ವಿಜಯ ದರ್ಪಣ ನ್ಯೂಸ್….
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೇರಾ ಯುವ ಭಾರತ್ ನ ಪ್ರಥಮ ಸಲಹಾ ಸಮಿತಿ ಸಭೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜುಲೈ 20:
ಯುವ ಸಬಲೀಕರಣ ರಾಷ್ಟ್ರದ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿ ಅವಶ್ಯವಿದ್ದು, ಎಲ್ಲಾ ಇಲಾಖೆಗಳು ಮೈ ಭಾರತ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು
ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮೇರಾ ಯುವ ಭಾರತ್ ವತಿಯಿಂದ ಆಯೋಜಿಸಲಾದ ಪ್ರಥಮ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಯುವಜನರಿಗೆ ಶಿಕ್ಷಣ, ಕೌಶಲ್ಯ, ಕ್ರೀಡೆ, ಸಾಂಸ್ಕೃತಿ ಹಾಗೂ ವೃತ್ತಿಪರ ತರಬೇತಿಯ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಯುವಜನತೆಗೆ ತಲುಪಿಸುವ ಉದ್ದೇಶವಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೇರಾ ಯುವ ಭಾರತ್ ನ ಜಿಲ್ಲಾ ಯುವ ಅಧಿಕಾರಿ ಅರುಣಿಮಾ ಮಾತನಾಡಿ, ಯುವಜನರ ಆಂತರಿಕ ಸಾಮರ್ಥ್ಯವನ್ನು ಅಬಿವೃದ್ಧಿಗೊಳಿಸಲು ಹಾಗೂ ಅವರಿಗೆ ಆಸಕ್ತ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು ಮೇರಾ ಯುವ ಭಾರತ್ ನ ಉದ್ದೇಶವಾಗಿದೆ. ಜಿಲ್ಲೆಯಲ್ಲಿರುವ 15 ರಿಂದ 29 ವಯಸ್ಸಿನ ವರು ಮೇರಾ ಯುವಭಾರತ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಇಲಾಖೆಗಳ ಉಪ ನಿರ್ದೇಶಕರಾದ ಆರ್. ಗೀತಾ, ಆರ್. ಕಲ್ಪನಾ, ಎನ್.ಪುಷ್ಪಲತಾ, ಸಿ.ಜಗನ್ನಾಥ್, ಡಾ.ಎಚ್.ಎಸ್. ಪರಮೇಶ್ವರ, ಡಾ.ನಾಗರಾಜ್ ಮಂಜುನಾಥ್ ಆರ್ ನಾಯಕ್, ಅಶೋಕ್ ಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಾಗರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಲೋಹಿತ್ ಕುಮಾರ್, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಎನ್. ಪ್ರಸನ್ನ ಕುಮಾರ್, ಹಿರಿಯ ಎನ್.ಎಸ್.ಎಸ್ ಸ್ವಯಂ ಸೇವಕ ಎನ್. ಮಹೇಂದ್ರ ಮೊದಲಾದವರು ಇದ್ದರು











