--Ads--

ವಾರಣಾಸಿಯ ಅಸ್ಸಿ ಘಾಟ್ ನಲ್ಲಿ ಬೆಂಗಳೂರಿನ ನಾಟ್ಯ ಸನ್ನಿಧಿ ತಂಡದ ಭರತನಾಟ್ಯಕ್ಕೆ ಅಪಾರ ಮೆಚ್ಚುಗೆ

On: October 28, 2026 2:55 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಾರಣಾಸಿಯ ಅಸ್ಸಿ ಘಾಟ್ ನಲ್ಲಿ ಬೆಂಗಳೂರಿನ ನಾಟ್ಯ ಸನ್ನಿಧಿ ತಂಡದ ಭರತನಾಟ್ಯಕ್ಕೆ ಅಪಾರ ಮೆಚ್ಚುಗೆ

ವಾರಣಾಸಿ, ಅಕ್ಟೋಬರ್ 26, 2026 : ಮೋಕ್ಷ ನಗರಿ ಕಾಶಿಯ ಪವಿತ್ರ ಗಂಗಾ ತಟದಲ್ಲಿರುವ ಪ್ರಸಿದ್ಧ ಅಸ್ಸಿ ಘಾಟ್ ನಲ್ಲಿ ಜರುಗುವ ವಿಶ್ವವಿಖ್ಯಾತ ‘ಗಂಗಾ ಸಂಧ್ಯಾ ಕಾರ್ಯಕ್ರಮ’ದಲ್ಲಿ ಬೆಂಗಳೂರಿನ ಖ್ಯಾತ ನೃತ್ಯ ಸಂಸ್ಥೆ ‘ನಾಟ್ಯ ಸನ್ನಿಧಿ’ಯಿಂದ ಪ್ರಸ್ತುತಪಡಿಸಿದ ಭರತನಾಟ್ಯ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದಿತು.

ಗುರು ಮೋನಿಷಾ ನವೀನ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ 17 ಕಲಾವಿದರು ಭಕ್ತಿ ಮತ್ತು ಶಾಸ್ತ್ರೀಯ ನೃತ್ಯದ ಅದ್ಭುತ ಸಂಗಮವನ್ನು ಪ್ರಸ್ತುತಪಡಿಸಿದರು. ಕಾಶಿಯ ಮಹಿಮೆಯನ್ನು ಸಾರುವ ಈ ಪ್ರದರ್ಶನವು ನೆರೆದಿದ್ದ ನೂರಾರು ಪ್ರೇಕ್ಷಕರು ಹಾಗೂ ವಿದೇಶಿ ಪ್ರವಾಸಿಗರಿಂದ ಅಪಾರ ಮೆಚ್ಚುಗೆ ಪಡೆಯಿತು.

ಪ್ರದರ್ಶನ ನೀಡಿದ ಕಲಾವಿದರು:
ತನಿಷಾ ಎನ್ ಸುಮೋಹನ, ರಂಜಿತಾ ಬಿ ಎನ್, ಎಂ.ಬಿ. ಪ್ರಣತಿ, ಗಾನವಿ.ಆರ್, ಯಶಸ್ವಿನಿ ಎಸ್, ಕೆ ಆರ್ ಲಾವಣ್ಯ, ವಿನಿಶಾ ಕೃಷ್ಣಾ, ಕೃತಿಕಾ ಆರ್, ಜಾಗೃತಿ ಕೆ, ಭಾವಿಷ್ಣಿ.ಪಿ, ಸಂಯಮ ಬಿ.ಎಸ್, ಸಾಹಿತ್ಯ ಬಿ.ಎಸ್, ತೇಜಸ್ವಿನಿ ಬಿ.ಆರ್, ಇಂದು ಎಸ್, ನಿಧಿ ಶೆಟ್ಟಿ ಎಂ ಬಿ, ಚಿರಂಜೀವಿ ಎನ್ ಸುಮೋಹನ ಮತ್ತು ಪೂರ್ವಿ ಎಸ್.

ಈ ಸಂದರ್ಭದಲ್ಲಿ ಮಾತನಾಡಿದ ಗುರು ಮೋನಿಷಾ ನವೀನ್ ಅವರು, “ಬಾಬಾ ವಿಶ್ವನಾಥನ ನಗರಿ ಕಾಶಿಯಲ್ಲಿ ನೃತ್ಯ ಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ ಮತ್ತು ದೇವರ ಕೃಪೆ” ಎಂದು ತಿಳಿಸಿದರು

WhatsApp

Join Now

Telegram

Join Now

Instagram

Join Now