--Ads--

ಸಾಮಾಜಿಕ ಜಾಲತಾಣಗಳ ಬರಹ ಕಿರು ಓದಿನ ಓದುಗರಿಗಿದು ಸಕಾಲ

On: January 7, 2026 5:36 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಾಮಾಜಿಕ ಜಾಲತಾಣಗಳ ಬರಹ ಕಿರು ಓದಿನ ಓದುಗರಿಗಿದು ಸಕಾಲ

ವಾಟ್ಸಪ್‌ನಲ್ಲಿ ಅವೆಷ್ಟೋ ಅಪರೂಪದ ಸಂಗತಿಗಳು ಬರುತ್ತವೆ. ಟೆಕ್ಟ್ ಮೆಸೇಜ್, ವೀಡಿಯೋ, ಫೋಟೋಗಳು, ಇನ್ನೇನೋ ಲಿಂಕ್ಸ್… ಓದುವುದಕ್ಕೆ ನೋಡುವುದಕ್ಕೆ ಅದೆಷ್ಟು ಸಂಗತಿಗಳು, ಅಬ್ಬಾ, ಪರಿಚಯದ ಹಿರಿಯರೊಬ್ಬರು ಹೇಳುತ್ತಿದ್ದರು. ಎಷ್ಟನ್ನೆಲ್ಲ ನೋಡುವುದು, ಏನೆಲ್ಲಾ ಓದುವುದು? ಹಾಗೆ ಓದಿದರೂ ಪುಸ್ತಕವೊಂದನ್ನು ಕುಳಿತು ಓದಿದ ಅನುಭವ ವಾಗುವುದಿಲ್ಲ, ಇದು ಅವರ ಮುಂದಿದ್ದ ಸಮಸ್ಯೆ.

ಹೌದು, ಜಗತ್ತು ಕಿರಿದಾಗಿದೆ. ಹೀಗಾಗಿ ನಮ್ಮ ಅಂಗೈ ಗೇನೇ ಓದಿನ ಸರಕೂ ಸೇರಿದಂತೆ ಬಹಳಷ್ಟು ಬಂದು ಕೂರುತ್ತವೆ ಬರೀ ವಾಟ್ಸಪ್‌ನಲ್ಲಿ ಹರಿದು ಬಂದು ಮೆಸೇಜ್‌ಗಳು, ಅಲ್ಲೆಲ್ಲೋ ಸಿಕ್ಕ ಲಿಂಕ್ ಮೂಲಕ ಓದುವ ಓದು ಎಲ್ಲವನ್ನೂ ಸೇರಿಸಿದರೂ ದಿನವೊಂದಕ್ಕೆ ನಾವು ಬಹಳಷ್ಟು ಓದಬಹುದು. ಎಷ್ಟೊಂದು ಸುಲಭ, ಪುಸ್ತಕ ಕೊಳ್ಳಬೇಕಿಲ್ಲ, ಹಿಡಿದು ಕೂರಬೇಕಿಲ್ಲ ಅನ್ನುವುದು ಹಲವ ರಿಗೆ ಇಷ್ಟ ಮತ್ತು ಬಹಳ ಅನುಕೂಲ. ಓದುವುದಕ್ಕೇನೋ ರಾಶಿ ರಾಶಿ ಇರುತ್ತದೆ. ಆದರೆ ಒಂದು ಪುಸ್ತಕ ಓದಿದ ಅನುಭವವಾಗುವುದಿಲ್ಲ ಎಂಬುದು ಮಾತ್ರ ಹೆಚ್ಚಿನವರು ಅನಿಸಿಕೆ. ನಮ್ಮ ಓದು ಎಷ್ಟು ತೆಳುವಾಗುತ್ತಿದೆ ಎಂಬು ದನ್ನು ಆ ಅಭಿಪ್ರಾಯಗಳು ಹೇಳುತ್ತದೆ.

