ವಿಜಯ ದರ್ಪಣ ನ್ಯೂಸ್……
ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ (CSR) ನಿಧಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ

ತಾಂಡವಪುರ ಅಕ್ಟೋಬರ್ 27 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವಕಳಲೆ ಗ್ರಾಮದಲ್ಲಿ ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ (CSR) ನಿಧಿಯಡಿ ಒಟ್ಟು ₹4 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ ನೆರೆವೇರಿಸಿದರು
ಬಳಿಕ ಮಾತನಾಡಿದ ಶಾಸಕರು ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ತರಗತಿ ಕೊಠಡಿ ನಿರ್ಮಾಣ ಹಾಗೂ 7 ತರಗತಿ ಕೊಠಡಿಗಳ ನವೀಕರಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಮತ್ತು ತರಗತಿ ಕೊಠಡಿ ನವೀಕರಣ, ಆರ್.ಒ. ಘಟಕದ ದುರಸ್ತಿ, ಕೊಳ ಮತ್ತು ಕಲ್ಯಾಣಿ ನವೀಕರಣ, ಘನತ್ಯಾಜ್ಯ ನಿರ್ವಹಣಾ ಘಟಕದ ಶೆಡ್ ನಿರ್ಮಾಣ ಹಾಗೂ ಅಂಗನವಾಡಿ ನವೀಕರಣ ಸೇರಿದಂತೆ ಹಲವು ಕಾಮಗಾರಿಗಳು ಈ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಎಂದು ತಿಳಿಸಿದರು
ನೆಸ್ಲೆ ಕಂಪನಿ ಅವರ ಈ ಅನುದಾನದಲ್ಲಿ ಉತ್ತಮವಾದ ಶಾಲಾ ಕಚಡವನ್ನು ನಿರ್ಮಿಸಲು ಸಂಬಂಧಪಟ್ಟ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಆದಷ್ಟು ಬೇಗನೆ ಕಾಮುಗಾರಿ ಮುಗಿಸಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು
ಅಲ್ಲದೆ ಕಂಪನಿಯ ಈ ಸೇವೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು ಇದೇ ರೀತಿ ಇನ್ನೂ ಹಲವಾರು ಶಾಲಾ ಕಟ್ಟಡಗಳು ಶಿಥಿಲ ವ್ಯವಸ್ಥೆಯಲ್ಲಿವೆ ಅದನ್ನು ಸಹ ಇದೇ ರೀತಿ ಇನ್ನು ಹೆಚ್ಚಿನ ಅನುದಾನ ನೀಡಿ ಶಾಲಾ ಕಟ್ಟಡಕ್ಕೆ ಮುಂದಾಗ ಬೇಕೆಂದು ಕಂಪನಿಯ ಮಾಲೀಕರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರೋಡ್ರಿಗೋ, ಬಿಇಒ ಮಹೇಶ್, ಇಒ ಜೆರಾಲ್ಡ್ ರಾಜೇಶ್, ಸಿಡಿಪಿಒ ಭವ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್, ನೆಸ್ಲೆ ಕಂಪನಿಯ ಆಡಳಿತ ವರ್ಗದವರು ನಾರಾಯಣ, ಕಳಲೆ ರಾಜೇಶ್, ಕೆ.ಡಿ. ಮಂಜು ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು











