ವಿಜಯ ದರ್ಪಣ ನ್ಯೂಸ್….
ಶಾಸಕ ಬಿ ಎನ್ ರವಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರ ಹುಟ್ಟು ಹಬ್ಬದ ಸಂಭ್ರಮಾಚರಣೆ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ…

ಶಿಡ್ಲಘಟ್ಟ : ಜನರ ಹಿತಕ್ಕಾಗಿ ಸೇವೆ ಸಲ್ಲಿಸುವ ಮನವುಳ್ಳ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ ಅವರು ನಾಡಿನ ನೆಲ-ಜಲದ ವಿಚಾರ ಬಂದಾಗ ಪಕ್ಷ ಭೇದ ಮರೆತು ಹೋರಾಟಕ್ಕೆ ಮುಂದಾಗುವ ಮತ್ತು ರೈತರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಆದರ್ಶ ನಾಯಕತ್ವಕ್ಕೆ ನಮಗೆಲ್ಲಾರಿಗೂ ಆದರ್ಶಣೀಯ ಮಾದರಿಯಾಗಿದ್ದಾರೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು ನುಡಿದರು.

ತಾಲ್ಲೂಕಿನ ಹಂಡಿಗನಾಳದ “ಶ್ರೀಬಾಲಾಜಿ ಕನ್ವೆಂಷನ್ ಹಾಲ್” ನಲ್ಲಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 94ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಶೇ 100 ರಷ್ಟು ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರನ್ನು ಗೌರವಿಸುವ ಮೂಲಕ ಜೆಪಿನ್ , ಹೆಚ್ಡಿಡಿ ಟ್ರಸ್ಟ್ ಹಾಗು ಜೆಡಿಎಸ್ ಪಕ್ಷದ ವತಿಯಿಂದ ವಿನೂತನ ಹಾಗು ಅರ್ಥಪೂರ್ಣವಾಗಿ ಆಚರಿಸಲಾಯಿತು.
ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು ದೇವೇಗೌಡರು ರಾಜ್ಯಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ 5 ದಶಕಕ್ಕು ಹೆಚ್ಚು ಕಾಲ ಸುದೀರ್ಘ ರಾಜಕೀಯ ಅನುಭವ ಹೊಂದಿದ ಅವರು ಪ್ರಧಾನಿ ಹುದ್ದೆ ತೊರೆದರೂ ದೇಶಕ್ಕಾಗಿ ಹೋರಾಡುವ ಮತ್ತು ಜನರ ಬಗೆಗಿನ ಕಾಳಜಿಯನ್ನು ವಹಿಸಿದವರು ಎಂದರು.
ಶಾಸಕರಾದ ಬಿ.ಎನ್.ರವಿಕುಮಾರ್ ಮಾತನಾಡಿ ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಂ.ಮಲ್ಲೇಶ್ ಬಾಬು ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರೊಂದಿಗೆ ಕೃಷ್ಣಾನದಿ ನೀರಿನ ಕುರಿತಾಗಿ ಮಾತನಾಡಿದ್ದು ಕರ್ನಾಟಕ ಸರ್ಕಾರದಿಂದ ಡಿ.ಪಿ.ಆರ್ ಮಾಡಿ ಕಳಿಸಿದರೆ ಒಂದು ವರ್ಷದ ಅವಧಿಯಲ್ಲಿ ನಾಲ್ಕು ತಿಂಗಳು ಕೃಷ್ಣಾ-ಪೆನ್ನಾರ್ ನೀರನ್ನು ಬಯಲು ಸೀಮೆಯ ಪ್ರದೇಶಗಳಿಗೆ ಕೊಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.
ಈ ವಯಸ್ಸಿನಲ್ಲೂ ಅವರು ಕೃಷಿ, ರೈತರು, ನೀರಾವರಿ ಯೋಜನೆಗಳ ಬಗ್ಗೆ ತೋರುವ ಕಾಳಜಿ, ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಇರಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಗೊಳಿಸುವ ಅವರ ರಾಜಕೀಯ ಅನುಭವ, ಜಾಣ್ಮ, ಮುತ್ಸದ್ದಿತನ, ಕಾಳಜಿಯನ್ನು ನಾವುಗಳೆಲ್ಲಾ ಅರಿತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ, ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತಗೊಳಿಸಲು ಮತ್ತೊಮ್ಮೆ ರಾಜ್ಯಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಬೇಕಾಗಿ ಬಿಜೆಪಿಯ ರಾಜ್ಯ ಮಟ್ಟದ ಮುಖಂಡರಲ್ಲಿ ಅವರು ಮನವಿ ಮಾಡಿದರು.

ಇದೇ ವೇಳೆ SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಾದ ಎಂ.ಪ್ರಶಾಂತ್ (592), ಸರ್ಕಾರಿ ಪ್ರೌಢಶಾಲೆ, ಸಾದಲಿ – ಒಂದು ಲಕ್ಷ ರೂ.ಗಳು , ಪಿ.ಎಸ್.ರಶ್ಮಿ (589), ಸರ್ಕಾರಿ ಪ್ರೌಢಶಾಲೆ, ಪಲಿಚೇರ್ಲು ಮತ್ತು ಎ.ವೈಭವಿ (589), ಸರ್ಕಾರಿ ಪ್ರೌಢಶಾಲೆ, ಚೀಮಂಗಲ – ಐವತ್ತು ಸಾವಿರ ರೂ.ಗಳು , ಮಾನಸ (581), ಸರ್ಕಾರಿ ಪ್ರೌಢಶಾಲೆ, ಜಂಗಮಕೋಟೆ – 25 ಸಾವಿರ ರೂ.ಗಳು ಬಹುಮಾನ ನೀಡಿ ಶಾಸಕರಾದ ಬಿ.ಎನ್.ರವಿಕುಮಾರ್ ಅವರು ವೇದಿಕೆಯಲ್ಲಿ ಸನ್ಮಾನಿಸಿ ಪುರಸ್ಕರಿಸಿದರು.

