ವಿಜಯ ದರ್ಪಣ ನ್ಯೂಸ್…..
ಮುಂದಿನ ವರ್ಷದಿಂದ ಬೇರೆ ತಾಲ್ಲೂಕುಗಳಲ್ಲಿ ಗರಳಪುರಿ ಉತ್ಸವ ನಡೆಸುತ್ತೇವೆ : ಶಾಸಕ ದರ್ಶನ್. ಧ್ರುವನಾರಾಯಣ್

ತಾಂಡವಪುರ ಮಾರ್ಚ್ 21: ಮುಂದಿನ ವರ್ಷದಿಂದ ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಗರಳಪುರಿ ಉತ್ಸವವನ್ನು ನಡೆಸಿಕೊಂಡು ಬರುತ್ತೇವೆ. ಪ್ರಸ್ತುತ ಸಮಯದ ಕೊರತೆ ಇರುವ ಕಾರಣ ತಾಲೂಕಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ದಕ್ಷಿಣ ಕಾಶಿ, ನಂಜನಗೂಡಿನ ಗುರುಭವನದಲ್ಲಿ ಶನಿವಾರ ನಂಜನಗೂಡು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಐತಿಹಾಸಿಕ ಗರಳ ಪುರಿ ಉತ್ಸವ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರೆಯ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ ಗರಳಪುರಿ ಉತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಭಾವಗೀತೆ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಚಾಲನೆ ನೀಡಿ ಮಾತನಾಡಿ
ಶ್ರೀ ನಂಜುಂಡೇಶ್ವರ ಸ್ವಾಮಿ ಅವರ ಗೌತಮ ಪಂಚ
ಮಹಾ ರಥೋತ್ಸವ ಮಹೋತ್ಸವ ನಡೆಯುತ್ತಿರುವುದರಿಂದ ಉತ್ಸವವನ್ನು ಮಾಡಬೇಕು.
ಉದ್ದೇಶದಿಂದ ವಿನೂತನವಾದ ಕಾರ್ಯಕ್ರಮದಲ್ಲಿ,ಎಲ್ಲ ಜನರನ್ನು ಒಗ್ಗೂಡಿಸಿ ಒಳ್ಳೆಯ ಕಾರ್ಯಕ್ರಮವನ್ನು ನೀಡಬೇಕೆಂದು ಪ್ರಾರಂಭಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಮಗೆ ಅವಕಾಶ ಸಿಕ್ಕಾಗ ನಾವು ಅವಕಾಶವನ್ನು ಕೊಡಬೇಕು. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನು ಮಾಡುತ್ತೇವೆ.
ಗರಳಪುರಿ ಉತ್ಸವವು ನಂಜನಗೂಡಿನ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಉತ್ತೇಜಿಸುವ ಒಂದು ಮಹತ್ವ ವೇದಿಕೆಯಾಗಿದೆ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಆಸಕ್ತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ನಮ್ಮ ಕನ್ನಡದ ಸಾಹಿತ್ಯ ಪರಂಪರೆ ಮನಸ್ಸಿಗೆ ಹತ್ತಿರವಾಗುತ್ತದೆ
ಭಾವನೆಗಳು ಮತ್ತು ನಾಡಿನ ಸಾಂಸ್ಕೃತಿಯ ಸೊಗಸುಗಳು ಜೀವಂತವಾಗುತ್ತದೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸುವುದರ ಜೊತೆಗೆ ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವ ಪಾತ್ರ ವಹಿಸುತ್ತದೆ ಗರಳ ಪುರಿ ಉತ್ಸವದ ಮೂಲಕ ನಂಜನಗೂಡು ಮತ್ತೊಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.

ಉತ್ಸವದ ಮೊದಲನೇ ದಿನದ ಕಾರ್ಯಕ್ರಮ ಇದಾಗಿದೆ. ಭಾವಗೀತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಾರಂಭ ಮಾಡಲಾಗಿದೆ, ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ 21 ರಿಂದ 29 ವರೆಗೆ ಅದ್ದೂರಿಯಾಗಿ ನಡೆಸಲಾಗುತ್ತದೆ. ಪ್ರತಿದಿನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚದುರಂಗ, ಯೋಗ, ಚಿತ್ರಕಲೆ ಸ್ಪರ್ಧೆ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪ್ರತಿಯೊಂದು ಕಾರ್ಯಕ್ರಮಕ್ಕೂ ನಂಜನಗೂಡಿನ ತಾಲ್ಲೂಕಿನ ಯುವ ಜನತೆ ಸೇರಿದಂತೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೊದಲ ಬಾರಿಗೆ ನಡೆಸುತ್ತಿರುವ ಗರಳ ಪುರಿ ಉತ್ಸವಕ್ಕೆ ತಮ್ಮ ಬೆಂಬಲ ನೀಡಿ ಯಶಸ್ಸು ಗೊಳಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಮುದ್ದುಮೋಹನ್, ಎಸ್ ಸಿ ಬಸವರಾಜು ನಾಗೇಶ್ ರಾಜ್, ಕುರಹಟ್ಟಿ ಮಹೇಶ್, ಶ್ರೀಕಂಠ ಸ್ವಾಮಿ, ಎನ್ ಎಂ ಮಂಜುನಾಥ್ ಶ್ರೀ ಶ್ರೀಕಂಠೇಶ್ವರ ದೇವಾಲಯದ ಧರ್ಮದರ್ಶಿಗಳಾದ ಗೋಪಾಲಕೃಷ್ಣ ,ಗೋವಿಂದರಾಜು ಮತ್ತು ಗಾಯತ್ರಿ ಸೌಭಾಗ್ಯ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.









