ವಿಶ್ವ ಛಾಯಾಗ್ರಹಣ ದಿನಾಚರಣೆ: ಜಿಲ್ಲಾ ಪತ್ರಕರ್ತರ ಸಂಘದಿಂದ ಅರ್ಥಪೂರ್ಣ ಆಚರಣೆ
ತಾಂಡವಪುರ ಆಗಸ್ಟ್ 19: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಕರ್ಷಕ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ, ಹಿರಿಯ ಛಾಯಾಗ್ರಾಹಕರಿಗೆ ಅಭಿನಂದಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರು ನಗರಪಾಲಿಕೆಯ ಆಯುಕ್ತರಾದ ಕೆ.ಎಂ.ಸವಿತಾ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮೈಸೂರು ನಗರವನ್ನು ಸ್ವಚ್ಛ, ಸುಂದರ, ಆರೋಗ್ಯಕರ ಹಾಗೂ ಸುಸ್ಥಿರ ನಗರವನ್ನಾಗಿ ರೂಪಿಸುವಲ್ಲಿ ಸ್ಥಳೀಯ ಪತ್ರಿಕೋದ್ಯಮದ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ, ಒಂದು ನಗರದ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ, ಸಂಚಾರ, ಪರಿಸರ, ಮೂಲಸೌಕರ್ಯ ಸೇರಿದಂತೆ ಜನರ ದಿನನಿತ್ಯದ ಸಮಸ್ಯೆಗಳನ್ನು ಪತ್ರಕರ್ತರು ಹತ್ತಿರದಿಂದ ಗಮನಿಸುತ್ತಾರೆ ಎಂದು ತಿಳಿಸಿದರು.
ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಅತ್ಯಗತ್ಯ. ಆಡಳಿತ ಮತ್ತು ಸಾರ್ವಜನಿಕರ ನಡುವೆ ಮಾಧ್ಯಮ ಸೇತುವೆಯಾಗಿ ಕೆಲಸ ಮಾಡುವುದರ ಜೊತೆಗೆ ತಮ್ಮ ಕೆಲಸದಲ್ಲಿ ತಪ್ಪುಗಳಿದ್ದರೆ ಅವುಗಳನ್ನು ನಮ್ಮ ಗಮನಕ್ಕೆ ತರುವುದು ಕೂಡ ಪತ್ರಕರ್ತರ ಜವಾಬ್ದಾರಿ. ಅದೇ ರೀತಿ ಉತ್ತಮ ಕೆಲಸ ಮಾಡಿದಾಗ ಅದನ್ನು ಜನರಿಗೆ ತಲುಪಿಸುವುದನ್ನೂ ಪತ್ರಕರ್ತರು ಮಾಡಬೇಕೆಂದು ಹೇಳಿದರು.
ಇದಕ್ಕು ಮುನ್ನ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಡಾ. ತಿಪ್ಪೇಸ್ವಾಮಿ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ತಿಪ್ಪೇಸ್ವಾಮಿ ತಮ್ಮ ವೃತ್ತಿ ಜೀವನದ ಮೈಲಿಗಲ್ಲುಗಳನ್ನು ಮೆಲಕು ಹಾಕಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ. ಶೇಖರ್ ಮತ್ತು ಸಂಘದ ಮಾಜಿ ಅಧ್ಯಕ್ಷ ಸಿ.ಕೆ. ಮಹೇಂದ್ರ ಅವರು ಛಾಯಾಗ್ರಹಣದ ಪರಂಪರೆಯನ್ನು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ ಶಿವಕುಮಾರ್ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಉಪಾಧ್ಯಕ್ಷ ರವಿ ಪಾಂಡವರಪುರ, ಖಜಾಂಚಿ ಎನ್. ಸುರೇಶ್, ಗ್ರಾ. ಕಾರ್ಯದರ್ಶಿ ದಾರಾ ಮಹೇಶ್, ಕಾರ್ಯದರ್ಶಿ ಕೃಷ್ಣೋಜಿ ರಾವ್ ಹಾಜರಿದ್ದರು.
