77ನೇ ಗಣರಾಜ್ಯೋತ್ಸವ ದಿನಾಚರಣೆ: ಸಚಿವ ಕೆ ಎಚ್ ಮುನಿಯಪ್ಪ ಅವರಿಂದ ಧ್ವಜಾರೋಹಣ

ವಿಜಯ ದರ್ಪಣ ನ್ಯೂಸ್….

 77ನೇ ಗಣರಾಜ್ಯೋತ್ಸವ ದಿನಾಚರಣೆ: ಸಚಿವ ಕೆ ಎಚ್ ಮುನಿಯಪ್ಪ ಅವರಿಂದ ಧ್ವಜಾರೋಹಣ

ದೇವನಹಳ್ಳಿ ಬೆಂ.ಗ್ರಾ.ಜಿಲ್ಲೆ, ಜನವರಿ.26 :

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ “77ನೇ ಗಣರಾಜ್ಯೋತ್ಸವ”ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತ್ರಿವರ್ಣ ಧ್ವಜಕ್ಕೆ ಗೌರವ ನಮನ ಸಲ್ಲಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ವಂದನೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಆರ್. ನಾರಾಯಣಸ್ವಾಮಿ ಹಾಗೂ ಅಂಗಾಂಗ ದಾನ ಮಾಡಿರುವ ಕುಟುಂಬದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ ಸುಧಾಕರ್, ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌.ಕೆ.ಎನ್. ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಎಂ.ವಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಮುಖಂಡರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

* ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು, ಜನಸಮಾನ್ಯರ ಆಹಾರ ಭದ್ರತಾ ವಿಷಯದಲ್ಲಿ ಒಂದು ಮೈಲಿಗಲ್ಲು ಎಂದು ಭಾವಿಸಲಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಜುಲೈ-2023 ರ ಮಾಹೆಯಿಂದ ಆದ್ಯತಾ ಪಡಿತರ ಚೀಟಿ ಮತ್ತು ಅಂತೋದ್ಯಯ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ಪ್ರತಿ ಮಾಹೆಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 1,24,20,335 ಪಡಿತರ ಚೀಟಿಗಳಿದ್ದು, 4,41,89,085 ಫಲಾನುಭವಿಗಳು ಈ ಯೋಜನೆಯ ಮೂಲಕ ಉಪಯೋಗ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 11,821.17 ಕೋಟಿ ರೂ ವೆಚ್ಚವಾಗಿದೆ.

* ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2 ಲಕ್ಷದ 24 ಸಾವಿರ ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲವಾಗಿದೆ.

* 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಮೀಸಲಾತಿಯಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯಗಳ ನಿರುದ್ಯೋಗ ಯುವಕರಿಗೆ ಅನುಕೂಲಕರವಾಗಲು ಸುಮಾರು 3517 ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡಿದ್ದು, ಹಂಚಿಕೆಯ ಕಾರ್ಯ ಪುಗತಿಯಲ್ಲಿದೆ.

* ಅನ್ನಭಾಗ್ಯ ಅಕ್ಕಿಯ ಜೊತೆಗೆ ಇಂದಿರಾ ಆಹಾರ ಕಿಟ್ (ಪೌಷ್ಠಿಕಯುಕ್ತ) ವಿತರಿಸಲು ತೀರ್ಮಾನಿಸಲಾಗಿದೆ. ವಿತರಣೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ ಅಥವಾ ಮಾರ್ಚ್-2026 ತಿಂಗಳಲ್ಲಿ 5 ಕೆ.ಜಿ. ಪಡಿತರ ಅಕ್ಕಿ ಜೊತೆಗೆ ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಮುಂತಾದ ಆಹಾರ ಸಾಮಾಗ್ರಿಗಳನ್ನೊಳಗೊಂಡ ಇಂದಿರಾ ಕಿಟ್ ಮೂಲಕ ವಿತರಿಸಲಾಗುವುದು. ಈ ಉದ್ದೇಶಕ್ಕಾಗಿ ಸರ್ಕಾರ ವರ್ಷಕ್ಕೆ ರೂ. 6420 ಕೋಟಿ ಅನುದಾನವನ್ನು ಒದಗಿಸಿರುತ್ತದೆ.