ಈ ವೇಳೆ ಚಿಲಕನೇರ್ಪಿನ ನಾಲ್ಕು ಜನ ಕುಟುಂಬ ಪ್ರಯಾಣಿಸುವಾಗ ದಿಬ್ಬೂರಹಳ್ಳಿ ಬಳಿ ಅಪಘಾತದಲ್ಲಿ ಆ ಕುಟುಂಬದ ಮೂವರು ಮೃತರಾಗಿ “ಶಿವಾನಿ” ಎಂಬ ಮಗು ಅಪಾಯದಿಂದ ಪಾರಾಗಿದ್ದಳು ಆ ಮಗುವಿನ ಕುಟುಂಬದ ಸಂಬಂಧಿಕರನ್ನು ಕರೆಯಿಸಿ 2 ಲಕ್ಷ ರೂ.ಗಳ ಆರ್ಥಿಕ ಸಹಾಯ ನೀಡಿ ,ಸಾಂತ್ವನ ಹೇಳಿ, ಸನ್ಮಾನಿಸಿ ಗೌರವಿಸಲಾಯಿತು.

ಬಶೆಟ್ಟಿಹಳ್ಳಿ ಹೋಬಳಿಯ ಕುಂಬಾರಹಳ್ಳಿಯ ನಾರಾಯಣಸ್ವಾಮಿ ಅವರು ಇತ್ತೀಚಿಗೆ ಮಳೆ ,
ಗಾಳಿಯೊಂದಿಗೆ ಸಿಡಿಲು ಬಡಿದು ಮೃತಾಗಿದ್ದರು ಅವರ ಪತ್ನಿ ಮಂಜುಳಾ ಅವರಿಗೆ ಸಾಂತ್ವನ ಹೇಳಿ, 2 ಲಕ್ಷ ರೂ.ಗಳ ಆರ್ಥಿಕ ಸಹಾಯ ನೀಡಿ ಸನ್ಮಾನಿಸಿ ,ಗೌರವಿಸಲಾಯಿತು.

ಶೇಕಡಾ 100 ರಷ್ಟು ಫಲಿತಾಂಶ ಪಡೆದಿರುವ 5 ಸರ್ಕಾರಿ ಪ್ರೌಢ ಶಾಲೆಗಳಾದ ಕುಂದಲಗುರ್ಕಿ ಮುತ್ತೂರು, ಸಾದಲಿ,ಚೀಮಂಗಲ ದೊಡ್ಡತೇಕಹಳ್ಳಿ, ಶಾಲೆಗಳ ಶಿಕ್ಷಕರಿಗೆ ಒಟ್ಟಾರೆಯಾಗಿ 5 ಲಕ್ಷ ರೂ.ಗಳನ್ನು ಬಹುಮಾನವಾಗಿ ಸಹ ನೀಡಿ ಶಿಕ್ಷಕರನ್ನು ಅವರು ಸನ್ಮಾನಿಸಿ ಗೌರವಿಸಿದರು ಹಾಗು ಪರೀಕ್ಷಾ ಸಮಯದಲ್ಲಿ ಹಗಲು ,ರಾತ್ರಿ ಎನ್ನದೆ ಶ್ರಮಿಸಿದ ಬಿಇಒ ನರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್,ನಗರ ಘಟಕ ಅಧ್ಯಕ್ಷೆ ಮಂಜುಳಮ್ಮ,
ಕೋಲಾರ ಜಿಲ್ಲಾ ಜೆಡಿಎಸ್ ಮುಖಂಡ ವಕ್ಕಲ್ಲೇರಿ ರಾಮು, ನಗರಸಭೆ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ,
ತಾದೂರು ರಘು,ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಗುಡಿಹಳ್ಳಿ ಮುನಿವೆಂಕಟಸ್ವಾಮಿ, ಈ.ತಿಮ್ಮಸಂದ್ರ ಶಿವಾರೆಡ್ಡಿ,ಜೆ.ವಿ.ಸದಾಶಿವ,ನಾಗಮಂಗಲ ಶ್ರೀನಿವಾಸಗೌಡ ,ಪೂಲಕುಂಟಹಳ್ಳಿ ರಘುನಾಥರೆಡ್ಡಿ, ಗಂಜಿಗುಂಟೆ ನರಸಿಂಹಮೂರ್ತಿ,ತಿಮ್ಮನಾಯಕನಹಳ್ಳಿ ರಮೇಶ್, ಆರ್.ಎ.ಉಮೇಶ್,ಕುಂದಲಗುರ್ಕಿ ಚಂದ್ರು,ಆನೂರು ವಿಜಯೇಂದ್ರ,ಎಸ್.ಎಂ.ರಮೇಶ್, ನಂದಕಿಶನ್, ರಾಘವೇಂದ್ರ ,ಹನುಮಂತಪುರ ವಿಜಿ ಮುಂತಾದವರು ಹಾಜರಿದ್ದರು.