ಇದು ಎಲ್ಲರೂ ಬಿಝಿಯಾಗಿರುವ ಕಾಲ ವೃತ್ತಿ, ವೈಯಕ್ತಿಕ ಬದುಕಿನ ಹಲವು ಬದ್ದತೆಗಳ ನಡುವೆ ಎಲ್ಲರೂ ಸಮಯದ ಹಿಂದೆ ಓಡುತ್ತಿರುವವರೇ ಎಲ್ಲ, ಹೀಗಾಗಿ ನಡೆವ ದಾರಿಯಲ್ಲಿ ಹೆಚ್ಚಿನವರಿಗೆ ಸುಲಭದಾರಿ ಬೇಕು. ಯಾವುದರಲ್ಲಿ ಬೇಗ ಆಗುತ್ತದೆ ಎಂಬುದರತ್ತಲೇ ಹೆಚ್ಚಿನ ವರ ಗಮನ, ಓದುವಿಕೆಯೂ ಇದೇ ರೀತಿ ಕಿರು ಅವಧಿ ಯದ್ದಾಗಿದೆ.

ಈಗೆಲ್ಲ ವಾಟ್ಸಾಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಮಾಹಿತಿಗಳೇ ಇರುತ್ತವೆ ಹಲವರು ತಾವು ಓದಿದ್ದನ್ನೇನೋ ಹಂಚಿಕೊಳ್ಳ ಬಹುದು. ಇನ್ನಾರೋ ಕೃತಿಯೊಂದರ ಬಗ್ಗೆ ವಿಮರ್ಶೆ ಬರೆದಿರಬಹುದು. ಮತ್ತಾರೋ ಚರ್ಚೆಯೊಂದನ್ನು ಹುಟ್ಟುಹಾಕಬಹುದು. ಅದಕ್ಕೆ ಪರ-ವಿರೋಧದ ವಾದ ಗಳೆರಡೂ ಅಲ್ಲಿಯೇ ದಾಖಲಾಗಿ ಆಸಕ್ತಿದಾಯಕ ಚರ್ಚೆಯೂ ಮೂಡಿಬರಬಹುದು. ಇವನ್ನೆಲ್ಲ ನೋಡುತ್ತೇವೆ, ಕಣ್ಣಾಡಿಸುತ್ತೇವೆ ಇಂತವುಗಳ ಮಧ್ಯೆ ಹಾದು ಹೋದಂತೆ ಒಳ್ಳೆಯದೇನೋ ಓದಿದ ಖುಷಿ ನಮ್ಮಲ್ಲಿ ಮೂಡುತ್ತದೆ ನಿಜ, ಆದರೆ ಇವೆಲ್ಲವೂ ನಾವು ಬಯಸುವ ಅಥವಾ ಅಂದುಕೊಳ್ಳುವ ಗಂಭೀರ ಓದು ಆಗಿರುವು ದಿಲ್ಲ. ವಾಟ್ಸಪ್ ಗ್ರೂಪ್ ಒಂದರಲ್ಲಿ ಕಾವ್ಯದ ಬಗ್ಗೆ ಕೊಂಚ ಚರ್ಚೆ ಓದಿಕೊಂಡು ಅತ್ತ ಹೊರಳಿದರೆ, ಇನ್ನೊಂದು ಗ್ರೂಪ್‌ನಲ್ಲಿ ಕಥೆಯೊಂದು ಹಾರಿ ಬರ ಬಹುದು, ಮತ್ತೊಂದು ಗ್ರೂಪ್‌ನಲ್ಲಿ ಫಿಟೈಸ್ ಬಗ್ಗೆ ಟಿಪ್ಸ್ ಇಬಹುದು. ಇದೇ ವೇಳೆ ಫೇಸ್‌ಬುಕ್‌ನಲ್ಲಿ ಹೊಸ ಕವನ ವೊಂದು ಎದುರಾಗಬಹುದು. ಹೀಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಓದಿ ಬಂದಿರುತ್ತೇವಷ್ಟೇ ಹೊರತು, ಒಂದೇ ವಿಷಯದ ಬಗ್ಗೆ ಗಮನವಿಟ್ಟು ಏಕಾಗ್ರತೆಯ ಓದು ಆಗಿರುವುದೇ ಇಲ್ಲ. ಯಾವುದಾದರೊಂದು ವಿಷಯದಲ್ಲಿ ಗಾಢ ಓದು, ಓದಿ ಮುಗಿಸಿದೆ ಎಂಬ ತೃಪ್ತಿ ಸಿಗುವುದೂ ಇಲ್ಲ ಎಂಬುವುದು ಹಲವರ ಅಭಿಪ್ರಾಯ.

