--Ads--

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಕೆ. ವಿ. ಶ್ರೀನಿವಾಸನ್ , ಕೆ.ಜೆ. ಕುಮಾರ್ ಗೆ ಸಂತಾಪ ಶ್ರದ್ಧಾಂಜಲಿ

On: March 21, 2026 5:36 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಕೆ. ವಿ. ಶ್ರೀನಿವಾಸನ್ ಹಾಗೂ ಕೆ.ಜೆ. ಕುಮಾರ್ ಅವರಿಗೆ ಸಂತಾಪ ಶ್ರದ್ಧಾಂಜಲಿ

ತಾಂಡವಪುರ ಮಾರ್ಚ್ 21:
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಈಚೆಗೆ ನಿಧನರಾದ ನಗರದ ಹಿರಿಯ ಪತ್ರಕರ್ತರಾದ ಕೆ.ವಿ.ಶ್ರೀನಿವಾಸನ್ ಹಾಗೂ ಕೆ.ಜೆ.ಕುಮಾರ್ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ವ್ಯಕ್ತಪಡಿಸಿದರು ಅಗಲಿದ ಒಡನಾಡಿಗಳ ಸ್ಮರಿಸಿದರು.

ಹಿರಿಯ ಪತ್ರಕರ್ತ ಪ್ರಭುರಾಜ್ ಮಾತನಾಡಿ, ಶ್ರೀನಿವಾಸನ್ ಹಾಗೂ ತಮ್ಮ ನಡುವಿನ ಒಡನಾಟ ಸುಮಾರು ೫೫ ವರ್ಷಗಳದ್ದಾಗಿದೆ. ಅವರು ಚಿಕ್ಕ ಹುಡುಗರನ್ನೂ ಬ್ರದರ್ ಎಂದೇ ಕರೆಯುತ್ತಿದ್ದ ಕಾರಣ ಬ್ರದರ್ ಎಂದೇ ಪತ್ರಿಕಾ ವಲಯದಲ್ಲಿ ಖ್ಯಾತರಾಗಿದ್ದರು. ಆಕಾಶವಾಣಿಯಲ್ಲಿ ಅವರು ಅನೇಕ ವರ್ಷ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯದ ಅವರು ತಮ್ಮ ಖರ್ಚು ಕಳೆದು ಉಳಿದುದನ್ನು ಇತರರಿಗೆ ವಿನಿಯೋಗಿಸುತ್ತಿದ್ದರೆಂದರು.

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ರಾಘವೇಂದ್ರ ಮಾತನಾಡಿ, ಶ್ರೀನಿವಾಸನ್ ಮೈಸೂರು ಪತ್ರಿಕೋದ್ಯಮದ ಬಗ್ಗೆ ಅಪಾರ ಒಲವು ಹೊಂದಿದ್ದರು. ಹೀಗಾಗಿಯೇ ಪತ್ರಕರ್ತರ ಸಂಘದಲ್ಲಿ ಹಲವರ ಹೆಸರಿನಲ್ಲಿ ಅನೇಕ ವಾರ್ಷಿಕ ಪ್ರಶಸ್ತಿ ಸ್ಥಾಪಿಸಿದ್ದಾರೆ. ಅವರು ನಮ್ಮಲ್ಲೆರಿಗೂ ಸದಾ ಮಾರ್ಗದರ್ಶಕರಾಗಿರುವರು ಎಂದು ಹೇಳಿದರು.

ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾ ಈಕೆ ಪುರ ನಾರಾಯಣ, ಪ್ರಕಾಶ್ ಬಾಬು, ಹಿರಿಯ ಪತ್ರಕರ್ತ ಕಾಶಿನಾಥ್, ಕನ್ನಡಪರ ಚಳವಳಿ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪತ್ರಕರ್ತ ಎಂ.ಟಿ.ಯೋಗೇಶ್‌ಕುಮಾರ್ ಇನ್ನಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now