ವಿಜಯ ದರ್ಪಣ ನ್ಯೂಸ್….
ಹುಳಿಮಾವು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರ ಒತ್ತಾಯ

ತಾಂಡವಪುರ ಜುಲೈ 27 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮದಲ್ಲಿ ಇಂದು ಬೆಳಗಿನ ಜಾವ ಚಿರತೆ ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಮನ ಮಾಡಿದ್ದು ಚಿರತೆಯನ್ನು ಕೂಡಲೇ ಸೆರೆಹಿಡಿದು ಗ್ರಾಮಸ್ಥರು ನಿರ್ಭಯವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸಂಬಂಧ ಪಟ್ಟ ಅರಣ್ಯ ಇಲಾಖೆ ಹಾಗೂ ಸಚಿವರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಮೊನ್ನೆ ಗ್ರಾಮದ ಮಾದಪ್ಪ ಎಂಬುವರ ಕರವನ್ನು ಕಚ್ಚಿ ಗಾಯಗೊಳಿಸಿತ್ತು ಇವತ್ತು ಬೆಳಗಿನ ಜಾವ ಅದೇ ಮಾರ್ಗವಾಗಿ ಚಿರತೆಯು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ ಕೂಡಲೇ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರಲ್ಲಿ ಇರುವ ಭಯದ ವಾತಾವರಣವನ್ನು ಮುಕ್ತಗೊಳಿಸಲು ಸಂಬಂಧಪಟ್ಟ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯವರಲ್ಲಿ ಗ್ರಾಮದ ಮುಖಂಡ ಪರಶಿವಮೂರ್ತಿ ಸಂಪತ್ತು ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಚಿರತೆ ಸೆರೆಹಿಡಿಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು











