--Ads--

ವರುಣ ಕ್ಷೇತ್ರದ ಜನತೆಯ ಆಶೀರ್ವಾದಕ್ಕೆ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ

On: August 24, 2026 12:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವರುಣ ಕ್ಷೇತ್ರದ ಜನತೆಯ ಆಶೀರ್ವಾದಕ್ಕೆ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ ಡಾ. ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಆಗಸ್ಟ್ 24 ಮೈಸೂರು ಜಿಲ್ಲೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಆಶೀರ್ವಾದದಿಂದ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವನಾಗಿ ಹಾಗೂ ವಿಧಾನಸಭೆಯ ಸಭಾ ನಾಯಕನಾಗಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ರಾಜ್ಯದ ಜನತೆಯ ಋಣ ಭಾರವನ್ನು ಅಭಿವೃದ್ಧಿ ಕೆಲಸಗಳ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಲು ಸವಿಸುತ್ತೇನೆ ಎಂದು ಹೇಳಿದರು

ಅವರು ಇಂದು ಸಚಿವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕು ಸುತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಳಿ ರಂಗಸ್ವಾಮಿ ಹೇಳಿದಂತೆ ಇನ್ನು ಹಲವಾರು ಮುಖಂಡರುಗಳು ಭೇಟಿ ಮಾಡಿ ವಿಧಾನಸಭೆಯ ಸಭಾ ನಾಯಕ ಹಾಗೂ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ನಗರ ಅಭಿವೃದ್ಧಿ ಸಚಿವರು ಆದ ಡಾ.ಯತಿಂದ್ರ ಸಿದ್ರಾಮಯ್ಯರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಗೌರವಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಸಚಿವ ಡಾ.ಯತೀಂದ್ರ ಸಿದ್ರಾಮಯ್ಯನವರು ನಿಮ್ಮ ಪ್ರೀತಿ ಅಭಿಮಾನಕ್ಕೆ ಆಶೀರ್ವಾದಕ್ಕೆ ನಾನು ಸದಾ ಚಿರಋಣಿ ನಿಮ್ಮ ಪ್ರೀತಿಯ ಅಭಿಮಾನ ಸದಾ ಹೀಗೆ ಇರಲಿ ಎಂದು ಹೇಳಿದ ಅವರು ನಾನು ಈ ಮಟ್ಟಕ್ಕೆ ಬೆಳೆಯಲು ಸಭಾ ನಾಯಕರಾಗಲು ಸಚಿವನಾಗಲು ಕಾರಣಕರ್ತರಾದ ವರುಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಮೈಸೂರು ಜಿಲ್ಲೆಯ ಜನತೆಯ ಆಶೀರ್ವಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಹಾಗೂ ಹಿರಿಯರ ಆಶೀರ್ವಾದವೇ ಕಾರಣವಾಗಿದ್ದು ನಗರಾಭಿವೃದ್ಧಿ ಸಚಿವರಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಾನು ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ನಿಬಾಯಿಸುವ ಜೊತೆಗೆ ನಗರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಳಿ ರಂಗಸ್ವಾಮಿ ಸಚಿವರ ಆಪ್ತ ಸಹಾಯಕ ಶಿವ ಸ್ವಾಮಿ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now