--Ads--

ಗರಳಪುರಿ ಉತ್ಸವ ಒಂದು ಉತ್ತಮ ಕಾರ್ಯಕ್ರಮ : ಶ್ರೀ ನಾಗರಾಜೇಂದ್ರ ಸ್ವಾಮಿಗಳು

On: March 24, 2026 1:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಗರಳಪುರಿ ಉತ್ಸವ ಒಂದು ಉತ್ತಮ ಕಾರ್ಯಕ್ರಮ : ಶ್ರೀ ನಾಗರಾಜೇಂದ್ರ ಸ್ವಾಮಿಗಳು

ಶರಣರ ಸಂಘಗಳ ಒಕ್ಕೂಟದಿಂದ ದಕ್ಷಿಣ ಕಾಶಿಯಲ್ಲಿ ವಚನ ಕಂಠಪಾಠ ಸ್ಪರ್ಧೆ

ತಾಂಡವಪುರ ಮಾರ್ಚ್ 24 ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆ ಅಂಗವಾಗಿ ನಂಜನಗೂಡಿನ ದಕ್ಷಿಣ ಕಾಶಿಯಲ್ಲಿ ನಡೆಯುತ್ತಿರುವ ಗರಳಪುರಿ ಉತ್ಸವ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ನಗರದ ದೇವಿರಮ್ಮನಹಳ್ಳಿ ಶರಣ ಸಂಗಮ ಮಠದ ಶ್ರೀ ನಾಗರಾಜೇಂದ್ರ ಸ್ವಾಮೀಜಿಗಳು ತಿಳಿಸಿದರು.

ನಂಜನಗೂಡಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಗರಳಪುರಿ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಶರಣನ ಸಂಘಗಳ ಒಕ್ಕೂಟದಿಂದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿಗಳು ಇಂತಹ ಕಾರ್ಯಕ್ರಮಗಳು ನಂಜನಗೂಡಿನಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯಬೇಕು. ಸ್ಥಳೀಯ ಶಾಸಕ ದರ್ಶನ್ ದೂರ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಪ್ರಸಂಶಕ್ಕೆ ಕಾರಣವಾಗಿದೆ ಎಂದರು.

ಬಳಿಕ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಗರಳ ಪುರಿ ಉತ್ಸವ ಒಂದು ವಿಶೇಷ ಕಾರ್ಯಕ್ರಮ. 21ರಿಂದ 29ರವರೆಗೆ ಪ್ರತಿದಿನವೂ ನಗರದ ಎಲ್ಲಾ ಭಾಗಗಳಲ್ಲೂ ಹಲವು ಸಾಂಸ್ಕೃತಿಕ,ಕ್ರೀಡೆ, ಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

29ರಂದು ಸಮಾರೋಪ ಸಮಾರಂಭದ ಜೊತೆಗೆ ರಸಮಂಜರಿ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗರಳಪುರಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ಏಪ್ರಿಲ್ 30 ರಂದು ನಡೆಯುವ ಗೌತಮ ಪಂಚ ಮಹಾ ರಥೋತ್ಸವಕ್ಕೆ ಎಲ್ಲರೂ ಆಗಮಿಸಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆಯಿರಿ ಎಂದು ತಿಳಿಸಿದರು.

ಕಾರ್ಯಕ್ರಮ ಆಯೋಜಕ ಹಾಗೂ ಬಸವ ಸೇನೆಯ ಬಸವ ಯೋಗೇಶ್ ಮಾತನಾಡಿ, ಶಾಸಕ ದರ್ಶನ್ ನೇತೃತ್ವದಲ್ಲಿ ಒಂದು ಉತ್ತಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾವುದೇ ಕಾರ್ಯಕ್ರಮಗಳಲ್ಲೂ ವಚನ ಕಂಠಪಾಠ ಸ್ಪರ್ಧೆ ಆಯೋಜನೆ ಮಾಡಿರಲಿಲ್ಲ. ಆದರೆ ಈ ಬಾರಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ. ಸುಮಾರು 250 ಕ್ಕೂ ಹೆಚ್ಚು ಸ್ಪರ್ಧಿಗಳು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನಗಳನ್ನ ಬಸವ ಯೋಗಿ ವಿತರಿಸಿದರು
ಕಾರ್ಯಕ್ರಮದಲ್ಲಿ ಸಿಎಂ ಶಂಕರ್, ಶ್ರೀಧರ್, ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ, ಶಿವಪ್ಪ, ದೇವರು ಯೂಥ್ ಕಾಂಗ್ರೆಸ್ ಅಧ್ಯಕ್ಷ ಚಂದನ ಗೌಡ, ಸ್ನೇಕ್ ಬಸವರಾಜು ಚೆನ್ನಪ್ಪ, ಸೋಮಶೇಖರ್, ಶಶಿಕಲ ಗಿರೀಶ್, ಗಾಯತ್ರಿ ಮೋಹನ್,ಮಾದನಹಳ್ಳಿ ಗಿರೀಶ್,ಗೀತಾ, ಹಾಡ್ಯಾ ರಾಜು,ಸೌಭಾಗ್ಯ, ಅನಸೋಯ,ಕೋಮಲ ಮುದ್ದಹಳ್ಳಿ ಅಶೋಕ್, ರಾಜೇಂದ್ರ, ನಟರಾಜು, ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now