--Ads--

ಪುಸ್ತಕಗಳಿಂದಲೇ ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ

On: May 18, 2026 3:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪುಸ್ತಕಗಳಿಂದಲೇ ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ

ವಿಜಯಪುರ: ಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳು ದೇವಗಣಕ್ಕೆ ಹೋಲಿಕೆಯಾದರೆ, ಮೊಬೈಲ್‌ಗಳು ರಾಕ್ಷಸ ಗಣಕ್ಕೆ ಹೋಲಿಕೆ ಯಾಗುತ್ತಿವೆ. ಪುಸ್ತಕ ಓದುವವರ ಮುಖದಲ್ಲಿ ಮಂದ ಹಾಸ, ತಿಳುವಳಿಕೆ ಮತ್ತು ತಾಳ್ಮೆ ಎದ್ದು ಕಾಣುತ್ತಿದ್ದರೆ, ಸದಾ ಮೊಬೈಲ್‌ನಲ್ಲಿ ಮುಳುಗಿ ರುವವರು ಸಿಡಿಮಿಡಿಗೊಳ್ಳುತ್ತಾ ತಲೆನೋವು, ಕಣ್ಣುನೋವಿನಂತಹ ಸಮಸ್ಯೆಗಳಿಂದ ನರಳುತ್ತಿದ್ದಾರೆ, ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ ಗಂಗರಾಜು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಎಂಬ ವಿಶಿಷ್ಟ ಕಾರ್ಯಕ್ರಮದಡಿ, ಪಟ್ಟಣದ ಪ್ರಸಿದ್ದ ಸಾಹಿತಿ ಹಾಗೂ ಕವಯಿತ್ರಿ ಸ್ವರ್ಣಗೌರಿ ಮಹದೇವ್ ಅವರ ನಿವಾಸದಲ್ಲಿನ ಪುಸ್ತಕ ಭಂಡಾರದ ಮಧ್ಯೆಅವರಿಗ ಸನ್ಮಾನ ನೇರವೇರಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡಿ, ವಿಜಯಪುರ ಪಟ್ಟಣವು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿ ಎಲ್ಲಿಯಾದರೂ ಒಂದು ಕಲ್ಲು ಬೀಸಿದರೆ, ಅದು ಯಾವುದೋ ಒಬ್ಬ ಸಾಹಿತಿ, ಕವಿ ಅಥವಾ ಸಾಂಸ್ಕೃತಿಕ ವ್ಯಕ್ತಿಯ ಮನೆಯ ಮೇಲೆಯೇ ಬೀಳುತ್ತದೆ! ಎಂದು ಪಟ್ಟಣದ ಸಾಹಿತ್ಯಕ ಹಿನ್ನೆಲೆಯನ್ನು ಮಾರ್ಮಿಕವಾಗಿ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಜಗತ್ತಿನಲ್ಲಿ ಇಂದು ಏನಾದರೂ ಧನಾತ್ಮಕ ಬದಲಾವಣೆಗಳಾಗಿದ್ದರೆ ಅದಕ್ಕೆ ಪುಸ್ತಕಗಳೇ ಕಾರಣ. ಪುಸ್ತಕಗಳಿಲ್ಲದಿದ್ದರೆ ಮನುಕುಲ ಕಗ್ಗತ್ತಲಲ್ಲಿ ಇರಬೇಕಾಗುತ್ತಿತ್ತು. ಅಕ್ಷರ ಎಂಬ ಬೆಳಕು, ಭಾಷೆ ಎಂಬ ಮಾಧ್ಯಮ ಇಲ್ಲದಿದ್ದಲ್ಲಿ ನಾವಿನ್ನೂ ಶಿಲಾಯುಗದ ಮನುಷ್ಯರಾಗಿಯೇ ಉಳಿಯುತ್ತಿದ್ದೆವು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಪ್ರಮೀಳಾ ಮಹದೇವ್ ಮಾತನಾಡಿ, ಪ್ರಾಧಿಕಾರದ ರಾಜ್ಯಾದ್ಯಂತ ‘ಮನೆಗೊಂದು ಗ್ರಂಥಾಲಯ’ ಯೋಜನೆ ರೂಪಿಸಲಾಗಿದ್ದು, ಒಟ್ಟು ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಮನೆಯಲ್ಲೂ ಕನಿಷ್ಠ 500 ಪುಸ್ತಕಗಳಿದ್ದಲ್ಲಿ ಪ್ರಕಾಶಕರು, ಸಾಹಿತಿಗಳು ಹಾಗೂ ಒಟ್ಟಾರೆ ನಮ್ಮ ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಇದರಿಂದ ವತಿಯಿಂದ ಓದುಗರ ವಲಯ ವಿಸ್ತರಿಸುವುದಲ್ಲದೆ, ಸಾಹಿತ್ಯ ಸ್ನೇಹಿತರ ನಡುವೆ ಉತ್ತಮ ಸಂಪರ್ಕ ಸೇತು ನಿರ್ಮಾಣವಾಗುತ್ತದೆ ಎಂದರು.

ಇಲಾಖೆಯ ಪುಸ್ತಕ ಪ್ರಾಧಿಕಾರದ ವತಿಯಿಂದ ಸಾಹಿತಿ ಸ್ವರ್ಣಗೌರಿ ಮಹದೇವ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿ.ಮ. ಸುಧಾಕರ್, ಕರ್ನಾಟಕ ಮಿತ್ರ ಸಂಘದ ಕಾರ್ಯದರ್ಶಿ ಆ‌ರ್. ಮುನಿರಾಜು, ಅಕ್ಕನ ಬಳಗದ ದ್ರಾಕ್ಷಾಯಣಮ್ಮ, ಮಹಿಳಾ ಸಂಘದ ಕಾರ್ಯದರ್ಶಿ ರೂಪಾ ಭಾಸ್ಕರ್, ಶ್ವೇತಾ ಮಂಜುನಾಥ್, ದೀಪಾ ಇತರರಿದ್ದರು.

WhatsApp

Join Now

Telegram

Join Now

Instagram

Join Now