ವಿಜಯ ದರ್ಪಣ ನ್ಯೂಸ್….
ವಿದ್ವಾಂಸ ಡಾ.ನಾ.ಗೀತಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಆಯೋಜಿಸಿದ್ದ ಸಮಾರಂಭ
ಸಂಪನ್ನಗೊಂಡ ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ 23 ನೇ ಹಸ್ತಪ್ರತಿ ಸಮ್ಮೇಳನ

ಬೀದರ್ : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗವು ಬೀದರ್ ನ ಕರ್ನಾಟಕ ಪದವಿ ಕಾಲೇಜಿನಲ್ಲಿ ವಿದ್ವಾಂಸ ಡಾ.ನಾ.ಗೀತಾಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 23 ನೇ ಹಸ್ತಪ್ರತಿ ಸಮ್ಮೇಳನದ ಗೋಷ್ಠಿಯಲ್ಲಿ ಗೀತಾಚಾರ್ಯ ಅವರ ಕನ್ನಡಪರ ಸಂಘಟನೆ ಮತ್ತು ಹೋರಾಟ ವಿಷಯ ಕುರಿತು ಮಾತನಾಡಿದ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕರು , ಚಿಂತಕರು ಆದ ಡಾ . ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರು ಕನ್ನಡ ಭಾಷೆ , ಸಾಹಿತ್ಯ, ಸಂಸ್ಕೃತಿ, ಸಂಘಟನೆ, ನೆಲ,ಜಲ ಕುರಿತು ಸಂಘಟನೆ ಮತ್ತು ಹೋರಾಟ ಮಾಡಿಕೊಂಡು ತಮ್ಮ ಮನೆ, ಮಠ, ಸಂಸಾರ , ತಮ್ಮ ತನು ,ಮನ, ಧನ ಕಳೆದುಕೊಂಡು ತಮ್ಮ ಬದುಕನ್ನು ಕಳೆದುಕೊಂಡ ಸಂಘಟಕರು ಹಾಗೂ ಹೋರಾಟಗಾರನ್ನು ಸಂಘಸಂಸ್ಥೆಗಳು , ಸರ್ಕಾರ ಗುರುತಿಸಿ , ಪ್ರಶಸ್ತಿ, ಗೌರವ ನೀಡುವ ಕೆಲಸ ಆಗಬೇಕಾಗಿದೆ ಎಂದರು.

ನಾ. ಗೀತಾಚಾರ್ಯರು ಬಿ.ಎಂ.ಶ್ರೀ.ಪ್ರತಿಷ್ಠಾನದ ಕಾರ್ಯಕತ೯ರಾಗಿ, ಕಾರ್ಯದರ್ಶಿಯಾಗಿ ಹಸ್ತಪ್ರತಿಶಾಸ್ತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಇವರು ರಚಿಸಿರುವ ಹಸ್ತಪ್ರತಿಶಾಸ್ತ್ರ ವಿವೇಚನೆ, ಹಸ್ತಪ್ರತಿ ಅಧ್ಯಯನ ಶಾಸ್ತ್ರ ಹಾಗೂ ಕನ್ನಡ ಶಾಸ್ತ್ರೀಯ ಅಧ್ಯಯನ ಎಂಬ ಕೃತಿಗಳು ಈ ಕ್ಷೇತ್ರಕ್ಕೆ ನೀಡಿರುವ ಆಕರ ಗ್ರಂಥಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಹಂಪಿ ವಿವಿ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ್ ಬಡಿಗೇರ್ ಅವರ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ, ಸಮ್ಮೇಳನ ಅಧ್ಯಕ್ಷರಾದ ಡಾ.ನಾ.ಗೀತಾಚಾರ್ಯರ ಮಾತು ರಾಜ್ಯೋತ್ಸವ ಹೊಸ್ತಿಲಲ್ಲಿ ಇರುವ ನಾವೆಲ್ಲ ಕನ್ನಡಿಗರು ನಮ್ಮ ಮಾತೃ ಭಾಷೆಯಲ್ಲಿ ಸಹಿ ಮಾಡುವ ಶಪಥ ಮಾಡೋಣ ಎಂದರು. , ಕರಾಶಿ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮಹಾನಂದ ಮಡಕಿ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ಗಾಯಕ ರಾಜಶೇಖರ್ ಅವರ ಗಾಯನ ಮುದ ನೀಡಿತು, ಬೀದರ್ ಜಿಲ್ಲಾ ಕಸಾಪ, ಕರ್ನಾಟಕ ಶಿಕ್ಷಣ ಪದವಿ ಕಾಲೇಜಿನ ಸಹಯೋಗದಲ್ಲಿ ಎರಡು ದಿನಗಳ ಕಾಲ ಜರುಗಿದ ಸಮ್ಮೇಳನ ಸಂಪನ್ನಗೊಂಡಿತು.





