ವಿಜಯ ದರ್ಪಣ ನ್ಯೂಸ್….
ಚಾಮುಂಡಿ ಬೆಟ್ಟದ ಆಷಾಢ ಶುಕ್ರವಾರಕ್ಕೆ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ.

ತಾಂಡವಪುರ ಜುಲೈ 14 ಆಷಾಢ ಮಾಸದ ಪ್ರಯುಕ್ತಶುಕ್ರವಾರ ಚಾಮುಂಡೇಶ್ವರಿ ವರ್ಧಂತಿ ದಿನದಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಅವರು ಇಂದು ಚಾಮುಂಡಿ ಬೆಟ್ಟದಲ್ಲಿ ಅಷಾಢ ಮಾಸದ ಶುಕ್ರವಾರಗಳು ಮತ್ತು ಅಮ್ಮನವರ ಜನ್ನೋತ್ಸವದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜುಲೈ17, 24, 31, ಆಗಸ್ಟ್ 7 ರಂದು 4 ಅಷಾಢ ಶುಕ್ರವಾರ ಹಾಗೂ ಅಗಸ್ಟ್ 4 ರಂದು ಅಮ್ಮನವರ ವರ್ಧಂತಿ ಜರುಗಲಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು
ಬೆಳಿಗ್ಗೆ 6.30 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ
ಅಷಾಢದ 4 ಶುಕ್ರವಾರ, ಶನಿವಾರ, ಭಾನುವಾರದಂದು ಲಲಿತ ಮಹಲ್ ಹೆಲಿಪ್ಯಾಡ್ ಹಾಗೂ ಕೆ.ಎಸ್.ಆರ್.ಟಿಸಿ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಕ್ಕೆ ಬಸ್ ಸಂಚಾರ ಆರಂಭವಾಗಲಿದೆ, ರಾತ್ರಿ 8.30 ಗಂಟೆಗೆ ಕೊನೆಯಾಗಲಿದೆ ಎಂದರು.
ಬೆಟ್ಟದ ಪಾದದಿಂದ ಕಾಲ್ನಡಿಗೆಯಲ್ಲಿ ಬರುವವರಿಗೆ ಬೆಟ್ಟದ ಪಾದದಿಂದ ಬೆಳಿಗ್ಗೆ 5 ಗಂಟೆಯ ನಂತರ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರು ಬೆಳಿಗ್ಗೆ 5 ಗಂಟೆಯ ಮೊದಲೇ ಬಂದು ಕಾಯುವುದು ಬೇಡ ಎಂದರು.
ಬೆಟ್ಟದ ಮೇಲೆ ಚಪ್ಪಲಿ ಸ್ಟಾಂಡ್ ವ್ಯವಸ್ಥೆ ಇರುವುದಿಲ್ಲ
ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳಿಗೆ ಲಲಿತ ಮಹಲ್ ಹ್ಯಾಲಿಪ್ಯಡ್ ನಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಚಪ್ಪಲಿ ಸ್ಟಾಂಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವುದು. ಚಾಮುಂಡಿ ಬೆಟ್ಟದಲ್ಲಿ ಯಾವುದೇ ಚಪ್ಪಲಿ ಸ್ಯಾಂಡ್ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಶಿಷ್ಟಾಚಾರದಡಿ ಬರುವ ಗಣ್ಯರಿಗೆ ಬೆಳಿಗ್ಗೆ 10 ರವರೆಗೆ ದರ್ಶನಕ್ಕೆ ಅವಕಾಶ
ಶಿಷ್ಠಾಚಾರದಡಿ ಬರುವ ಗಣ್ಯರಿಗೆ, ವಿ.ಐ.ಪಿ ಗಳಿಗೆ ಬೆಳಿಗ್ಗೆ 5.30 ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ಗಂಟೆಯ ನಂತರ ಎಲ್ಲಾ ಗಣ್ಯರ ವಾಹನಗಳ ಪ್ರವೇಶವನ್ನು ಚಾಮುಂಡಿ ಬೆಟ್ಟಕ್ಕೆ ನಿರ್ಭಂದಿಸಲಾವುದು ಎಂದರು.
ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ
ಅಷಾಢ ಮಾಸದ ಶುಕ್ರವಾರ, ಚಾಮುಂಡೇಶ್ವರಿ ವರ್ಧಂತಿ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ. ಡ್ಯೂಟಿ ಪಾಸ್ ಇರುವ ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ ಎಂದರು.
ಕಂಟ್ರೋಲ್ ರೂಂ ಸ್ಥಾಪನೆ
ಸಾರ್ವಜನಿಕ ದರ್ಶನ, 2000 ರೂ ದರ್ಶನದ ಸರದಿ ಸಾಲುಗಳ ಬಗ್ಗೆ ನಿಗಾ ವಹಿಸಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಕಂಟ್ರೋಲ್ ರೂಂ ತೆರೆಯಲಾಗುವುದು. ಮೈಸೂರು ನಗರ ಪೊಲೀಸ್ ಉಪ ಆಯುಕ್ತೆ, ಕೆ.ಎಸ್.ಆರ್.ಟಿ.ಸಿ ನಗರ ವಿಭಾಗದ ಜಿಲ್ಲಾ ನಿಯಂತ್ರಣಾಧಿಕಾರಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ 3 ಅಧಿಕಾರಿಗಳನ್ನೊಳಗೊಂಡ ತಂಡ ಕಂಟ್ರೋಲ್ ರೂಂ ನಲ್ಲಿ ಕಾರ್ಯನಿರ್ವಹಿಸಲಿದೆ.
ಅಧಿಕಾರಿಗಳ ತಂಡವು ಸರದಿ ಸಾಲಿನಲ್ಲಿ ಯಾವುದೇ ನೂಕು ನುಗ್ಗಲು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ರೂ 2000 ಟಿಕೇಟ್ ನ ಸಾಲಿನಲ್ಲಿ ಟಿಕೇಟ್ ಇಲ್ಲದೇ ಇರುವವರು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಅಲಲ್ಲಿ ದರ್ಶನಕ್ಕೆ ಬೇಕಾಗುವ ಅಂದಾಜು ವೇಳೆ ಕುರಿತು ಸಾರ್ವಜನಿಕರಿಗೆ ತಿಳಿಯುವಂತೆ ಮಾಹಿತಿ ಪಲಕವನ್ನು ಅನಾವರಣ ಮಾಡಿ ಎಂದರು.
ಅಗತ್ಯವಿರುವ ಕಡೆ ಮೊಬೈಲ್ ಶೌಚಾಲಯಗಳು, ಕಸದ ಬುಟ್ಟಿ ಇಡುವ ವ್ಯವಸ್ಥೆ ಯಾಗಬೇಕು. ಸರತಿ ಸಾಲಿನಲ್ಲಿ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ನಗರ ಪೊಲೀಸ್ ಉಪ ಆಯುಕ್ತೆ ಹರ್ಷ ಪ್ರಿಯಾವರ್ಧನ, ಡಿ.ಸಿಪಿ ಸುಂದರ್ ರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಗೂ ಮುಂತಾದವರು ಹಾಜರಿದ್ದರು











