--Ads--

ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ: ಡಿಎಸ್ಎಸ್ ಜಿಲ್ಲಾ ಸಂಚಾಲಕ  ಎನ್ ಎ ವೆಂಕಟೇಶ್

On: August 8, 2025 2:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ: ಡಿಎಸ್ಎಸ್ ಜಿಲ್ಲಾ ಸಂಚಾಲಕ  ಎನ್ ಎ ವೆಂಕಟೇಶ್

ಶಿಡ್ಲಘಟ್ಟ : ಅನೇಕ ವರ್ಷಗಳಿಂದಲೂ ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಇಲ್ಲಿ ಜೆ.ಡಿ.ಎಸ್. ಶಾಸಕರು ಇದ್ದಾರೆ ಹಾಗಾಗಿ ಸಮಿತಿ ರಚನೆ ಆಗಿಲ್ಲ ಎನ್ನುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ , ರಾಜೀವ್ ಗೌಡ ಹಾಗು ಪುಟ್ಟು ಆಂಜಿನಪ್ಪ ಅವರ ಬೆಂಬಲಿಗರ ಬಣಗಳಿವೆ ಈ ಮೂರು ಬಣಗಳ ನಡುವೆ ದರಕಾಸ್ತು ಸಮಿತಿಗೆ ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಸೂಚಿಸುವಲ್ಲಿ ಒಮ್ಮತ ಮೂಡದ ಕಾರಣ ದರಕಾಸ್ತು ಸಮಿತಿಗೆ ನೇಮಕಾತಿ ಆಗಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ ಎಂದು ಹೇಳಿದರು.

ಹಲವು ವರ್ಷಗಳಿಂದಲೂ ಬಗ‌ರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗದ ಕಾರಣ ಸಾವಿರಾರು ಮಂದಿ ರೈತರಿಗೆ ತೊಂದರೆ ಆಗುತ್ತಿದ್ದು ಭೂಮಿ ವಂಚಿತರಾಗಿದ್ದಾರೆ ಸಮಿತಿ ರಚನೆ ಆಗದ ಕಾರಣ ರೈತರಿಗೆ ತೊಂದರೆ ಆಗುತ್ತಿದೆ ಎಂದರು.

ಅನೇಕ ವರ್ಷಗಳಿಂದಲೂ ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡು ತಾವು ಸ್ವಾಧೀನದಲ್ಲಿದ್ದು ಕೃಷಿ ನಡೆಸುತ್ತಿರುವವರು ಜಮೀನು ಮಂಜೂರಿಗಾಗಿ ಕಾದಿದ್ದಾರೆ ಎಂದು ನುಡಿದರು.

ಕೂಡಲೆ ಸಮಿತಿ ರಚನೆ ಆಗಬೇಕು ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಒಂದೊಮ್ಮೆ ಸಮಿತಿ ಇಲ್ಲದಿರುವಾಗ ಜಿಲ್ಲಾಧಿಕಾರಿ ಸಭೆ ನಡೆಸಿ ನಿಯಮದಂತೆ ಭೂಮಿ ಮಂಜೂರು ಮಾಡಲು ಅವಕಾಶವಿದೆ ಆ ಕೆಲಸವಾದರೂ ಆಗಬೇಕು ಎಂದು ಅವರು ಒತ್ತಾಯಿಸಿದರು.

ಯಾರು ಜಮೀನನ್ನು ನೀಡಲು ಸಿದ್ದರಿದ್ದಾರೋ ಅಂತಹ ರೈತರ ಜಮೀನನ್ನು ಮಾತ್ರವೇ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲು ಅಭ್ಯಂತರವಿಲ್ಲ, ಯಾರು ಜಮೀನು ನೀಡುವುದಿಲ್ಲವೋ ಅವರ ಜಮೀನನ್ನುಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಆಯ್ಕೆಯಾಗಿರುವ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ದೊಡ್ಡ ತಿರುಮಲಯ್ಯ, ಸಂಘಟನಾ ಸಂಚಾಲಕರಾದ ನರೇಶ್ , ರಾಜ್‌ಕುಮಾ‌ರ್, ಎನ್‌.ದ್ಯಾವಪ್ಪ, ಅರುಣಾ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್

ಸುಂಡ್ರಹಳ್ಳಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರನ್ನು  ವಿವಿಧ ಸಂಘಟನೆಗಳಿಂದ ಸನ್ಮಾನ

ಜಿಕೆವಿಕೆ ವಿದ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳ ಪ್ರದರ್ಶನ

ಮಕ್ಕಳಲ್ಲಿ ಪ್ರಶ್ನಿಸುವ, ಚಿಂತಿಸುವ ಮತ್ತು ಸ್ವತಂತ್ರವಾಗಿ ಕಲಿಯುವ ಮನೋಭಾವ ಬೆಳೆಸಬೇಕು : ಉಪನ್ಯಾಸಕಿ ವಾಣಿ

ಪುಟ್ ಪಾತ್ ಒತ್ತವರಿ ತೆರವುಗೊಳಿಸಲು ಅಂಗಡಿ ಮಾಲಿಕರಿಗೆ ನಗರಠಾಣೆ ಪಿಎಸ್ಐ ಸೂಚನೆ

ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗುತ್ತದೆ : ಎಸ್.ಎಸ್.ಅಬೀದ್