--Ads--

ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ

On: March 1, 2026 5:01 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ

ನಾಗರಾಜ ಮಂಜಗುಣಿ ಅಂಕೋಲಾ

ಹೋಳಿ ಹಬ್ಬವು ಆಯಾ ಪ್ರದೇಶಗಳಿಗೆ ಅನುಗುಣವಾಗಿ  ಆಚರಿಸಲ್ಪಡುತ್ತದೆ .ಕೆಲವು ಕಡೆ ಕೇವಲ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರೆ,  ಅಂಕೋಲಾದಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಸುಗ್ಗಿ ಹಬ್ಬ ತಾಲೂಕಿನಲ್ಲಿ ವಿಶೇಷವಾಗಿ ಸುಗ್ಗಿ ಕುಣಿತ ಮಾಡಲಾಗುತ್ತದೆ ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ವಿಶೇಷವಾಗಿ ಬುಡಕಟ್ಟು ಜನಾಂಗವೆಂದೇ ಗುರುತಿಸಲ್ಪಡುವ ಹಾಲಕ್ಕಿ ಒಕ್ಕಲಿಗರು ಇದನ್ನು ಪ್ರದರ್ಶನ ಮಾಡುತ್ತಾರೆ. ಇನ್ನು ನಾಮಧಾರಿ, ಕೋಮಾರಪಂಥ ಸಮಾಜದವರು ಮೂರು ನಾಲ್ಕು ವರ್ಷಕ್ಕೊಮ್ಮೆ ಸುಗ್ಗಿ ಕಟ್ಟುತ್ತಾರೆ.

ಬೆಳ್ಳಂದಾರದ ಸುಗ್ಗಿ ತಂಡವು ವಿಶೇಷವಾದದ್ದು ಅದರ ತುರಾಯ, ಗುಮಟೆ ಸದ್ದು ಅಂದಿನ ಬ್ರಿಟಿಷ್ ಅಧಿಕಾರಿಗಳು ಮೆಚ್ಚಿಕೊಂಡಿದ್ದರು ಅದರಂತೆ ಪ್ರತಿವರ್ಷ ಹೋಳಿಯ ದಿನದಂದು ತಾಲ್ಲೂಕು ಕಚೇರಿಗೆ ಆಗಮಿಸಿ ಸುಗ್ಗಿ ಪ್ರದರ್ಶನ ನೀಡಿ ಗೌರವ ಸ್ವೀಕರಿಸಬೇಕು ಎಂದು ಶಾಮ್ರಫಲಕ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಹೋಳಿಯ ದಿನ ಸುಗ್ಗಿ ತಂಡದೊಂದಿಗೆ ಹಗಣಗಳು ನಡೆಯುತ್ತದೆ. ಇದನ್ನು ವೀಕ್ಷಿಸಲು ವಿವಿಧ ಭಾಗಗಳಿಂದ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ ಅಂಕೋಲಾದಲ್ಲಿ ಮಾರ್ಚ್ 3 ರಂದು ಹೋಳಿ ಹಬ್ಬವಿದ್ದು, ಅಂದು ಬೆಳಂಬಾರದ ಸುಗ್ಗಿ ತಂಡ ತಾಲ್ಲೂಕು ಕಚೇರಿಗೆ ಆಗಮಿಸಲಿದೆ.

ಸುಗ್ಗಿಯ ವೈಶಿಷ್ಟ್ಯ :

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರು ವಿಶೇಷವಾಗಿ ಆಚರಿಸುವ ಸುಗ್ಗಿ ಹಬ್ಬದಲ್ಲಿ ತೆಂಗಿನ ಗರಿಯ ಕಡ್ಡಿಗಳಿಗೆ ಬಣ್ಣ ಬಣ್ಣದ ಕಾಗದ, ಬೇಗಡೆಗಳನ್ನು ಬಳಸಿ ಆಕರ್ಷಕ ತುರಾಯಿ ನಿರ್ಮಿಸುತ್ತಾರೆ. ಇಂತ ತುರಾಯಿಯನ್ನು ಹೊಂದಿದ ವಿವಿಧ ವ್ಯಕ್ತಿಗಳನ್ನು ತಂಡ ತಂಡಗಳನ್ನಾಗಿ ವಿಂಗಡಿಸಿ ಮದ್ದಲೆ ಸದ್ದಿನೊಂದಿಗೆ ಕುಣಿಯುತ್ತಾರೆ.

ಸಿದ್ಧತೆ:

ಸುಗ್ಗಿ ಹಬ್ಬದ 15 ದಿನಗಳ ಮುನ್ನ ಊರ ಗೌಡ, ಬುಧವಂತ, ಕೋಲಕಾರ, ಸೀಮೆ ಬುಧವಂತ ಹೀಗೆ ಹಾಲಕ್ಕಿ ಸಮಾಜದ ಹಕ್ಕುದಾರರು ಒಂದೆಡೆ ಸೇರಿ ತೀರ್ಮಾನಿಸುತ್ತಾರೆ. ಹಬ್ಬದ ದಿನದಂದು ಎಲ್ಲ ಸಮುದಾಯದ ಮನೆ ಎದುರು ಸುಗ್ಗಿ ಕುಣಿಯುತ್ತಾರೆ. ಅವರಿಗೆ ವೀಳ್ಯದೆಲೆ, ತೆಂಗಿನಕಾಯಿಯೊಂದಿಗೆ ಗೌರವಧನ ನೀಡಿ ಗೌರವಿಸಲಾಗುತ್ತದೆ.

ಕರಡಿ:

ಈ ಹಬ್ಬದ ವಿಶಿಷ್ಠಗಳಲ್ಲಿ  ಕರಡಿಗಳೂ ಕೂಡ ತನ್ನದೇ ಆದ ಮಹತ್ವ ಪಡೆದುಕೊಂಡಿದೆ ಸುಗ್ಗಿಯ ರಕ್ಷಕ ಎಂದೇ ಹೇಳಲಾಗುವ ಕರಡಿ ವೇಷಧಾರಿಗಳು ಸುಗ್ಗಿ ತಂಡಕ್ಕೆ ಇನ್ನಷ್ಟು ಮೆರುಗು ನೀಡುತ್ತಾರೆ. ಪ್ರತಿ ಸುಗ್ಗಿ ತಂಡದಲ್ಲಿಯೂ ಕರಡಿ ವೇಷಧಾರಿಗಳು ಕಡ್ಡಾಯವಾಗಿ ಕಾಣಸಿಗುತ್ತಾರೆ.

ಹಾಲಕ್ಕಿ ಸಮಾಜದ ಬಾಳಂಬಾರದ ಸುಗ್ಗಿ ತಂಡವು ವಿಶೇಷವಿದೆ.  ನಮ್ಮ ಸಮಾಜವು ಬುಡಕಟ್ಟು ಸಮಾಜವಾಗಿದ್ದು, ಎಲ್ಲ ರೀತಿಯ ಕಲೆಗಳು ನಮ್ಮಲ್ಲಿವೆ. ನಮ್ಮ ಜನರು ಇನ್ನು ಅಭಿವೃದ್ಧಿ ಆಗಬೇಕಾದರೆ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು.

-ಹನುಮಂತ ಗೌಡ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