ಬಹುಮಾತ ವಿತೇತರು:
ಸುದ್ದಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಂದೋಲ ದಿನಪತ್ರಿಕೆ ಛಾಯಾಗ್ರಾಹಕ ರವಿ ಗವಿಮಠ ಪ್ರಥಮ, ಕನ್ನಡ ಪ್ರಭ ಪತ್ರಿಕೆಯ ಎಂ.ಎಸ್. ಬಸವಣ್ಣ ದ್ವೀತೀಯ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಉದಯಶಂಕರ್ ತೃತೀಯ ಬಹುಮಾನ ಪಡೆದರೆ, ಪ್ರಜಾವಾಣಿ ಪತ್ರಿಕೆಯ ಅನೂಪ್ ಟಿ. ರಾಘ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಎಸ್.ಆರ್. ಮಧುಸೂದನ್, ವಿಜಯ ಕರ್ನಾಟಕ ಪತ್ರಿಕೆಯ ನಾಗೇಶ್ ಕುಮಾರ್ ಪಿ.ಬಿ. ಸಮಾಧಾನಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಹಿರಿಯ ಪತ್ರಕರ್ತ ಕೃಷ್ಣಕುಮಾರ್, ಹಿರಿಯ ಛಾಯಾಗ್ರಾಹಕ ರಾಮಪ್ರಸಾದ್, ಮೈವಿವಿಯ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸ್ವಪ್ನ ಆಗಮಿಸಿದ್ದರು.
ಯೂ-ಟ್ಯೂಬರ್ಸ್‌ಗಳ ಮೇಲೆ ನಿಗಾ: ಪೊಲೀಸ್ ಆಯುಕ್ತರು
ಮೈಸೂರು: ಜನಾಭಿಪ್ರಾಯಗಳನ್ನು ಮೂಡಿಸುವ ಶಕ್ತಿ ಹೊಂದಿರುವ ಸಾಮಾಜಿಕ ಮಾಧ್ಯಮದ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಯು-ಟ್ಯೂಬರ್‌ಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಗೆ ಬಹುಮಾನ ವಿತರಿಸಿ ಅವರು ಮಾತನಾಡಿದದರು ಅವರು, ಇಂದು ಎಲ್ಲರ ಬಳಿಯೂ ಮೊಬೈಲ್‌ಗಳಿಗೆ. ಒಂದು ಸಣ್ಣ ರೀಲ್ಸ್ ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಗೆ ತಲುಪಲಿದ್ದು ಜನಾಭಿಪ್ರಾಯವನ್ನು ಮೂಡಿಸುವ ಶಕ್ತಿ ಹೊಂದಿರುವುದರಿಂದ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದರು.
ಮೈಸೂರು ಮಾಧ್ಯಮ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುವುದನ್ನು ಅರಿತು ಸುದ್ದಿ ಪ್ರಕಟಿಸುತ್ತಿದೆ. ಸಮಾಜದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಹಾಗಂದ ಮಾತ್ರಕ್ಕೆ ಯಾರೂ ಸಹ ಅವರವರ ಜವಾಬ್ದಾರಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಳ್ಳೆಯ ಸುದ್ದಿಯೂ ಬರುತ್ತಿದೆ, ಕೆಟ್ಟ ಸುದ್ದಿಯೂ ಬರುತ್ತಿದೆ. ಅನೇಕ ಸಂದರ್ಭದಲ್ಲಿ ಶೋಷಿಯಲ್ ಮೀಡಿಯಾದಿಂದ ಪೊಲೀಸ್ ಇಲಾಖೆ ಮೇಲೂ ಪರಿಣಾಮ ಬೀರಿದೆ ಮತ್ತು ಜನರಿಗೂ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮ ಕುರಿತು ಚರ್ಚೆಗಳು ನಡೆಯಬೇಕು ಎಂದು ಹೇಳಿದರು.
ಛಾಯಾಗ್ರಹಣ ಎಂಬುವುದು ಒಂದು ವಿಶೇಷ ವೃತ್ತಿ. ಇಂದು ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ವಿಶಿಷ್ಟವಾಗಿದೆ. ಒಂದೇ ಪ್ರದರ್ಶನದಲ್ಲಿ ನಗು ಅಳು, ಕಷ್ಟ, ಸಂಭ್ರಮ, ದುರಂತ, ಜೀವನದ ಕ್ರಮ ಎಲ್ಲವನ್ನೂ ಚಿತ್ರದ ಮೂಲಕ ಸೆರೆ ಹಿಡಿದು ಜನರಿಗೆ ತೋರಿಸುತ್ತೀರಿ. ಈ ಪ್ರದರ್ಶನದಲ್ಲೂ ಬೆಂಕಿ, ಮಳೆ, ನಗು, ಅಳು, ಸಂಭ್ರಮ, ಸೂತಕ ಎಲ್ಲವೂ ಇದೆ. ಆದರೆ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಶ್ರಮ ಪಡುತ್ತಿರುವ ಚಿತ್ರಕ್ಕೆ ಮೊದಲ ಸ್ಥಾನ ಬಂದಿರುವುದು ನನಗೆ ವೈಯಕ್ತಿವಾಗಿ ಸಂತೋಷ ತಂದಿದೆ ಎಂದು ಹೇಳಿದರು.