* ಶಕ್ತಿ ಯೋಜನೆಯು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ನಮ್ಮ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈವರೆಗೆ ರೂ. 638 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿದ್ದು, ಈ ಉದ್ದೇಶಕ್ಕಾಗಿ ರೂ. 16,479 ಕೋಟಿಗಳನ್ನು ಖರ್ಚು ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭದಿಂದ ಇಲ್ಲಿವರೆಗೆ ಒಟ್ಟು 10 ಕೋಟಿ 47 ಲಕ್ಷ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

* ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲು ರಾಜ್ಯದ ಒಟ್ಟು 1.65 ಕೋಟಿ ಫಲಾನುಭವಿಗಳಿಗೆ ರೂ. 21,239 ಕೋಟಿಗಳನ್ನು ವ್ಯಯ ಮಾಡಲಾಗಿದೆ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 3,47,663 ಸಂಖ್ಯೆ ಗೃಹಬಳಕೆ ಗ್ರಾಹಕರಿದ್ದು, 3,31,441 ಸಂಖ್ಯೆ ಗ್ರಾಹಕರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದುವರೆವಿಗೂ ಒಟ್ಟು ರೂ. 419.42 ಕೋಟಿ ಸಹಾಯಧನ ನೀಡಲಾಗಿದೆ.

* ಗೃಹಲಕ್ಷ್ಮಿ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಪ್ರತಿ ಮನೆ ಯಜಮಾನಿಗೆ ರೂ. 2000 ದಂತೆ ರಾಜ್ಯದಲ್ಲಿರುವ 1.24 ಕೋಟಿ ಫಲಾನುಭವಿಗಳಿಗೆ ಇಲ್ಲಿಯವರೆಗೆ ರೂ. 57,381 ಕೋಟಿ ಹಣವನ್ನು DBT ಮೂಲಕ ಕುಟುಂಬದ ಯಜಮಾನಿ ಖಾತೆಗೆ ವರ್ಗಾವಣೆ ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2,18,241 ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, 24 ಕಂತುಗಳಲ್ಲಿ ರೂ. 915 ಕೋಟಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

* ಯುವನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 2.98 ಲಕ್ಷ ವಿದ್ಯಾವಂತ ನಿರುದ್ಯೋಗ ಯುವಕ/ ಯುವತಿಯವರಿಗೆ ರೂ. 874 ಕೋಟಿ ರೂಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3944 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿರುತ್ತಾರೆ. ನವೆಂಬರ್-2025 ರ ಅಂತ್ಯದವರೆಗೆ 3163 ಫಲಾನುಭವಿಗಳು ಯುವನಿಧಿ ಯೋಜನೆಯ ಪ್ರಯೋಜನ ಪಡೆದುಕೊಂಡಿರುತ್ತಾರೆ.

* ಕೃಷಿ ಭಾಗ್ಯ ಯೋಜನೆಯಡಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ಕೃಷಿಭಾಗ್ಯ ಯೋಜನೆಯಡಿ ಇದುವರೆಗೂ ರೂ. 91.61 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 72.09 ಲಕ್ಷ ವೆಚ್ಚದಲ್ಲಿ 93 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ.

* ಕೃಷಿ ಯಾಂತ್ರೀಕರಣ ಯೋಜನೆಯಡಿ ಇದುವರೆಗೂ ರೂ. 147.70 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಒಟ್ಟು ರೂ. 132.05 ಲಕ್ಷ ವೆಚ್ಚದಲ್ಲಿ 314 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ.

* ತೋಟಗಾರಿಕೆ ಇಲಾಖಾ ವತಿಯಿಂದ ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ವಲಯ ಯೋಜನೆಗಳಡಿ ಜಿಲ್ಲೆಯಲ್ಲಿ ಇದುವರೆಗೂ ರೂ.1579.10 ಲಕ್ಷಗಳ ಅನುದಾನವನ್ನು ವೆಚ್ಚ ಮಾಡಿದ್ದು, ಈ ಯೋಜನೆಯಡಿ 3023.60 ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ ಒದಗಿಸಲಾಗಿದೆ.
* ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ “ಮನೆಗೊಂದು ಉದ್ಯೋಗ” ನೀಡುವ ಸಂಕಲ್ಪದೊಂದಿಗೆ ಸುಮಾರು 4250 ನಿರುದ್ಯೋಗ ಯುವಕ/ ಯುವತಿಯರಿಗೆ ಉದ್ಯೋಗ ಕಲ್ಪಿಸಲಾಗಿದೆ

* ಜಿಲ್ಲೆಯಲ್ಲಿ 1072 ಗ್ರಾಮಗಳಿದ್ದು, ಪತಿ “ಊರಿಗೆ ಒಂದು ರುದ್ರಭೂಮಿ” ಇರಲೇಬೇಕೆಂಬ ಉದ್ದೇಶದಿಂದ 936 ಗ್ರಾಮಗಳಿಗೆ ಜಮೀನು ಒದಗಿಸಿ, ರುದ್ರಭೂಮಿ ವ್ಯವಸ್ಥೆ ಮಾಡಲಾಗಿದೆ. ಉಳಿದ 136 ಗ್ರಾಮಗಳು ಬೇಚಾರಕ್ ಗ್ರಾಮಗಳಾಗಿರುತ್ತವೆ.

* ಮಹಾತ್ಮ ಗಾಂಧಿಜಿಯವರ “ಸ್ವಚ್ಛ ಭಾರತದ ಕನಸಿನಂತೆ” ಗ್ರಾಮಗಳ ಅಭಿವೃದ್ಧಿಯೊಂದಿಗೆ ಸ್ವಚ್ಛವಾಗಿರಲು ಘನತ್ಯಾಜ್ಯ ವಿಲೇವಾರಿಯನ್ನು ಜಿಲ್ಲೆಯಾದ್ಯಂತ ಮಾಡುತ್ತಿದ್ದು, 101 ಗ್ರಾಮ ಪಂಚಾಯಿತಿಗಳಲ್ಲಿ 95 ಎಕರೆ ಭೂಮಿಯನ್ನು ಮೀಸಲಿಟ್ಟು, ವಿಲೇವಾರಿ ಘಟಕ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತಿದೆ.

* ರಾಜ್ಯದಲ್ಲಿಯೇ ಬೆಂಗಳೂರು ಉತ್ಪಾದನೆಯಲ್ಲಿ ಗ್ರಾಮಾಂತರ ಜಿಲ್ಲೆಯು 8ನೇ ಸ್ಥಾನದಲ್ಲಿದ್ದು, ಪ್ರತಿನಿತ್ಯ 4.60 ಲಕ್ಷ ಲೀಟ‌ರ್ ಹಾಲನ್ನು ಜಿಲ್ಲಾದ್ಯಂತ 33,509 ರೈತರಿಂದ 815 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಸಂಗ್ರಹಿಸಲಾಗುತ್ತಿದೆ.

* ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೈಗಾರಿಕಾ ಪ್ಲಾಟ್ ಹಾಗೂ ಭೂಮಿಯನ್ನು ಉದ್ಯಮಿಗಳಿಗೆ ಹಂಚಿಕೆಗಾಗಿ 162 ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ಜಿಲ್ಲೆಯಲ್ಲಿ ರೂ. 1421.85 ಕೋಟಿಗಳ ಬಂಡವಾಳ ಹೂಡಿಕೆಯಾಗಿ, 9819 ಜನರಿಗೆ ಉದ್ಯೋಗವಕಾಶ ಸೃಷ್ಟಿಯಾಗಿದೆ.

* ಮುಖ್ಯಮಂತ್ರಿ ಆಶ್ರಯ ನಿವೇಶನ ಯೋಜನೆಯಡಿ ಇಲ್ಲಿಯವರೆಗೆ 291.04 ಎಕರೆ ಜಮೀನುಗಳಲ್ಲಿ 8144 ನಿವೇಶನಗಳನ್ನು ರಚನೆ ಮಾಡಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಗೆ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

* ಈಗಾಗಲೇ ಒಟ್ಟು 1361 ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಲಾಗಿದೆ.

* ಪೋಡಿ ಮುಕ್ತ ಗ್ರಾಮ ಅಭಿಯಾನದಡಿ ಜಿಲ್ಲೆಯಲ್ಲಿ 59,470 ಹೊಸ ಪಹಣಿಗಳನ್ನು ಸೃಜಿಸಲಾಗಿದೆ.

* ಪೌತಿ ಖಾತೆ ಆಂದೋಲನದಡಿ ಈವರೆಗೆ 10,309 ಖಾತೆದಾರರ ವಾರಸುದಾರರಿಗೆ ಇ-ಕೆವೈಸಿ ಪೂರ್ಣಗೊಂಡಿದ್ದು, 74000 ಖಾತೆದಾರರ ವಾರಸುದಾರರಿಗೆ ಖಾತೆ ಮಾಡಲಾಗಿದೆ.

* ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯಲ್ಲಿ 1,12,09,198 ಭೂ ದಾಖಲೆಗಳ ಪುಟಗಳನ್ನು ಸ್ಕ್ಯಾನ್ ಮತ್ತು ಅಪ್ಲೋಡ್ ಮಾಡಿ ಸರ್ಕಾರದ ಅಧಿಕೃತ ಅಂತರ್ಜಾಲದ ಪೋರ್ಟಲ್‌ನಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ.

* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿನಲ್ಲಿ 12 ಲಕ್ಷ ಮಾನವ ದಿನಗಳ ಕೆಲಸದ ಗುರಿ ಹೊಂದಿದ್ದು, ಇಲ್ಲಿಯವರೆಗೆ 8.928 ಲಕ್ಷಗಳ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಡಿಸೆಂಬರ್ ಮಾಹೆಯ ಸಂಚಿತ ಗುರಿಗೆ ಶೇಕಡ 87.63% ರಷ್ಟು ಪ್ರಗತಿ ಸಾಧಿಸಲಾಗಿದೆ.ಐ

* ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಎಮ್‌ಎಫ್ ನಿಧಿಯಿಂದ ಹಿರಿಯ ನಾಗರಿಕರಿಗೆ ವಿಶೇಷವಾಗಿ 5000 ಊರುಗೋಲುಗಳನ್ನು ವಿತರಿಸಲಾಗಿದೆ.

* ರಾಜ್ಯ ಹೆದ್ದಾರಿ ರಸ್ತೆ ನಿರ್ವಹಣೆ ಮಾಡಲು ರೂ. 252.29 ಲಕ್ಷ ಅನುದಾನ ಮತ್ತು 1032.8 ಕೀ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಯನ್ನು ನಿರ್ವಹಣೆ ಮಾಡಲು 1193.65 ಲಕ್ಷಗಳ ಅನುದಾನ ಒದಗಿಸಿದ್ದು ಕಾಮಗಾರಿಗಳು ಪ್ರಗತಿಯಲ್ಲಿದೆ.

* ದೇವನಹಳ್ಳಿ ಪಟ್ಟಣದ ದೇವನಹಳ್ಳಿ ಟೌನ್ ಕ್ರೀಡಾಂಗಣ ವನ್ನು ರೂ.13.42/- ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಸರ್ಕಾರ ವತಿಯಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿ ಬಳಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ರೂ. 25 ಕೋಟಿ ಒದಗಿಸಲು ಸರ್ಕಾರದಿಂದ ತಾತ್ವಿಕ ಅನುಮೋದನೆ ನೀಡಲಾಗಿದೆ.

* ಜಿಲ್ಲೆಗೆ ಎತ್ತಿನಹೊಳೆ ನೀರು, ಕಾವೇರಿ ನೀರು ಹಾಗೂ ಮೆಟ್ರೊ ತರಲು ಕಾರ್ಯ ಪ್ರವೃತ್ತನಾಗಿದ್ದೇನೆ.

* ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 2023-2024 ರಿಂದ 2025-2026ನೇ ಸಾಲಿನವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ. 144/- ಕೋಟಿಗಳ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.

* 2023-2024 ಹಾಗೂ 2025-2026 ನೇ ಸಾಲಿನವರೆಗೆ ವಿವಿಧ ಇಲಾಖೆಗಳ ನಿರ್ವಹಿಸಿದ ಮತ್ತು ನಿರ್ವಹಿಸುತ್ತಿರುವ ಕಾಮಗಾರಿಗಳು ಸಮಾಜ ಕಲ್ಯಾಣ ಇಲಾಖೆಗೆ ರೂ.7.50/-ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿವೆ.

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ರೂ.8.50/-ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್ ಸಂಸ್ಥೆ ವತಿಯಿಂದ ರೂ.65.00 ಕೋಟಿಗಳಷ್ಟು ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿವೆ.
* ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 2023-2024 ರಿಂದ 2025-2026 ಸಾಲಿನವರೆಗೆ ನಿರ್ಮಿತಿ ಕೇಂದ್ರ ಮುಖಾಂತರ ರೂ.33.00/-ಕೋಟಿಗಳ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.

