ವಿಜಯ ದರ್ಪಣ ನ್ಯೂಸ್….
ಏಪ್ರಿಲ್ ಒಂದರಂದು ಉದ್ಯೋಗ ಮೇಳ ಇದರ ಸದುಪಯೋಗವನ್ನು ನಿರುದ್ಯೋಗಿ ಯುವಕ ಯುವತಿಯರು ಪಡೆದುಕೊಳ್ಳಿ
ತಾಂಡವಪುರ ಮಾರ್ಚ್ 27 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಏಪ್ರಿಲ್ ಒಂದರಂದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ನಿರುದ್ಯೋಗಿ ಯುವಕರು ಯುವತಿಯರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅವರು ಮನವಿ ಮಾಡಿದ್ದಾರೆ
ಅವರು ಇಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉದ್ಯೋಗ ಬೆಳೆದ ಕುರಿತು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರ ಸಭೆ ಕರೆದು ಸಭೆಯಲ್ಲಿ ಈ ಉದ್ಯೋಗ ಮೇಳವನ್ನು ಕ್ಷೇತ್ರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಹಾಗೂ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರ ಸೂಚನೆ ಮೇರೆಗೆ ಈ ಮಹತ್ವಕಾಂಕ್ಷೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಈ ಉದ್ಯೋಗ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರು ಯುವತಿಯರು ಪಾಲ್ಗೊಳ್ಳುವಂತೆ ತಾವೆಲ್ಲರೂ ಶ್ರಮವಹಿಸಬೇಕು ಇದರ ಸೌಲಭ್ಯವನ್ನು ನಿರುದ್ಯೋಗಿ ಯುವಕರು ಯುವತಿಯರು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಪ್ರಕಾಶ್ ರವರು ಸಭೆಯಲ್ಲಿ ಸೂಚನೆ ನೀಡಿದರು
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನಿರುದ್ಯೋಗಿ ಯುವಕರು ಯುವತಿಯರು ತಮ್ಮ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕು ತಮ್ಮ ದಾಖಲೆಗಳನ್ನು ನೀಡುವ ಮೂಲಕ ತಮಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯವರು ತರಬೇತಿ ನೀಡುವ ಮೂಲಕ ನಿಮಗೆ ಉದ್ಯೋಗ ದುರ್ಗಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪ್ರಕಾಶ್ ಕಾರ್ಯದರ್ಶಿ ಕೆಕೆಮರಯ್ಯ ಲೆಕ್ಕ ಸಹಾಯಕ ಎಸ್ ಪುಟ್ಟರಾಜು ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತರು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು












