ವಿಜಯ ದರ್ಪಣ ನ್ಯೂಸ್……
ಜಿಲ್ಲಾ ಕಸಾಪ ವತಿಯಿಂದ ಡಾ ಶಿವಕುಮಾರ್ ಸ್ವಾಮೀಜಿ ಮತ್ತು ಕವಿಯತ್ರಿ ಅಕ್ಕಮಹಾದೇವಿ ಜನ್ಮ ದಿನಾಚರಣೆ ಆಚರಣೆ

ದೇವನಹಳ್ಳಿ : ನಗರದ ಪರ್ವತಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಐಟಿಐ ಕಾಲೇಜಿನಲ್ಲಿ ನಮ್ಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪರಮ ಪೂಜ್ಯಶ್ರೀ ಶ್ರೀ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿಯವರ ಮತ್ತು ಪ್ರಥಮ ಕವಿಯತ್ರಿ ಅಕ್ಕಮಹಾದೇವಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಸ್ವಾಮೀಜಿಯವರ ಕುರಿತು ಸಾಹಿತಿ ಶರಣಯ್ಯ ಹಿರೇಮಠ ಮತ್ತು ಅಕ್ಕನವರನ್ನು ಕುರಿತು ಜಿಲ್ಲಾ ಕಸಾಪ ಪೋಷಕರೂ ಹಾಗೂ ದೊಡ್ಡಬಳ್ಳಾಪುರದ ಸರಸ್ವತಿ ಶಾಲಾ ಮುಖ್ಯ ಶಿಕ್ಷಕರಾದ ಬಿ.ಕೆ.ಸಂಪತ್ ಕುಮಾರ್ ಮಾತನಾಡಿದರು. ಬೆಟ್ಟಕೋಟೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರೂ, ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ಕಸಾಪ ಪೋಷಕರೂ ಆದ ಚನ್ನಹಳ್ಳಿಯ ಸಿ.ಪಿ.ಎನ್.ರೆಡ್ಡಿ ಕನ್ನಡ ಗೀತೆಗಳ ಗಾಯನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ, ವೆಂಕಟೇಶ್ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ಕೃಷ್ಣಪ್ಪ,ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ, ಡಾ.ಎಂ.ಮುನಿರಾಜು (ಅಪ್ಪಯ್ಯಣ್ಣ), ಪ್ರಾಂಶುಪಾಲ,ಸಹ ಕಾರ್ಯದರ್ಶಿ, ಎಸ್ . ರಮೇಶ್ ಕುಮಾರ್,ಶಿವರಾಮ್, ಉಪನ್ಯಾಸಕ ಶಿವಕುಮಾರ್, ಕನ್ನಡಿಗ ಬಿದಲೂರು ಶಿವಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