* ಲೋಕೋಪಯೋಗಿ ಇಲಾಖೆ ವತಿಯಿಂದ BIAPPA ಕಛೇರಿ ಕಟ್ಟಡ ಕಾಮಗಾರಿಯು ರೂ.6.45/-ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ (ST HOSTEL) ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿ ಮೊತ್ತ ರೂ.6.30/-ಕೋಟಿ 18/21 ಅದಾಯ ತೆರಿಗೆ ಇಲಾಖೆಯ ಆವರಣದಲ್ಲಿ ಶೆಡ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿ ರೂ.89/-ಲಕ್ಷಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ.

* ದೇವನಹಳ್ಳಿ ಬೆಸ್ಕಾಂ ವತಿಯಿಂದ ದೇವನಹಳ್ಳಿ ಪಟ್ಟಣದಲ್ಲಿ ಹಳೆಯ 11 ಕೆ.ವಿ ಹಾಗೂ ಎಲ್.ಟಿ ಲೈನುಗಳ ಮೇಲ್ತಂತಿಗಳನ್ನು ತೆಗೆದು ಹೊಸದಾಗಿ ಭೂಗತ ಕೇಬಲ್ ಅಳವಡಿಸುವುದು ಮತ್ತು ವಿದ್ಯುತ್ ಜಾಲದ ಉನ್ನತೀಕರಣ ಮೊತ್ತ ರೂ.40.51 ಕೋಟಿಗಳ ಕಾಮಗಾರಿ ಪ್ರಗತಿಯಲ್ಲಿವೆ.

* ವಿಜಯಪುರ ಪಟ್ಟಣದಲ್ಲಿ ಹಳೆಯ 11 ಕೆ.ವಿ ಹಾಗೂ ಎಲ್.ಟಿ ಲೈನುಗಳ ಮೇಲ್ತಂತಿಗಳನ್ನು ತೆಗೆದು ಹೊಸದಾಗಿ ಭೂಗತ ಕೇಬಲ್ ಅಳವಡಿಸುವುದು ಮತ್ತು ವಿದ್ಯುತ್ ಜಾಲದ ಉನ್ನತೀಕರಣ ಮೊತ್ತ ರೂ.25.00/-ಕೋಟಿಗಳ ಕಾಮಗಾರಿ ಪುಗತಿಯಲ್ಲಿವೆ.

* ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರ 2023-24ನೇ ಸಾಲಿನಿಂದ 2025-26ನೇ ಸಾಲಿನವರೆಗೆ ದೇವನಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ (ದೇವನಹಳ್ಳಿ ಟೌನ್ ಮತ್ತು ವಿಜಯಪುರ ಟೌನ್ ಒಳಗೊಂಡಂತೆ) ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಯೋಜನೆಗಳ ರೂ.15.00/-ಕೋಟಿ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ.

* ಸಣ್ಣ ನೀರಾವರಿ ಇಲಾಖೆಯ ವತಿಯಿಂದ 2 ಕೆರೆ ಅಭಿವೃದ್ಧಿಗಾಗಿ ರೂ.5.00/- ಕೋಟಿ ಹಾಗೂ 13 ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ರೂ.8.00/-ಕೋಟಿ, 1 ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ರೂ.5.00/-ಕೋಟಿ ಮತ್ತು 110 ಕೊಳವೆಬಾವಿ ಕೊರೆಯಲು ರೂ.8.05/- ಕೋಟಿಗಳ ಒಟ್ಟಾರೆ ರೂ.26.05/-ಕೋಟಿಗಳ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ.

* ದೇವನಹಳ್ಳಿಯ ಟೌನ್‌ನಲ್ಲಿ ರೂ.3.70/-ಕೋಟಿ ಮೊತ್ತದಲ್ಲಿ ನೂತನವಾಗಿ ದೇವನಹಳ್ಳಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.

* ದೇವನಹಳ್ಳಿಯ ಆವತಿಯಲ್ಲಿ ರೂ.100.00/-ಕೋಟಿ ಮೊತ್ತದ ನೂತನವಾಗಿ ಕಾರಗೃಹ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.

* ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 479.32/- ಕೋಟಿಗಳ ಕಾಮಗಾರಿಗಳು ಪ್ರಗತಿಯಲ್ಲಿವೆ.