--Ads--

ದಿನ-ದಿನ ವನ ಮಹೋತ್ಸವ ಅಭಿಯಾನ 

On: July 4, 2026 7:44 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ದಿನ-ದಿನ ವನ ಮಹೋತ್ಸವ ಅಭಿಯಾನ 

ಆಲೂರು: ಹಸಿರು ಕರ್ನಾಟಕ ಫೌಂಡೇಶನ್ ವತಿಯಿಂದ, ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕ ಅಜ್ಜಿ ಅವರ 115ನೇ ಜನ್ಮದಿನದ ಸ್ಮರಣಾರ್ಥವಾಗಿ ಆಯೋಜಿಸಿರುವ ದಿನ-ದಿನ ವನ ಮಹೋತ್ಸವ ಅಭಿಯಾನದ ಅಂಗವಾಗಿ, 04-07-2026 ರಂದು ಬೆಳಿಗ್ಗೆ 10:30ಕ್ಕೆ ಆಲೂರು ತಾಲ್ಲೂಕಿನ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ”, ಅಬ್ಬನದಲ್ಲಿ ಪುಟ್ಟ ಮಕ್ಕಳೊಂದಿಗೆ ಗಿಡ ನೆಡುವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್, ಅರಣ್ಯ ಸಂರಕ್ಷಕ ಮನು, ಪರಿಸರ ಪ್ರೇಮಿ ಇತಿಹಾಸ್ ಜಿ.ಎಸ್., ಶಾಲೆಯ ಮುಖ್ಯೋಪಾಧ್ಯಾಯ ಹುಲ್ಲೇಗೌಡ ಸರ್ ಹಾಗು ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ್, ಗ್ರಾಮಸ್ಥರಾದ ದುಷ್ಯಂತ್, ಚಂದ್ರಶೇಖರ್, ಮತ್ತು ಶಾಲಾ ಮಕ್ಕಳು ಭಾಗವಹಿಸಿದರು.

ಪರಿಸರ ಸಂರಕ್ಷಣೆಯ ಮಹತ್ವವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಹಣ್ಣು ಮತ್ತು ನೆರಳಿನ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

🌱 ಮನೆಗೊಂದು ಗಿಡ… ಊರಿಗೊಂದು ವನ… 🌳🌿 ಹಸಿರೇ ಉಸಿರು 🌿 🙏🏻

WhatsApp

Join Now

Telegram

Join Now

Instagram

Join Now