--Ads--

ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ಭಕ್ತರ ಕೋರಿಕೆ

On: October 22, 2026 1:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ಭಕ್ತರ ಕೋರಿಕೆ

ತಾಂಡವಪುರ ಅಕ್ಟೋಬರ್ 22 ತಾಯಿ ನಾಡದೇವಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ನೀಡುವಂತೆ ಮೈಸೂರು ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ದೇವಿಯ ಭಕ್ತರು ಕೋರಿದ್ದಾರೆ

ಮೈಸೂರು ತಾಲೂಕು, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸಕಳ್ಳಿ ಗ್ರಾಮದ ಬಳಿ ತಾಯಿ ಚಾಮುಂಡೇಶ್ವರಿಯ ಬೆಟ್ಟದ ಪಕ್ಕದಲ್ಲಿ ನೆಲೆಸಿರುವ ಸಾವಿರಾರು ವರ್ಷಗಳ ಇತಿಹಾಸ ಪ್ರಸಿದ್ಧಿ ಉಳ್ಳ ತಾಯಿ ಬನ್ನಿ ಕಾಳಮ್ಮನವರ ದೇವಾಲಯ ದೇವಿಯ ಭಕ್ತರು ಚಿಕ್ಕದಾಗಿ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ ಆದರೆ ದೇವಾಲಯದ ಅಭಿವೃದ್ಧಿಗೆ ನಿವೇಶನ ಭೂಮಿ ನೀಡುವ ಜೊತೆಗೆ ದೇವಾಲಯದಲ್ಲಿ ವಿದ್ಯುತ್ ದೀಪ ಇಲ್ಲದೆ ದೇವಾಲಯ ಕತ್ತಲಿನಿಂದ ಕೂಡಿದ್ದು ದೇವಾಲಯಕ್ಕೆ ವಿದ್ಯುತ್ ಅಳವಡಿಸಲು ದೇವಾಲಯಕ್ಕೆ ಬೆಳಕು ನೀಡಲು ಸಂಬಂಧ ಪಟ್ಟವರು ಸಹಕಾರ ನೀಡುವಂತೆ ದೇವಾಲಯದ ಭಕ್ತರು ಮಾಧ್ಯಮಗಳ ಮೂಲಕ ತಮ್ಮ ಕೋರಿಕೆಯನ್ನು ಹಾಗು ಬೇಡಿಕೆಯನ್ನು ಮುಂದಿಟ್ಟದ್ದಾರೆ

ಪ್ರತಿವರ್ಷ ಆಯ್ದ ಪೂಜೆ ವಿಜಯದಶಮಿ ದಸರಾ ಹಬ್ಬದ ಪ್ರಯುಕ್ತ ವರ್ಷಕ್ಕೆ ಒಂದು ಬಾರಿ ಈ ದೇವಾಲಯದಲ್ಲಿ ದೇವಿಯನ್ನು ಭಕ್ತಿಯಿಂದ ಪೂಜಿಸಿ ಆರಾಧಿಸುವ ಗ್ರಾಮಗಳಾದ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿಸಿದ್ದನ ಹುಂಡಿ ಗ್ರಾಮ ಹಳ್ಳಿ ದಿಡ್ಡಿ ಉತ್ತನಹಳ್ಳಿ ಬಿದರಗೂಡು ಮಾಕನಹುಂಡಿ ಹಾಗೂ ಚಿಕ್ಕ ಬಿಚನಹಳ್ಳಿ ಕೇರ್ಗಳ್ಳಿ ಸಾಲುಂಡಿ ಮಂಡಕಳ್ಳಿ ಹದಿನಾರು ಗ್ರಾಮ ಮಾರ್ಗನಹಳ್ಳಿ ಸೇರದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಈ ದೇವಿಯ ಪೂಜೆಯನ್ನು ಮಾಡಿಕೊಂಡು ಪ್ರಸಾದ ತಯಾರು ಮಾಡಿ ಅಲ್ಲೇ ಪ್ರಸಾದವನ್ನು ಸವಿದು ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ

ಆದರೆ ಈ ದೇವಾಲಯಕ್ಕೆ ವಿದ್ಯುತ್ ದೀಪ ಇಲ್ಲ ಹಾಗೂ ದೇವಾಲಯದ ಅಭಿವೃದ್ಧಿಗೆ ಭೂಮಿಯ ಕೊರತೆ ಇದ್ದು ಪಕ್ಕದಲ್ಲಿ ಸರ್ಕಾರಿ ಭೂಮಿ ಇದ್ದು ಅದನ್ನು ದೇವಾಲಯಕ್ಕೆ ಕೊಟ್ಟರೆ ದೇವಾಲಯದ ಅಭಿವೃದ್ಧಿ ಜೊತೆಗೆ ಈ ಭಾಗದ ಭಕ್ತರ ಕೋರಿಕೆಯನ್ನು ಈಡೇರಿಸುವ ತಾಯಿಯ ದೇವಾಲಯವು ಮತ್ತಷ್ಟು ಅಭಿವೃದ್ಧಿಗೊಂಡು ಭಕ್ತರ ಕೋರಿಕೆಯನ್ನು ತಾಯಿ ಬನ್ನಿ ಕಾಳಮ್ಮ ತಾಯಿದೇವ ಭಕ್ತರ ಕೋರಿಕೆಯನ್ನು ಈಡೇರಿಸುವಂತಹ ಮಹಾ ಶಕ್ತಿವಂತೆ ಇತಿಹಾಸ ಪ್ರಸಿದ್ಧಿ ಉಳ್ಳ ಈ ದೇವಾಲಯದ ಅಭಿವೃದ್ಧಿಗೆ ಸಹಕರಿಸುವಂತೆ ಭಕ್ತರು ಮನವಿ ಮಾಡಿದ್ದಾರೆ .

ಇತಿಹಾಸ ಪ್ರಸಿದ್ಧಿ ಉಳ್ಳ ಈ ದೇವಿಯ ಇತಿಹಾಸವನ್ನು ದೇವಿಯ ಭಕ್ತರು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ ಇನ್ನು ಮುಂದಾದರೂ ದೇವಾಲಯದ ಅಭಿವೃದ್ಧಿಗೆ ಸಂಬಂಧಪಟ್ಟವರು ಸಹಕಾರ ನೀಡುವವರೇ ಕಾದು ನೋಡೋಣ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಹದಿನಾರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ 

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು :ಶಾಸಕ ದರ್ಶನ್ ಧ್ರುವನಾರಾಯಣ್

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ

ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಗಾಂಧಿ ಸ್ಪರ್ಶಿಸಿದ ನೆಲವನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನಾಗಿ ಮಾಡಲಾಗುವುದು: ಶಾಸಕ ದರ್ಶನ್ ದೃವನಾರಾಯಣ್