--Ads--

ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ , ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಆಗ್ರಹ

On: July 16, 2026 10:00 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ , ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಆಗ್ರಹ

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಅಕ್ರಮ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ತಡೆದು, ಶಾಸನಬದ್ಧ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ(ರಿ.) ಸಂಘದ ಸಂಸ್ಥಾಪಕ ಅಧ್ಯಕ್ಷ ಸಿ. ರಾಮಕೃಷ್ಣ, ವಕೀಲ ಭಾಸ್ಕರ್ ಬಾಬುರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ ಅಕ್ರಮ ಲಾಟರಿಯಿಂದ ಉಂಟಾಗಿರುವ ಸಮಸ್ಯೆಗಳು, ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾವಿರಾರು ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳು ಹಲವಾರು.

ಸಂಘದ ಪ್ರಕಾರ, 1998ರಲ್ಲಿ ಕೇರಳ ಸರ್ಕಾರ ಆರಂಭಿಸಿದ ಲಾಟರಿ ಯೋಜನೆಯು ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಅಕ್ರಮವಾಗಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಪ್ರತಿದಿನ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿದ್ದು.

ಈ ಹಿಂದೆ ಕರ್ನಾಟಕ ಸರ್ಕಾರದ ಲಾಟರಿ ಯೋಜನೆಯ ಮೂಲಕ ಸುಮಾರು 5,000 ರಿಂದ 6,000 ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ರಾಜ್ಯದ ಖಜಾನೆಗೆ ಹರಿದು ಬರುತ್ತಿತ್ತು. ಜೊತೆಗೆ 10 ರಿಂದ 12 ಸಾವಿರಕ್ಕೂ ಹೆಚ್ಚು ಕುಟುಂಬಗಳು ಲಾಟರಿ ಮಾರಾಟವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ 2007ರಲ್ಲಿ ರಾಜ್ಯ ಲಾಟರಿ ಯೋಜನೆ ಸ್ಥಗಿತಗೊಂಡ ನಂತರ ಈ ಕುಟುಂಬಗಳು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿವೆ.

ಸಂಘವು ಸರ್ಕಾರವನ್ನು ಈ ಕೆಳಗಿನಂತೆ ಒತ್ತಾಯಿಸಿದೆ: ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಮಾರಾಟವನ್ನು ತಕ್ಷಣ ಸಂಪೂರ್ಣವಾಗಿ ನಿಲ್ಲಿಸಬೇಕು. ಕರ್ನಾಟಕ ರಾಜ್ಯ ಸರ್ಕಾರವು ಶಾಸನಬದ್ಧ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು.

ಸಾವಿರಾರು ಲಾಟರಿ ಮಾರಾಟಗಾರರ ಬದುಕು, ಉದ್ಯೋಗ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು

ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ತರುವ ಯೋಜನೆಯನ್ನು ಪುನಃ ಆರಂಭಿಸಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಆರ್ಥಿಕಬಲ ಒದಗಿಸಬೇಕು ಎಂದು ಅಧ್ಯಕ್ಷ ಸಿ.ರಾಮಕೃಷ್ಣ ಹೇಳಿದರು.

ವಕೀಲ ಭಾಸ್ಕರ್ ಬಾಬು ಅವರು ಮಾತನಾಡಿ ಲಾಟರಿ ಕಾಯಿದೆ ಆನ್ವಯ ಈ ಮುಂಚೆ ರಾಜ್ಯ ಸರ್ಕಾರ ನಡೆಸುತ್ತಿದ್ದ ಲಾಟರಿಯನ್ನು ಪುನರ್ ಆರಂಭಿಸಿ ಇದರಿಂದ ಸರ್ಕಾರಕ್ಕೆ ಅದಾಯ ಬರುತ್ತದೆ ಹಾಗೂ ಲಾಟರಿ ಏಜೆಂಟ್ ರಿಗೆ ಉದ್ಯೋಗ ಲಭಿಸುತ್ತದೆ. ಲಾಟರಿಯಿಂದ ಬಂದ ಲಾಭದ ಹಣದಲ್ಲಿ ಸರ್ಕಾರ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು.

ವಾರದ ಡ್ರಾ, ಬಂಪರ್ ಡ್ರಾ ಲಾಟರಿ ಮಾರಾಟ ಹವ್ಯಾಸವಾಗಿರುತ್ತದೆ, ಲಾಟರಿ ಖರೀದಿದಾರರು ಜೂಜಿನ ವ್ಯಸನಿಗಳಾಗುವುದಿಲ್ಲ. ಕೇರಳ ರಾಜ್ಯ ಲಾಟರಿ ರಾಜ್ಯದಲ್ಲಿ ಕಳ್ಳಸಂತೆ ಮಾರಾಟದಿಂದ ರಾಜ್ಯಕ್ಕೆ ತೆರಿಗೆ ವಂಚನೆಯಾಗುತ್ತಿದೆ. ಕೊಡಲೇ ಮುಖ್ಯಮಂತ್ರಿಗಳು ಕೇರಳ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಲಾಟರಿ ಇಲಾಖೆ ಸ್ಥಾಪನೆ ಮಾಡಿ ಸಾಂಪ್ರಾದಾಯಿಕ ಕರ್ನಾಟಕ ಲಾಟರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಎಚ್ಚರಿಕೆ 

ದಿ ಪರ್ಪಲ್ ಟರ್ಟಲ್ಸ್’, ‘ಬೆರುರು’ ಮತ್ತು ‘ಊರ್ಜಾ’ ದಿಂದ ಬೆಂಗಳೂರಿನಲ್ಲಿ ವಾರ್ಷಿಕ ಮಾರಾಟ ಮೇಳ 2026 ಘೋಷಣೆ

ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ”  1008 ಶ್ರೀ ವಿಜಯೀಂದ್ರತೀರ್ಥ ಶ್ರೀಪಾದಂಗಳವರ “ಆರಾಧನಾ” ಮಹೋತ್ಸವ 

ಕುರುಹಿನಶೆಟ್ಟಿ ಕೇಂದ್ರ ಸಂಘ ನೂತನವಾಗಿ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಮತ್ತು ಸಾಕಮ್ಮ ಭವನ ಭೂಮಿಪೂಜೆ

ಅಭಿವೃದ್ಧಿ ಪರ ಮತ್ತು ಜನಪರವಾದ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು : ಮಲ್ಲಿಕಾರ್ಜುನ ದೇವರು

18ನೇ ಈಶ ಗ್ರಾಮೋತ್ಸವ ಕರ್ನಾಟಕದಲ್ಲಿ ಆರಂಭವಾಗಿದೆ, ಇದು ಭಾರತದ 18 ಜಿಲ್ಲೆಗಳನ್ನು ಒಳಗೊಂಡ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