--Ads--

ಚಿಕ್ಕಯ್ಯನ ಛತ್ರ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ  ವಾಹನ ಸಂಚಾರದಿಂದ ಧೂಳು: ಗ್ರಾಮಸ್ಥರ ಪ್ರತಿಭಟನೆ

On: March 29, 2026 1:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಚಿಕ್ಕಯ್ಯನ ಛತ್ರ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ  ವಾಹನ ಸಂಚಾರದಿಂದ ಧೂಳು: ಗ್ರಾಮಸ್ಥರ ಪ್ರತಿಭಟನೆ

ತಾಂಡವಪುರ ಮಾರ್ಚ್ 29 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಸಿರುವ ಚಿಕ್ಕಯ್ಯನ ಛತ್ರ ಬಂಚಳ್ಳಿ ಹುಂಡಿ ಮಧ್ಯದಲ್ಲಿ ಹಾದುಹೋಗಿರುವ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಇದರಿಂದ ಅಕ್ಕಪಕ್ಕದ ಮನೆಗಳಿಗೆ ಬರುವುದರಿಂದ ಮಕ್ಕಳಿಗೆ ಮನುಷ್ಯರಿಗೆ ರೋಗರು ಜನಗಳು ಹರಡುವ ಭೀತಿ ಇದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಸಂಚಾರ ಮಾಡುವ ವಾಹನಗಳನ್ನು ಪಡೆದು ದಿಡೀರ್ ಪ್ರತಿಭಟನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು

ಮೈಸೂರು ನಂಜನಗೂಡು ಊಟಿ ಮುಖ್ಯ ರಸ್ತೆಯಿಂದ ಚಿಕ್ಕಯ್ಯನ ಛತ್ರ ಬಂಚಹಳ್ಳಿ ಹುಂಡಿ ಮಧ್ಯದಲ್ಲಿ ಹಾದು ಹೋಗಿರುವ ಕೈಗಾರಿಕಾ ಮುಖ್ಯ ರಸ್ತೆಯಲ್ಲಿ ತಾಂಡವಪುರ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಹೆಚ್ಚಿನ ವಾಹನಗಳು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದು ಜೊತೆಗೆ ಇಲ್ಲೇ ಜಲ್ಲಿಕಲ್ಲು ಪುಡಿ ಮಾಡುವ ಕ್ಲಸ್ಟರ್ ಸಹ ಇದ್ದು ಇದರಿಂದ ಪ್ರತಿನಿತ್ಯ ವಾಹನ ಸಂಚಾರ ಹೆಚ್ಚಾಗಿದ್ದು ಪ್ರತಿನಿತ್ಯ ದೂಳು ನಮ್ಮ ಅಕ್ಕ ಪಕ್ಕದ ಮನೆಗಳಿಗೆ ಬರುವ ಮೂಲಕ ನಮಗೆ ಮತ್ತು ನಮ್ಮ ಮಕ್ಕಳಿಗೆ ಧೂಳು ನಮ್ಮ ದೇಹಕ್ಕೆ ಸೇರುವುದರಿಂದ ನಮ್ಮಗಳಿಗೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಆರೋಪಿಸಿ ಗ್ರಾಮಸ್ಥರು ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕೈಗಾರಿಕಾ ಮುಖ್ಯಸ್ಥರ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ನಾವು ಕೂಡ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಪ್ರತಿಭಟನೆಕಾರರ ಸಂವಿಧಾನಪಡಿಸಿ ಪ್ರತಿಭಟನೆಯನ್ನು ವಾಪಸ ಪಡೆಯುವಂತೆ ಮಾಡಿದರು.

ಇದೆ ವೇಳೆ ಮಾತನಾಡಿದ ಗ್ರಾಮಸ್ಥರಾದ ಪ್ರಭುಸ್ವಾಮಿ ಸಿ ಎನ್ ಚಂದ್ರು ನಟರಾಜು ಹಾಗೂ ಗ್ರಾಮದ ಮಹಿಳೆ ರವರು ಮಾತನಾಡಿ ಈ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸಂಚಾರ ಹೆಚ್ಚಾಗಿರುವುದರಿಂದ ಮತ್ತು ರಸ್ತೆ ಸರಿ ಇಲ್ಲದ ಕಾರಣ ಪ್ರತಿನಿತ್ಯ ಧೂಳು ನಮ್ಮ ಮನೆ ಒಳಗೆ ಬರುತ್ತಿದ್ದು ಇದರಿಂದ ನಮಗೆ ತುಂಬಾ ತೊಂದರೆ ಆಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಈ ರಸ್ತೆಯಲ್ಲಿ ಹೆಚ್ಚು ವಾಹನಗಳನ್ನು ಸಂಚಾರ ಮಾಡುವುದನ್ನು ನಿಬಂಧಿಸಿ ಜೊತೆಗೆ ರಸ್ತೆ ರಿಪೇರಿ ಮಾಡಿಸಿ ರಸ್ತೆಯಲ್ಲಿ ಧೂಳು ಬರಬಾರದು ಆ ರೀತಿ ಕ್ರಮ ಕೈಗೊಳ್ಳಬೇಕು ಕೂಡಲೇ ರಸ್ತೆ ರಿಪೇರಿ ಆಗಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರಭುಸ್ವಾಮಿ ನಾಗರಾಜು ಶಿವಣ್ಣ ಯೋಗೇಶ ರಾಜೇಶ ಮಹೇಶ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಭಾಸ್ಕರ್ ಸಿಎಂ ಚಂದ್ರು ನಟರಾಜು ರಮೇಶ ಸೇರಿದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now