ವಿಜಯ ದರ್ಪಣ ನ್ಯೂಸ್….
ದಿವಂಗತ ಎ.ಕೆ. ಸುಬ್ಬಯ್ಯ ಕೊಡಗಿನ ಮಣ್ಣಿನ ದಿಟ್ಟ ಧ್ವನಿ

ಕೊಡಗಿನ ರಾಜಕೀಯ ಇತಿಹಾಸವನ್ನು ನೆನಪಿಸಿಕೊಂಡಾಗ ದಿವಂಗತ ಎ.ಕೆ. ಸುಬ್ಬಯ್ಯ ಅವರ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ ಅವರು ಕೇವಲ ರಾಜಕಾರಣಿಯಾಗಿರಲಿಲ್ಲಕೊಡಗಿನ ಮಣ್ಣಿನ ಧ್ವನಿಯಾಗಿದ್ದರು ಜನರ ನೋವಿಗೆ ಸ್ಪಂದಿಸುವ ಹೃದಯವಾಗಿದ್ದರು ಅನ್ಯಾಯದ ಎದುರು ಎದೆತಟ್ಟಿ ನಿಲ್ಲುವ ಧೈರ್ಯವಾಗಿದ್ದರು
ಅವರ ಮಾತಿನಲ್ಲಿ ನೇರತೆ ಇತ್ತು ನಿಲುವಿನಲ್ಲಿ ಗಟ್ಟಿತನವಿತ್ತು ಚಿಂತನೆಗಳಲ್ಲಿ ಜನಪರತೆ ಇತ್ತು ಅಧಿಕಾರ ಯಾರ ಕೈಯಲ್ಲಿದೆ ಎಂಬುದಕ್ಕಿಂತ ಸತ್ಯ ಯಾವ ಕಡೆ ಇದೆ ಜನರ ಹಿತ ಯಾವ ಕಡೆ ಇದೆ ಎಂಬುದನ್ನು ಮುಖ್ಯವಾಗಿಟ್ಟುಕೊಂಡು ಮಾತನಾಡುತ್ತಿದ್ದ ಅಪರೂಪದ ವ್ಯಕ್ತಿತ್ವ ಅವರದು
ಜನಪ್ರಿಯತೆಗಾಗಿ ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳದ ಅವರು ತಾವು ನಂಬಿದ ಸಿದ್ಧಾಂತಕ್ಕಾಗಿ ಯಾವುದೇ ಸವಾಲನ್ನೂ ಎದುರಿಸಲು ಸಿದ್ಧರಾಗಿದ್ದ ನಾಯಕ ಅವರ ರಾಜಕೀಯ ಬದುಕಿನಲ್ಲಿ ಏಳು ಬೀಳುಗಳು ಬಂದರೂ ಅವರ ದಿಟ್ಟತನ ಮತ್ತು ನೇರ ನುಡಿ ಎಂದಿಗೂ ಅವರ ವ್ಯಕ್ತಿತ್ವದ ಗುರುತಾಗಿಯೇ ಉಳಿದವು
ಕೊಡಗಿನ ಜನರ ಹಕ್ಕು ಸ್ವಾಭಿಮಾನ ಮತ್ತು ಅಸ್ತಿತ್ವದ ವಿಚಾರ ಬಂದಾಗ ಅವರ ಧ್ವನಿ ಮತ್ತಷ್ಟು ಗಟ್ಟಿಯಾಗುತ್ತಿತ್ತು ಜನರಿಗಾಗಿ ಅಧಿಕಾರವನ್ನು ಬಳಸಬೇಕು ಅಧಿಕಾರಕ್ಕಾಗಿ ಜನರನ್ನು ಬಳಸಬಾರದು ಎಂಬ ಧೋರಣೆಯ ಪ್ರತಿರೂಪವಾಗಿ ಅವರು ಕಾಣಿಸುತ್ತಿದ್ದರು
ಅವರನ್ನು ಹತ್ತಿರದಿಂದ ಕಂಡವರು ಅವರ ಸರಳತೆಯನ್ನು ನೆನಪಿಸಿಕೊಳ್ಳುತ್ತಾರೆ ಅವರ ಮಾತುಗಳನ್ನು ಕೇಳಿದವರು ಅವರ ನೇರತೆಯನ್ನು ನೆನಪಿಸಿಕೊಳ್ಳುತ್ತಾರೆ ಅವರ ಹೋರಾಟವನ್ನು ಅರಿತವರು ಅವರ ಧೈರ್ಯವನ್ನು ನೆನಪಿಸಿಕೊಳ್ಳುತ್ತಾರೆ ಅದಕ್ಕಾಗಿಯೇ ಎ.ಕೆ. ಸುಬ್ಬಯ್ಯ ಎಂಬ ಹೆಸರು ಒಬ್ಬ ವ್ಯಕ್ತಿಯ ಹೆಸರಾಗಿ ಮಾತ್ರ ಉಳಿದಿಲ್ಲ ಅದು ಒಂದು ಹೋರಾಟದ ನೆನಪು ಒಂದು ನಿಲುವಿನ ಸಂಕೇತ ಒಂದು ಜನಪರ ಚಿಂತನೆಯ ಗುರುತಾಗಿದೆ
ನಾನು ಚಿಕ್ಕಂದಿನಿಂದಲೂ ಅವರ ಬಗ್ಗೆ ಕೇಳುತ್ತಾ ಬೆಳೆದವನು ಅವರ ಹೋರಾಟದ ಕಥೆಗಳನ್ನು ಅವರ ದಿಟ್ಟ ನಿಲುವುಗಳನ್ನು ಹಿರಿಯರ ಮಾತುಗಳಲ್ಲಿ ಕೇಳಿದಾಗ ಒಬ್ಬ ವ್ಯಕ್ತಿ ತನ್ನ ಬದುಕಿನ ಮೂಲಕ ಎಷ್ಟು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಬಹುದು ಎಂಬುದನ್ನು ಅರಿಯಲು ಸಾಧ್ಯವಾಯಿತು
ಇಂದು ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ ಅವರ ಮಾತುಗಳು ಅವರ ಹೋರಾಟದ ನೆನಪುಗಳು ಅವರ ಸಿದ್ಧಾಂತಗಳು ಮತ್ತು ಜನಪರ ಚಿಂತನೆಗಳು ಇನ್ನೂ ಜೀವಂತವಾಗಿವೆ ದೇಹ ಮರೆಯಾಗಬಹುದು ಆದರೆ ಜನರಿಗಾಗಿ ಬದುಕಿದ ವ್ಯಕ್ತಿಯ ಆದರ್ಶಗಳು ಎಂದಿಗೂ ಮರೆಯಾಗುವುದಿಲ್ಲ
ದಿವಂಗತ ಎ.ಕೆ. ಸುಬ್ಬಯ್ಯ ಕೊಡಗಿನ ಜನಪರ ಹೋರಾಟದ ಇತಿಹಾಸದಲ್ಲಿ ಸದಾ ಗೌರವದಿಂದ ನೆನೆಯಲ್ಪಡುವ ಒಂದು ದಿಟ್ಟ ಅಧ್ಯಾಯ
ಅವರ ಜನ್ಮದಿನದಂದು ಆ ಮಹಾನ್ ಚೇತನದ ಪವಿತ್ರ ಸ್ಮರಣೆಗೆ ಹೃದಯಪೂರ್ವಕ ಗೌರವಪೂರ್ವಕ ನಮನಗಳು…
✍️ ಎಂ ಎಂ ದಾವುದ್
9945375180