ಅಲ್ಲಲ್ಲಿ ಕೈಗೆ ಸುಲಭವಾಗಿ ಮಾಹಿತಿ ಹರಿದು ಬರು ವಾಗ ಅದನ್ನು ಓದಿಬಿಡುತ್ತೇವೆ, ಅಂದರೆ ನಮ್ಮ ನಿಜದ ಓದಿನ ಸಮಯ ಇಲ್ಲೇ ಒಂದಷ್ಟು ಸೋರಿ ಹೋದಂತಾ ಯಿತು. ಇಲ್ಲಿ ಹೋದ ಸಮಯವನ್ನು ಇನ್ನೆಲ್ಲೋ ಸರಿ ಹೊಂದಿಸಬೇಕೆಂದರೆ ಪುಸ್ತಕ ಹಿಡಿದು ಕೂರುವ ಸಮಯವನ್ನು ಕಡಿತಗೊಳಿಸುವುದೇ ಆಗಿರುತ್ತದೆ. ಪುಸ್ತಕದ ಆಳ ಓದು ಕಡಿಮೆಯಾಗುವುದು ಹೀಗೆ ನಮಗೇ ಗೊತ್ತಿಲ್ಲದಂತೆ ನಮ್ಮ ಓದಿನ ರೀತಿ ಬದಲಾಗು ವುದು ಹೀಗೆ.

ಸೋಶಿಯಲ್ ಮೀಡಿಯಾದ ಓದಿನ ಹೊರತಾ ಗಿಯೂ ವಿಸ್ತ್ರತ ಓದು ನಮ್ಮದಾಗಬೇಕೆಂದರೆ ನಾವು ಆ ಬಗ್ಗೆ ಗಮನಹರಿಸಬೇಕು, ಅದಕ್ಕಾಗಿ ಸಮಯ ಮೀಸಲಿ ಡಲೇಬೇಕು. ಅಗತ್ಯವಿದ್ದಲ್ಲಿ ಜಾಲತಾಣಗಳಲ್ಲಿ ಅನಗತ್ಯ ವಾಗಿ ಸಮಯ ಸೋರಿ ಹೋಗುವುದನ್ನು ಕಡಿತಗೊಳಿಸ ಬೇಕು. ಸೋಶಿಯಲ್ ಮೀಡಿಯದಲ್ಲಿ ಸಿಗುವ ಜ್ಞಾನ ವೆಂದರೆ ಇಡೀ ಓದಿನ ಲೋಕದ ಪಕ್ಷಿನೋಟವಿದ್ದಂತೆ ಎನ್ನಬಹುದು. ಪಕ್ಷಿ ಎತ್ತರದಲ್ಲಿ ಹಾರುವಾಗ ಕಂಡುದನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕೆಂದರೆ ಹತ್ತಿರಕ್ಕೆ ಹೋಗುತ್ತದಲ್ಲವೇ, ನಮ್ಮ ಓದೂ ಅದರಂತೆಯೇ ಇರ ಬೇಕು. ಜಾಲತಾಣಗಳಲ್ಲಿ ಯಾವುದೋ ಕೃತಿಯ ಬಗ್ಗೆ ಸಿಕ್ಕ ಮಾಹಿತಿ ನಮ್ಮ ಮುಂದಿನ ಓದಿಗೆ ಮಾರ್ಗ ಸೂಚಿಯಾಗಬೇಕು. ಆ ಕೃತಿಯನ್ನು ಕೈಗೆತ್ತಿ ಓದಲು ಪ್ರೇರಣೆಯಾಗಬೇಕು. ಇಲ್ಲಿನ ಚರ್ಚೆಗಳೇ ನಮ್ಮ ಆಳ ತಿಳಿವಳಿಕೆಗೆ ಸ್ಫೂರ್ತಿಯಾಗಬೇಕು. ಹಾಗಾದಾ ಗಲಷ್ಟೇ ನಮ್ಮ ಓದು ವಿಸ್ತ್ರತವಾಗಬಹುದು. ಇಲ್ಲವಾದರೆ ಸೋಶಿಯಲ್ ಮೀಡಿಯಾದ ಕಿರುಓದಿನ ಅಲ್ಪತೃಪ್ತ ರಾಗಿಯೇ ನಾವು ಉಳಿಯುತ್ತೇವೆ.

ಲೇಖನ: ಶೋಭಾ ಎಂ.ಜಿ ಹಳ್ಳಿಕಾ‌ರ್

WhatsApp

Join Now

Telegram

Join Now

Instagram

Join Now