ಗಣರಾಜ್ಯೋತ್ಸವದ ಪ್ರಯುಕ್ತ ಸ್ಪಂದನ ಕಪ್-2026 ಬ್ಯಾಡ್ಮಿಂಟನ್ ಪಂದ್ಯಾವಳಿ
ವಿಜಯ ದರ್ಪಣ ನ್ಯೂಸ್……
ಗಣರಾಜ್ಯೋತ್ಸವದ ಪ್ರಯುಕ್ತ ಸ್ಪಂದನ ಕಪ್-2026 ಬ್ಯಾಡ್ಮಿಂಟನ್ ಪಂದ್ಯಾವಳಿ

ಬೆಂಗಳೂರು ಶಂಕರಮಠ: ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ಸ್ಪಂದನ ಕಪ್-2026 ಆಯೋಜನೆ.
ಚಲನಚಿತ್ರ ನಟಿಯರುಗಳಾದ ಕುಮಾರಿ ಶರಣ್ಯ ಶೆಟ್ಟಿರವರು, ಕುಮಾರಿ ರೀತ್ವಿ ಜಗದೀಶ್ ರವರು, ನಟ ಪ್ರಣವ್ ಕ್ಷೀರಸಾಗರ್, ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜುರವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸದಾಶಿವಶೆಣೈರವರು, ಸ್ಪಂದನ ಸಂಸ್ಥೆ ಅಧ್ಯಕ್ಷ ಆರ್.ಸುಧೀಂದ್ರಕುಮಾರ್, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಮಲ್ಲಿಕಾ, ಉಪಾಧ್ಯಕ್ಷ ಪ್ರಕಾಶ್ ನಾರಾಯಣ್, ಪ್ರಧಾನ ಕಾರ್ಯದರ್ಶಿ ರುದ್ರೇಶ್ ರವರು ದೀಪ ಬೆಳಗಿಸಿ ಸ್ಪಂದನ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿದರು.

ನಟಿ ಶರಣ್ಯ ಶೆಟ್ಟಿರವರು ಮಾತನಾಡಿ ಎಲ್ಲರು ಆರೋಗ್ಯವಂತರಾಗಿ ಇರಬೇಕು,ದೃಹಿಕವಾಗಿ ಉತ್ತಮವಾಗಿ ಇರಬೇಕು ಎಂದರೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇಂದು ಸಮಾಜದಲ್ಲಿ ಯುವಕರು ಜಾಗ್ರತರಾಗಬೇಕು ಕೆಟ್ಟ ಅಭ್ಯಾಸ,ದುಷ್ಟ ಚಟಗಳಿಂದ ದೂರವಿರಬೇಕು ಎಂದರೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು.
ನಟಿ ರೀತ್ವಿ ಜಗದೀಶ್ ಅವರು ಮಾತನಾಡಿ ಒತ್ತಡ ಜೀವನದಿಂದ ಮುಕ್ತರಾಗಿ ಇರಬೇಕು ಎಂದರೆ ಕೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿಡಿಯೊ ಗೇಮ್ಸ್ ಮತ್ತು ಮೊಬೈಲ್ ನೋಡುವ ಯುವಕರು ತಮ್ಮ ಜೀವ, ಜೀವನದ ಆರೋಗ್ಯಕ್ಕೆ ದೈನಂದಿನ ದಿನದಲ್ಲಿ ವಾಕಿಂಗ್, ಬ್ಯಾಡ್ಮಿಂಟನ್ ಇನ್ನಿತರೆ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು.
ನಟ ರಣವ್ ಕ್ಷೀರಸಾಗರ್ ಅವರು ಮಾತನಾಡಿ ಬೆಂಗಳೂರುನಗರ ಎಲ್ಲ ಕಡೆಗಳಲ್ಲಿ ಕ್ರೀಡಾಂಗಣಗಳು ನಿರ್ಮಾಣ ಮಾಡಬೇಕು, ಜನರು ಯೋಗ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಯಸ್ಸು ಮುಖ್ಯವಲ್ಲ ನಾವು ಎಷ್ಟು ಆರೋಗ್ಯವಂತರಾಗಿ ಇದ್ದೀವಿ ಎಂಬುದು ಮುಖ್ಯ. ದೃಹಿಕವಾಗಿ ಎಲ್ಲರು ಫೀಟ್ ಆಗಬೇಕು ಎಂದು ಹೇಳಿದರು.
ಸದಾಶಿವಶೆಣೈರವರು ಮಾತನಾಡಿ ನಮಗೆ ಎಷ್ಟೆ ಕೆಲಸದ ಒತ್ತಡವಿದ್ದರು ನಮ್ಮ ಜೀವನಕ್ಕೆ ಅಗತ್ಯವಿರುವ ವ್ಯಾಯಾಮಕ್ಕಾಗಿ ಪ್ರತಿದಿನ ಒಂದು ಗಂಟೆ ಕ್ರೀಡಾ ಚಟುವಟಿಕೆ ಮೀಸಲು ಇಡಬೇಕು. ನಮ್ಮ ದೇಹ ನಾವೇ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಎಮ್.ಶಿವರಾಜುರವರು ಮಾತನಾಡಿ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕಳೆದ 6ವರ್ಷಗಳಿಂದ ಅಚರಿಸಲಾಗುತ್ತಿದೆ. ಜನರು ಯೋಗ,ಧ್ಯಾನ ಮತ್ತು ಕ್ರೀಡಾ ಚಟುವಟಿಕೆಗಳು ಅಭ್ಯಾಸ ಮಾಡಬೇಕು. ರೋಗ ಮುಕ್ತರಾಗಬೇಕು, ಆರೋಗ್ಯವಂತರಾಗಿ ಲವಲವಿಕೆಯಿಂದ ಜೀವನ ಸಾಗಿಸಬೇಕು ಎಂದರೆ ಕ್ರೀಡಾ ಚಟುವಟಿಕೆಗಳು ಮುಖ್ಯ ಎಂದು ಹೇಳಿದರು.
