--Ads--

ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟಿನ ಮಂತ್ರ

On: April 5, 2026 5:21 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟಿನ ಮಂತ್ರ

ನೆಲಮಂಗಲ: ಹಿಂದೂ ಧರ್ಮದ ಉಳಿವು ಹಾಗೂ ಭದ್ರತೆಗಾಗಿ ದೇಶದ ನೂರಾರು ಸ್ವಾಮೀಜಿಗಳು ಎರಡು ದಿನಗಳ ಸಭೆ ನಡೆಸಿದ್ದು, ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪಾಲ್ಗೊಂಡಿದ್ದರು.

ಅರಿಶಿನಕುಂಟೆಯ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆ ಹಾಗೂ ಪಿಯು ಕಾಲೇಜು ಆವರಣದಲ್ಲಿ ಹಿಂದೂ ಧರ್ಮ ಆಚಾರ್ಯ ಸಭಾದಿಂದ ನಡೆದ ಸಭೆಯಲ್ಲಿ ಹಿಂದೂ ಧರ್ಮದ ಭದ್ರತೆ, ಉಳಿವು ಮತ್ತು ಮುಂದಿನ ತೀರ್ಮಾನಗಳ ಕುರಿತು ಚರ್ಚೆ ನಡೆಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಎರಡು ದಿನದ ಸಭೆಯಲ್ಲಿ ಗುಜರಾತ್, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಮಧ್ಯ ಪ್ರದೇಶ, ಬಿಹಾರ, ತಮಿಳುನಾಡು, ಅಸ್ಸಾಂ

ನೆಲಮಂಗಲದಲ್ಲಿ ನಡೆದ ಹಿಂದೂ ಧಾರ್ಮಿಕ ಮುಖಂಡರು, ಸ್ವಾಮೀಜಿಗಳ ಸಭೆಗೆ ಆಗ ಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಲಾಕೃತಿ ನೀಡಿ ಗೌರವಿಸಲಾಯಿತು.

ಸೇರಿದಂತೆ 28 ರಾಜ್ಯಗಳ ಪ್ರಮುಖ ಧಾರ್ಮಿಕ ಮುಖಂಡರು, ಸಂತರು, ಸ್ವಾಮೀಜಿಗಳು ಭಾಗವಹಿಸಿದ್ದರು ಕರ್ನಾಟಕದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿಯ ಪೇಜಾವರ ಶ್ರೀಗಳು ಸೇರಿದಂತೆ ನಾನಾ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

ಅಮಿತ್ ಶಾ ಭೇಟಿ, ಚರ್ಚೆ: ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಬೆಳಗ್ಗೆ ಸಮಾರಂಭಕ್ಕೆ ಆಗಮಿಸಿದ್ದರು. ಮಧ್ಯಾಹ್ನ ವರೆಗೂ ಹಿಂದೂ ಧರ್ಮ ಆಚಾರ್ಯ ಸಭಾದ ಸಭೆಯಲ್ಲಿ ಭಾಗವಹಿಸಿ ನಾನಾ ವಿಚಾರಗಳ ಬಗ್ಗೆ ಚರ್ಚಿಸಿದರು.

ಬಿಜಿಎಸ್ ಎಂಸಿಎಚ್ ಆಸ್ಪತ್ರೆ ಹಾಗೂ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಸ್ವಾಮೀಜಿಗಳಿಗೆ ವೃತ್ತಾಕಾರದಲ್ಲಿ ಕುಳಿತು ಮಾತನಾಡಲು ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಮೊದಲ ಸಭೆಯಾಗಿ ಇದು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಹಕಾರದೊಂದಿಗೆ ನಡೆಯಿತು.

ಹಿಂದೂ ಧಾರ್ಮಿಕ ಮುಖಂಡರು, ಸ್ವಾಮೀಜಿಗಳ ಸಭೆಗೆ ಆಗ ಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಲಾಕೃತಿ ನೀಡಿ ಗೌರವಿಸಲಾಯಿತು.

ಸಚಿವರು, ಸ್ವಾಮೀಜಿಗಳ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48 ಹಾಗೂ ನೆಲಮಂಗಲ ಮುಖ್ಯರಸ್ತೆಯಲ್ಲಿ 5 ಕಿಲೊ ಮೀಟರ್‌ವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು

WhatsApp

Join Now

Telegram

Join Now

Instagram

Join Now