--Ads--

ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಭಾಜನರಾದ ಸಾಹಿತಿ ಶ್ರೀಮತಿ ಪ್ರತಿಮಾ ರೈ

On: March 24, 2026 9:59 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಭಾಜನರಾದ ಸಾಹಿತಿ ಶ್ರೀಮತಿ ಪ್ರತಿಮಾ ರೈ

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿಗಳಲ್ಲಿ ಒಂದಾದ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಸಾಹಿತಿ ಶ್ರೀಮತಿ ಪ್ರತಿಮಾ ರೈ ರವರು ಪುರಸ್ಕಾರಗೊಂಡಿದ್ದಾರೆ.
2025-26 ನೇ ಸಾಲಿನ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಮಹಿಳಾ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದಾಗ 7 ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳಿಂದ ಪರಮಾರ್ಷಿಸಿ ಮೂರು ಜನರು ನೀಡಿದ ಅಂಕಗಳನ್ನು ಒಂದುಗೂಡಿಸಿ ಶ್ರೀಮತಿ ಪ್ರತಿಮಾ ರೈ ರವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶ್ರೀಮತಿ ಪ್ರತಿಮಾ ಹರೀಶ್ ರೈ ರವರು
ಸೋಮವಾರಪೇಟೆ ತಾಲೂಕಿನ ಅಬ್ಬೂರು ಕಟ್ಟೆ ಗ್ರಾಮದ ದಡ್ಡoಗಡಿ ಮನೆಯವರು. ದಿನಾಂಕ 09/12/1981 ರಂದು ಜನಿಸಿದ ಇವರ ತಂದೆ ಸುರೇಂದ್ರ ರೈ ಡಿ. ಎಸ್. ಹಾಗೂ ತಾಯಿ ಸರಸ್ವತಿ ಎಸ್ ರೈ. ಇಬ್ಬರು ಪುತ್ರಿಯರಲ್ಲಿ ಪ್ರತಿಮಾ ರೈ ಹಿರಿಯವರು. ತಂಗಿ ಪ್ರತಿಭಾ ಮುಖೇಶ್ ರೈ ಸೀನಿಯರ್ ಸಿವಿಲ್ ನ್ಯಾಯಾಧೀಶೆಯಾಗಿ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪ್ರತಿಮಾ ರೈ ಅವರು ಕನ್ನಡ ಮತ್ತು ಇತಿಹಾಸ ಎಂ.ಎ. ಬಿ. ಎಡ್ ಪದವೀಧರೆ. ಇವರು 2004 ಕನ್ನಡ ಶಿಕ್ಷಕಿಯಾಗಿ ತಮ್ಮ ಸೇವಾಕಾರ್ಯವನ್ನು ಆರಂಭಿಸಿದರು. 2019 ರಿಂದ ಸೈಂಟ್ ಆನ್ಸ್ ಪದವಿ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.
ಶ್ರೀಮತಿ ಪ್ರತಿಮಾ ರೈ ಅವರ ಆಸಕ್ತಿ ಬಹುಮುಖವಾದುದು. ಸಂಗೀತ , ಸಾಹಿತ್ಯ ಮತ್ತು ಬರೆಹ ಮುಖ್ಯ ಕ್ಷೇತ್ರಗಳು. ಈಗಾಗಲೇ ಪತ್ರಿಕಾ ಬರೆಹಗಳ ಮೂಲಕ ಜನಪ್ರಿಯರಾಗಿರುವ ಇವರು ಸಾಹಿತ್ಯಪರ ಸಂಘಟನೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಾನಪದ ಸಾಹಿತ್ಯ ಪರಿಷತ್, ಮಡಿಕೇರಿ ಘಟಕದ ಸದಸ್ಯೆಯಾಗಿ ತೊಡಗಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ರಾಜ್ಯೋತ್ಸವ ಕಾರ್ಯಕ್ರಮ, ಕನ್ನಡ ಸಾಹಿತ್ಯ ಪರಿಷತ್ ನಿಂದ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮಗಳು, ಶನಿವಾರಸಂತೆ ಪದವಿ ಕಾಲೇಜು, ವಿರಾಜಪೇಟೆ ಕಾವೇರಿ ಕಾಲೇಜು, ಅರಮೇರಿ ಕಳಂಚೇರಿ ಮಠದ ಹೊಂಬೆಳಕು ಕಾರ್ಯಕ್ರಮ, ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿ ಆಧಾರಿತ ವಿಷಯಗಳಲ್ಲಿ ಉಪನ್ಯಾಸ ನೀಡಿರುತ್ತಾರೆ.
ಕೊಡಗು ಚಾನೆಲ್ ಮತ್ತು ಚಾನೆಲ್ 24 ಕರ್ನಾಟಕ ಟಿವಿ ವಾಹಿನಿಗಳಲ್ಲಿ ವಾರ್ತಾವಾಚಕಿಯಾಗಿ ಇವರು ಪಾಲ್ಗೊಂಡಿದ್ದಾರೆ. ಇವರು ನೀಡಿದ ರೇಡಿಯೋ ಭಾಷಣ ಮಡಿಕೇರಿ ಆಕಾಶವಾಣಿ ಮತ್ತು ಬೆಂಗಳೂರು ನಿಲಯದ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಸಾರವಾಗಿದೆ ಎನ್ನುವುದು ಉಲ್ಲೇಖಾರ್ಹ ವಿಚಾರವಾಗಿದೆ.
ಕೊಡಗಿನ ಶಕ್ತಿ ಪತ್ರಿಕೆಯಲ್ಲಿ ತಮ್ಮ ಲೇಖನಗಳ ಮೂಲಕ ಇವರು ಚಿರಪರಿಚಿತರು. 2024 ರಂದು ಇವರ ಪತ್ರಿಕಾ ವೈಚಾರಿಕ ಅಂಕಣ ಬರಹಗಳ ಸಂಗ್ರಹ ‘ಅಂತರಗಂಗೆ’ ಪುಸ್ತಕವು ಪ್ರಕಟಣೆಗೊಂಡಿದೆ.
ಸಾಹಿತ್ಯ, ಶಿಕ್ಷಣ, ಸಂಘಟನೆ, ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರಿಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಆವಾರ್ಡ್ ಲಭಿಸಿದೆ.
2025 26 ನೇ ಸಾಲಿನ ವಿಜಯ ವಿಷ್ಣು ಭಟ್ ರವರ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಶ್ರೀಮತಿ ಪ್ರತಿಮಾ ರೈ ರವರಿಗೆ ಸಾಹಿತ್ಯ ಪರಿಷತ್ತು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now