--Ads--

ತೀವ್ರ ಬರಗಾಲ ಹಿನ್ನೆಲೆ ಸರಳವಾಗಿ ಗಣೇಶೋತ್ಸವ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ : ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್

On: September 10, 2026 5:10 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ತೀವ್ರ ಬರಗಾಲ ಹಿನ್ನೆಲೆ ಸರಳವಾಗಿ ಗಣೇಶೋತ್ಸವ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ : ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್

ಶಿಡ್ಲಘಟ್ಟ : ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಹಲವು ಕಡೆ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ಸರಳ, ಅರ್ಥಪೂರ್ಣ ಹಾಗೂ ಶಿಸ್ತುಬದ್ಧವಾಗಿ ಆಚರಿಸಬೇಕೆಂದು ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗಣೇಶನ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆಯ ಉತ್ಸವದ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳ ಬಗ್ಗೆ
ಅವರು ಮಾತನಾಡಿದರು.

ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನಷ್ಟೇ ಪ್ರತಿಷ್ಟಾಪನೆ ಮಾಡಬೇಕು , ಪಿಒಪಿ, ಕೃತಕಬಣ್ಣ ಬಳಕೆಯ
ಗಣಪತಿ ಪ್ರತಿಮೆಯನ್ನು ಸಂಪೂರ್ಣವಾಗಿ ನಿಷದಿಸಿದೆ,
ಎತ್ತರವನ್ನು 5 ರಿಂದ 6 ಅಡಿಗಳಿಗೆ ಸೀಮಿತ ಗೊಳಿಸುವುದು ಎಲ್ಲಾ ರೀತಿಯಿಂದಲೂ ಸೂಕ್ತ ಎಂದರು

ಅತಿ ಎತ್ತರದ ಗಣಪನ ಮೂರ್ತಿಗಳನ್ನು ವಿಸರ್ಜಿಸುವಷ್ಟು ಆಳದ ನೀರು ಎಲ್ಲೂ ಇಲ್ಲ, ಹಾಗಾಗಿ ಕಡಿಮೆ ಎತ್ತರದ ಗಣಪನನ್ನು ಪ್ರತಿಷ್ಠಾಪಿಸಿ ಎಂದು ಅವರು ಕೋರಿದರು.

ನಗರ ಅಥವಾ ಹಳ್ಳಿಗಳ ಮುಖ್ಯ ರಸ್ತೆಗಳಲ್ಲಿ ಗಣಪತಿಯನ್ನು ಕೂರಿಸಲು ಅವಕಾಶ, ಅನುಮತಿಯನ್ನು ಕೊಡುವುದಿಲ್ಲ, ಯಾವುದೆ ರೀತಿಯ ಸಂಚಾರಕ್ಕೆ ಅಡ್ಡಿ ಆಗದಂತ ಸೂಕ್ತ ಸ್ಥಳಗಳಲ್ಲಿ ಗಣಪತಿಯನ್ನು ಕೂರಿಸಿ ಎಂದರು.

ನಗರ ಭಾಗದಲ್ಲಿ ಒಂದು ವಾರ್ಡ್‌ ಒಂದೇ ಗಣೇಶನನ್ನು ಹಾಗೂ ಹಳ್ಳಿಗಳಲ್ಲಿ ಒಂದು ಕಡೆ ಅಥವಾ ಅನಿವಾರ್ಯ ಸ್ಥಿತಿಗಳಲ್ಲಿ ಅಥವಾ ದೊಡ್ಡ ಊರಾದಲ್ಲಿ 2ಕಡೆ ಗಣಪನ ಮೂರ್ತಿ ಪ್ರತಿಷ್ಠಾಪಿಸಬೇಕು ,ನಗರ ಭಾಗ ಅಥವಾ
ಎಲ್ಲಿಯೇ ಆಗಲಿ ಗಣಪತಿ ಪ್ರತಿಷ್ಠಾಪಿಸಲು ರಸ್ತೆ ಬಂದ್ ಮಾಡುವುದು, ಅಡ್ಡ ಹಾಕುವುದನ್ನು ಮಾಡಿ ಸಂಚಾರಕ್ಕೆ ಯಾವುದೆ ರೀತಿಯಲ್ಲಿ ಯಾರಿಗೂ ಅಡ್ಡಿಯಾಗದಂತೆ ಪ್ರತಿಷ್ಠಾಪಿಸುವವರು ಗಣಪತಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಇನ್ನು ಗಣಪನ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ, ವಿದ್ಯುತ್ ಸಂಪರ್ಕ ಹಾಗೂ ಧ್ವನಿವರ್ಧಕ ಬಳಕೆಗೆ ಗ್ರಾಮ ಪಂಚಾ ಯಿತಿ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು , ಪೂರ್ವಾನುಮತಿ ಪಡೆಯದಿದ್ದಲ್ಲಿ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಸಿದರು.

ಗಣಪನ ಮೂರ್ತಿ ಇಡುವ ಸ್ಥಳಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ,ಗಣೇಶನ ಮೆರವಣಿಗೆ, ಉತ್ಸವದ ನೆಪದಲ್ಲಿ ಯಾವುದೇ ರೀತಿಯ ಗಲಾಟೆ, ಘರ್ಷಣೆ, ಮಾತಿನ ಚಕಮಕಿ ಸೇರಿದಂತೆ ಸಮಾಜದಲ್ಲಿ ಆಶಾಂತಿ ಮೂಡಿಸುವಂತ ಯಾವುದೆ ರೀತಿಯ ಆಚರಣೆ, ಚಟುವಟಿ ಕೆಗಳಿಗೆ ಅವಕಾಶ ಕೊಡದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಆಯೋಜಕರು ಮುನ್ನೆಚ್ಚರಿಕೆ ವಹಿಸಿ, ಪೊಲೀಸರೊಂದಿಗೆ ಸಹಕರಿಸಿ ಯಾವುದೆ ರೀತಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ, ವಿವಾದಾತ್ಮಕ ವಿಷಯಗಳ ಚರ್ಚೆ, ಭಾಷಣಗಳಿಗೆ ಆಸ್ಪದ ನೀಡಬಾರದು ,ಸೌಹಾರ್ದ ಯುತವಾಗಿ ಹಬ್ಬ ಆಚರಿಸ ಬೇಕು ಒಂದೊಮ್ಮೆ ಅಂತಹ ಸಮಾಜ ದಲ್ಲಿ ಅಶಾಂತಿಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಗಗನ ಸಿಂಧು, ತಾಲ್ಲೂಕು ಪಂಚಾಯತಿಇಒ. ಆರ್.ಹೇಮಾವತಿ, ನಗರಸಭೆ, ಬೆಸ್ಕಾಂ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now