ವಿಜಯ ದರ್ಪಣ ನ್ಯೂಸ್…
ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಾಸಂತಿ ಅಮರ್ ಭೇಟಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊದ್ದಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಹಾಗೂ ಕೊಡಿಗೇಹಳ್ಳಿ, ಕಾಡನೂರು ಗ್ರಾಮ ಪಂಚಾಯತಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಾ. ವಾಸಂತಿ ಅಮರ್ ರವರು ಇಂದು ಭೇಟಿ ನೀಡಿದರು.
ಚಿಕ್ಕತುಮಕೂರು ಗ್ರಾಮದ ಕೆರೆಯಲ್ಲಿ ಕೈಗಾರಿಕೆಯ ತ್ಯಾಜ್ಯ ನೀರು ಬಿಡುವುದುನ್ನು STP ಪ್ಲಾಂಟ್ ಪರಿಶೀಲಸಿ ಜನರಿಗೆ ಕುಡಿಯುವ ನೀರು ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು,
ಕೊಡಿಗೇಹಳ್ಳಿ ಗ್ರಾಮದ ಕುರುಬರಹಳ್ಳಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಯ ಹೊಸ ಬೋರ್ವೆಲ್ ವೀಕ್ಷಣೆ ಮಾಡಿದರು ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರ ಜೊತೆ ಸಮಾಲೋಚಿಸಿದರು.
ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಾ. ಬಿ ಆರ್ ಅಂಬೇಡ್ಕರ್ ಮೆರಿಟ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ನಿಲಯದ ವಿದ್ಯಾರ್ಥಿಗಳ ಜೊತೆ ಸ್ವಚ್ಛತೆ ಮತ್ತು ಊಟದ ಬಗ್ಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ RWS AEE, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು/ ಸಿಬ್ಬಂದಿಗಳು ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದರು











