ಕಾಲೇಜು ರಾಜಾಜಿನಗರ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ|| ಕುಸುಮ ಆವರು ಕರ್ನಾಟಕ ಗಾಂಧಿ ಅಂ॥ ಹರ್ಡೇಕರ್ ಮಂಜಪ್ಪ ಅವರ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮ|| ನಿ॥ ಪ್ರ|| ಶ್ರೀ ಮಲ್ಲಿಕಾರ್ಜುನ ದೇವರು ಸ್ವಾಮಿಗಳು ಪೀಠಾಧ್ಯಕ್ಷರು, ಶ್ರೀ ಸರ್ಪಭೂಷಣ ಮಠ, ಬೆಂಗಳೂರು, ವೀರಶೈವ ವಿಚಾರ ವೇದಿಕೆ ಟ್ರಸ್ಟ್
ಅಧ್ಯಕ್ಷ ರೇಣುಕಾ ಪ್ರಸಾದ್, ಎಸ್.ಜೆ.ಆರ್. ಮಹಿಳಾ ಕಾಲೇಜು ರಾಜಾಜಿನಗರ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ|| ಕುಸುಮ, ಪತ್ರಕರ್ತ ಚಂದ್ರಶೇಖರ ಯಲಬುರ್ತಿ, ಹೈಕೋರ್ಟ್ ಲಾಯರ್ ಪುಟ್ಟಸಿದ್ದಯ್ಯ, ನಿವೃತ್ತ ಕಾರ್ಯದರ್ಶಿ ಪಟ್ಟಣಶೆಟ್ಟಿ ವೀರಶೈವ ವಿಚಾರ ವೇದಿಕೆ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.










