--Ads--

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ  ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಆನಂದ್ ಸಿ. ತಿರುಮಲ  ಆಯ್ಕೆ 

On: September 8, 2026 1:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ  ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಆನಂದ್ ಸಿ. ತಿರುಮಲ  ಆಯ್ಕೆ 

ತಾಂಡವಪುರ ಸೆಪ್ಟೆಂಬರ್ 8 :ಪತ್ರಿಕೋದ್ಯಮ, ಶಿಕ್ಷಣ, ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ ಈ ಪ್ರಶಸ್ತಿಗೆ ಆನಂದ್ ಸಿ. ತಿರುಮಲ ಅವರನ್ನು ಆಯ್ಕೆ ಮಾಡಲಾಗಿದೆ.

ಧಾರವಾಡ: ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ ಸೆಪ್ಟೆಂಬರ್ 12ರಂದು ಧಾರವಾಡದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿರುವ ಕಾವ್ಯಶ್ರೀ ಶಿಕ್ಷಕರ ಸಾಹಿತ್ಯ ಸಮ್ಮೇಳನ–2026ರಲ್ಲಿ ಪತ್ರಕರ್ತ, ಶಿಕ್ಷಣ ತಜ್ಞ, ಕವಿ, ಸಾಹಿತಿ ಹಾಗೂ ಸಮಾಜಸೇವಕರಾದ ಆನಂದ್ ಸಿ. ತಿರುಮಲ ಅವರಿಗೆ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ ನೀಡಲು ಆಯ್ಕೆ ಮಾಡಲಾಗಿದೆ. ಸಂಸ್ಥೆಯ ಆಯೋಜಕರು ತಿಳಿಸಿದ್ದಾರೆ

ಪತ್ರಿಕೋದ್ಯಮ, ಶಿಕ್ಷಣ, ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ ಈ ಪ್ರಶಸ್ತಿಗೆ ಆನಂದ್ ಸಿ. ತಿರುಮಲ ರವರು ತಮ್ಮನ್ನು ಗುರುತಿಸಿ ಆಯ್ಕೆ ಮಾಡುವುದಕ್ಕೆ ಸಂತಸ ವ್ಯಕ್ತಪಡಿಸಿದರು

ಸೆಪ್ಟೆಂಬರ್ 12ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಕೃತಿ ಬಿಡುಗಡೆ, ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಸಮ್ಮೇಳನದ ಕಾರ್ಯಕ್ರಮದಲ್ಲಿ ಡಾ. ಸಿದ್ದಣ್ಣ ಬಾಡಗಿ ಅಧ್ಯಕ್ಷತೆ ವಹಿಸಲಿದ್ದು,ಡಾ.ರಮೇಶ್ ಮಹದೇವಪ್ಪನವರ, ಡಾ. ಧನವಂತ ಹಾಜವಗೋಳ, ಪ್ರೊ. ಪ್ರವೀಣ ವಿ. ಕುಲಕರ್ಣಿ, ಶ್ರೀಮತಿ ಸಂಗೀತಾ ಮಠಪತಿ, ಡಾ. ಶಾಂತಣ್ಣವಾಯ್ ಕಡಿವಾಲ, ಶ್ರೀ ಡಿ.ಎಚ್. ಅಂದಲಗಿ, ಶ್ರೀಮತಿ ಕೀರ್ತಿ ಮಠಪತಿ ಹಾಗೂ ಶ್ರೀಮತಿ ಹೇಮಾವತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಶಿಕ್ಷಣ–ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಆನಂದ್ ಸಿ. ತಿರುಮಲ ಅವರ ‘ಭಾವ ವಿಕಾಸ’ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದ್ದು, ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ.

ಆನಂದ್ ಸಿ. ತಿರುಮಲ ಅವರು ಎನ್.ಇ.ಟಿ. ಎಜುಕೇಶನ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಪತ್ರಕರ್ತ, ಕವಿ, ಸಾಹಿತಿ, ಶಿಕ್ಷಣ ತಜ್ಞ ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಧಾರವಾಡದಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನದಲ್ಲಿ ‘ಭಾವ ವಿಕಾಸ’ ಕವನ ಸಂಕಲನದ ಬಿಡುಗಡೆ ಹಾಗೂ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ಗೆ ಆಯ್ಕೆಯಾಗಿರುವ ಆನಂದ್ ಸಿ. ತಿರುಮಲ ಅವರ ಗೌರವ ವಿಶೇಷ ಗಮನ ಸೆಳೆಯಲಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಸಮಾಲೋಚನೆ ಸಭೆ ನಡೆಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಾರ್ವಜನಿಕರ ಸಹಕಾರ. ಶಾಸಕ ದರ್ಶನ್ ದ್ರುವ ನಾರಾಯಣ್

ನಿರುದ್ಯೋಗಿ ಯುವಕರು ಯುವತಿಯರು  ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಿ: ಸಚಿವ ಡಾ. ಯತೀಂದ್ರ ಸಿದ್ರಾಮಯ್ಯ ಕರೆ

ಅಹವಾಲು ನಿಮ್ಮದು, ಪರಿಹಾರ ನಮ್ಮದು. ಮೈಸೂರಿನ ಪ್ರಜಾ ಸೇವ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ನನ್ನ ಅವಧಿಯಲ್ಲಿ ದೇವಾಲಯದಲ್ಲಿ ಅವ್ಯವಹಾರ ನಡೆದಿಲ್ಲ ಅವ್ಯವಾರ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಮಾಜಿ ಶಾಸಕ ಬಿ ಹರ್ಷವರ್ಧನ್

ಬರ ಪರಿಶೀಲನೆ ಅನ್ನದಾತರಿಂದ ಮಾಹಿತಿ ಪಡೆದ ಡಿಸಿಎಂ ಡಾ ಜಿ ಪರಮೇಶ್ವರ್