--Ads--

ನನ್ನ ಜೀವನದ ಅಭಿವೃದ್ಧಿಯ ಹಿಂದೆ ನನ್ನ ಜೊತೆ ಕೆಲಸ ಮಾಡುವ ನನ್ನ ಸಹೋದ್ಯೋಗಿಗಳ ಪರಿಶ್ರಮವಿದೆ: ಮಾಸ್ತಿ ಟಿಸಿ ರಮೇಶ್

On: April 6, 2026 4:05 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ನನ್ನ ಜೀವನದ ಅಭಿವೃದ್ಧಿಯ ಹಿಂದೆ ನನ್ನ ಜೊತೆ ಕೆಲಸ ಮಾಡುವ ನನ್ನ ಸಹೋದ್ಯೋಗಿಗಳ ಪರಿಶ್ರಮವಿದೆ: ಮಾಸ್ತಿ ಟಿಸಿ ರಮೇಶ್

ಮಾಸ್ತಿ: ಜೇನಿನ ಸವಿಯ ಹಿಂದೆ ಕಾರ್ಮಿಕ ಜೇನುಗಳ ಪರಿಶ್ರಮವಿರುವಂತೆ ನನ್ನ ಜೀವನದ ಅಭಿವೃದ್ಧಿಯ ಹಿಂದೆ ನನ್ನ ಜೊತೆ ಕೆಲಸ ಮಾಡುವ ನನ್ನ ಸಹೋದ್ಯೋಗಿಗಳ ಪರಿಶ್ರಮವಿದೆ. ನನ್ನ ಬದುಕಿನ ಉದ್ದಕ್ಕೂ ಹೆಗಲಿಗೆ ಹೆಗಲು ಕೊಟ್ಟ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಕೃತಜ್ಞತೆಗಳು ಎಂದು ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿಸಿ ರಮೇಶ್ ಭಾವುಕರಾಗಿ ನುಡಿದರು.

ಅವರ 55ನೇ ಹುಟ್ಟುಹಬ್ಬವನ್ನು ಮಾಸ್ತಿಯಲ್ಲಿರುವ ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಕಚೇರಿಯ ಆವರಣದಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲ ಒಗ್ಗೂಡಿ ಅನ್ನದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ನನ್ನ ಕಾರ್ಮಿಕ ಬಂಧುಗಳು ಈ ರೀತಿಯಲ್ಲಿ ವಿಶಿಷ್ಟವಾಗಿ ಕಾರ್ಯಕ್ರಮ ರೂಪಿಸುತ್ತಾರೆಂದು ಯೋಚಿಸಿರಲಿಲ್ಲ ಆದರೆ ಅವರ ಪ್ರೀತಿಗೆ ನಾನು ಮನ ಸೋತಿದ್ದೇನೆ.
ಅವರ ಮನಸ್ಸು ಗೆಲ್ಲುವ ರೀತಿಯಲ್ಲಿ ನಾನು ಅವರೊಂದಿಗೆ ವರ್ತಿಸುತ್ತೇನೆ ಎಂಬುದು ಈಗ ನನಗೆ ಅರ್ಥವಾಗಿದೆ ಎಂದರು.

ಈ ಬಾರಿ ತರಾತುರಿಯಲ್ಲಿ ಮಾಡಿದ್ದರಿಂದ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಲಿಲ್ಲ ಮುಂದಿನ ವರ್ಷ ನಾವೆಲ್ಲರೂ ರಕ್ತದಾನ ಮಾಡಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಚಾಲಕ ಹಸಾಂಡ ಹಳ್ಳಿಯ ವಿಜಯ್ ಕುಮಾರ್ ನುಡಿದರು.

ಅನಾಥ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನಮ್ಮ ರಮೇಶಣ್ಣನವರು ಮಾಡುತ್ತಿರುವ ಕೆಲಸಗಳು ನಮ್ಮಂತಹ ಯುವಕರಿಗೆ ಮಾರ್ಗದರ್ಶನ ಅದನ್ನು ನಾವು ಅನುಸರಿಸುತ್ತೇವೆ ಎಂದು ಬಂಟ ಹಳ್ಳಿಯ ಸುರೇಶ್ ಮತ್ತು ಶಿವಕುಮಾರ್ ನುಡಿದರು.

ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಅವರು ಕೊಟ್ಟಿರುವ ಪ್ರಶ್ನೋತ್ತರ ಮಾಲಿಕೆ ನಮ್ಮ ನಮ್ಮ ನಾಡಿಗೆ ಆದರ್ಶ ಅದನ್ನು ಪ್ರತಿವರ್ಷ ಮುಂದುವರಿಸಿಕೊಂಡು ಹೋಗುವಂತೆ ಕೋರುತ್ತೇವೆ ಎಂದು ಶಂಕರ್ ನುಡಿದರು.

ರಮೇಶಣ್ಣನವರ ಪ್ರತಿ ಹೆಜ್ಜೆಯೂ ನಾವು ಅನುಸರಿಸಬೇಕಾದ ವಿಷಯವಾಗಿದೆ ನಿಜಕ್ಕೂ ಅವರು ಆದರ್ಶಪ್ರಾಯರು ಎಂದು ಆರ್‌.ಸಿ. ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರುರವರು ನುಡಿದರು.

ಈ ಸಂದರ್ಭದಲ್ಲಿ ಜ್ವಾಲಾಮುಖಿ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸತೀಶ್, ಗಣೇಶ್ ಮತ್ತು ಶಂಕರ್ ರಾವ್, ಸುನಿಲ್ ಕುಮಾರ್, ಪ್ರಶಾಂತ್, ನವೀನ್, ಕುಪೇಂದ್ರ, ಸಫಿವುಲ್ಲಾ, ವೇಣು, ಭರತ್, ಮಧುಕುಮಾರ್, ರಾಕೇಶ್, ವೀರೇಂದ್ರ, ಶ್ರೀನಿವಾಸ್, ಕಿರಣ್, ಸುಧಾಕರ್, ಮಲ್ಲಿಕಾರ್ಜುನ್, ಹರಿಪ್ರಸಾದ್, ಮನೋಜ್ ರಾವ್, ದೇವಿ ಪ್ರಸಾದ್, ಮುನಿರಾಜು, ಮನು, ಮುನಿ, ಕೀರ್ತಿ, ರಾಜು, ಚೇತನ್, ಮಂಜುನಾಥ್, ಮುನಿರತ್ನಪ್ಪ, ಮೋಹನ್, ಮುರುಗೇಶ್, ಲಕ್ಷ್ಮಿಪತಿ, ರಾಮಚಂದ್ರರಾವ್, ಶಹಬುದ್ದೀನ್ ಮುಂತಾದವರು ಉಪಸ್ಥಿತರಿದ್ದರು ಇದರೊಂದಿಗೆಅವರ ಅನೇಕ ಮಿತ್ರರು ಬಂಧುಗಳು ಹಾಗೂ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

WhatsApp

Join Now

Telegram

Join Now

Instagram

Join Now