ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ನಿಂದ “ಹಾರ್ಡ್ ವರ್ಕರ್” ಅನಾವರಣ – ನಿರ್ಮಾಣ ರಾಸಾಯನಿಕ ಉತ್ಪನ್ನ ಸರಣಿಗೆ ಹೊಸ ಗುರುತು

ವಿಜಯ ದರ್ಪಣ ನ್ಯೂಸ್…..

ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ನಿಂದ “ಹಾರ್ಡ್ ವರ್ಕರ್” ಅನಾವರಣ – ನಿರ್ಮಾಣ ರಾಸಾಯನಿಕ ಉತ್ಪನ್ನ ಸರಣಿಗೆ ಹೊಸ ಗುರುತು

ಆಗಸ್ಟ್ 19, 2025: ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಇಂದು ತನ್ನ ನಿರ್ಮಾಣ ರಾಸಾಯನಿಕ ಉತ್ಪನ್ನ ಪೋರ್ಟ್ಫೋಲಿಯೋಗೆ ಹೊಸ ಗುರುತು “ಹಾರ್ಡ್ ವರ್ಕರ್” ಅನ್ನು ಘೋಷಣೆ ಮಾಡಿದೆ. ಅನ್ವೇಷಣೆ, ಸಾಮರ್ಥ್ಯ ಮತ್ತು ವಿಶ್ವಾಸವನ್ನು ಪ್ರತಿನಿಧಿಸುವ “ಹಾರ್ಡ್ ವರ್ಕರ್” ಹೆಸರು ಕಂಪನಿಯ ಭರವಸೆಯಾದ “ಸರಿಯಾದ ಅಪ್ಲಿಕೇಶನ್ಗೆ ಸರಿಯಾದ ಉತ್ಪನ್ನಗಳು” ಎಂಬ ಭರವಸೆಗೆ ಪೂರಕವಾಗಿದೆ.

“ಹಾರ್ಡ್ ವರ್ಕರ್” ಅಡಿಯಲ್ಲಿನ ಎಲ್ಲ ಉತ್ಪನ್ನಗಳನ್ನು ರಾಮ್ಕೋದ ಸ್ವಂತ ಉತ್ಪಾದನೆ ಘಟಕಗಳಲ್ಲಿ ತಯಾರಿಸಲಾಗಿದೆ. ಗುಣಮಟ್ಟ, ಸುಸ್ಥಿರತೆ ಮತ್ತು ನಿಯಂತ್ರಣಕ್ಕೆ ಸಂಸ್ಥೆ ಹೊಂದಿರುವ ಬದ್ಧತೆಗೆ ಇದು ಪೂರಕವಾಗಿದೆ. ಉತ್ಪಾದನೆ ಪ್ರಕ್ರಿಯೆಯು ಪರಿಸರ ಸ್ನೇಹಿಯಾಗಿದ್ದು, ಉತ್ಪನ್ನಗಳು ಸುಸ್ಥಿರ, ಸುರಕ್ಷಿತ ಮತ್ತು ವಿಸ್ತರಿಸಬಹುದಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಹಾರ್ಡ್ ವರ್ಕರ್ ಉತ್ಪನ್ನವು ಈಗ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಲಭ್ಯವಿದ್ದು, ರಾಮ್ಕೋದ ಉತ್ತಮ ಡೀಲರ್ ನೆಟ್ವರ್ಕ್ ಮೂಲಕ ವಿತರಿಸಲಾಗುತ್ತಿದೆ.

ಭಾರತದ ನಿರ್ಮಾಣ ರಾಸಾಯನಿಕ ಮಾರುಕಟ್ಟೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, 2030 ರ ವೇಳೆಗೆ 40 ಸಾವಿರ ಕೋಟಿ ರೂ.ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ತ್ವರಿತವಾಗಿ ನಗರೀಕರಣ, ಮೂಲಸೌಕರ್ಯ ವಿಸ್ತರಣೆ ಮತ್ತು ಬಾಳಿಕೆ ಬರಬಲ್ಲ ಹಾಗೂ ಉತ್ತಮ ಕಾರ್ಯಕ್ಷಮತೆಯ ಕಟ್ಟಡ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಕಾರಣವಾಗಿದೆ.

ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಆಧರಿತ ತಂತ್ರಜ್ಞಾನವನ್ನು ಹೊಂದಿರುವ ಮತ್ತು ಇನ್ ಹೌಸ್ ಉತ್ಪಾದನೆಯ ಮೇಲೆ ಹೆಚ್ಚಿನ ಗಮನ ಹರಿಸಿರುವ ಸಂಸ್ಥೆಯು ನಿರ್ಮಾಣ ಉದ್ಯಮದ ಅಗತ್ಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹೊಂದಿದೆ. ಭಾರತದ ನಿರ್ಮಾಣ ರಾಸಾಯನಿಕ ವಲಯದ ಭವಿಷ್ಯದ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ರಾಮ್ಕೋ ಸಿಮೆಂಟ್ಸ್ ಹೊಂದಿದೆ.

“ಹಾರ್ಡ್ ವರ್ಕರ್ ಕೇವಲ ಒಂದು ಬ್ರ್ಯಾಂಡ್ ಅಲ್ಲ. ಕನ್ಸ್ಟ್ರಕ್ಷನ್ ವರ್ಕರ್ಗಳು, ಬಿಲ್ಡರ್ಗಳು ಮತ್ತು ಮನೆ ಮಾಲೀಕರು ಸೇರಿದಂತೆ ಎಲ್ಲ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುವವರಿಗೆ ನಮ್ಮ ಅಭಿನಂದನೆಯ ಪ್ರತಿರೂಪ ಇದಾಗಿದೆ. ನಮ್ಮ ಗ್ರಾಹಕರು ವಿಶ್ವಾಸ ಇರಿಸಬಹುದಾದ ಅಪ್ಲಿಕೇಶನ್ ಆಧರಿತ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಈ ಬಿಡುಗಡೆಯು ಸಾಬೀತುಪಡಿಸುತ್ತದೆ” ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪಿ.ಆರ್.ವೆಂಕಟರಾಮ ರಾಜ ಹೇಳಿದ್ದಾರೆ.