--Ads--

ಹಿಂದೂ ಮುಸ್ಲಿಂ ಬಾಂಧವರಿಗೆ ಹಬ್ಬಗಳು ಉತ್ತಮ ಬಾಂಧವ್ಯವನ್ನು ಬೆಸೆಯುವ ಹಬ್ಬಗಳಂತಾಗಲಿ: ಸಚಿವ ಕೆಹೆಚ್. ಮುನಿಯಪ್ಪ

On: March 31, 2025 12:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹಿಂದೂ ಮುಸ್ಲಿಂ ಬಾಂಧವರಿಗೆ ಹಬ್ಬಗಳು ಉತ್ತಮ ಬಾಂಧವ್ಯವನ್ನು ಬೆಸೆಯುವ ಹಬ್ಬಗಳಂತಾಗಲಿ: ಸಚಿವ ಕೆಹೆಚ್. ಮುನಿಯಪ್ಪ

ದೇವನಹಳ್ಳಿ ಮಾರ್ಚ್31: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್ ಮುನಿಯಪ್ಪ ನವರು ಇಂದು ದೇವನಹಳ್ಳಿಯ ಈದ್ಗಾ ಮೈದಾನ ಕ್ಕೆ ಬೇಟಿ ನೀಡಿ ರಂಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನ ಬಾಂದವರೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಶಾಸಕನಾಗಿ ಎರಡು ವರ್ಷ ಕಳೆದಿದ್ದು  ಕ್ಷೇತ್ರದ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ವತೋಮುಖ ಅಭಿವೃದ್ಧಿಗೆ ಹೊತ್ತನ್ನು ನೀಡಲಾಗುವುದು.

ಸಮಸ್ತ ಮುಸಲ್ಮಾನ ಬಾಂದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಅಲ್ಲಾಹು ಕಾಲ ಕಾಲಕ್ಕೆ ಮಳೆ, ಸಮೃದ್ಧ ಬೆಳೆ ಕರುಣಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಮುಸಲ್ಮಾನರ ವಿಕಾಸಕ್ಕಾಗಿ ಸದಾ ಸಿದ್ದನಿದ್ದು ಯಾವುದೇ ಕೆಲಸವಾದರೂ ಖಂಡಿತ ಮಾಡಿಕೊಡಲಾಗುತ್ತದೆ.

ಅಲ್ಲಾಹುವಿಗೆ ಪ್ರಾರ್ಥಿಸುತ್ತೇನೆ ಎಲ್ಲಾ ಜನರಿನೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದು ಅತಿ ಶೀಘ್ರವಾಗಿ ಶಾಧಿ ಭವನವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್. ಆರ್. ರವಿಕುಮಾರ್,ಇಸ್ಮಾಲ್ ಹುಸೇನ್, ನಯಾಜ್ ಪಾಷ,ಹ್ಯಾರೀಸ್, ಸಲೀಂ ,ಸಬ್ಬೀರ್ ಮುಖಂಡರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now