--Ads--

” ರಣಭೈರೇಗೌಡ ವಾರಿಯರ್ಸ್” ತಂಡದ ಲಾಂಛನ ಹಾಗೂ ಕ್ರೀಡಾ ಉಡುಪು ಅನಾವರಣ

On: May 15, 2026 6:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ರಾಜ್ಯ ಮಟ್ಟದ ಜನತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳು 

ರಣಭೈರೇಗೌಡ ವಾರಿಯರ್ಸ್” ತಂಡದ ಲಾಂಛನ ಹಾಗೂ ಕ್ರೀಡಾ ಉಡುಪು ಅನಾವರಣ

ದೇವನಹಳ್ಳಿ: ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರ ಜನ್ಮದಿನ ಹಾಗೂ ಜೆಡಿಎಸ್ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಜನತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ “ರಣಭೈರೇಗೌಡ ವಾರಿಯರ್ಸ್” ತಂಡದ ಲಾಂಛನ ಹಾಗೂ ಕ್ರೀಡಾ ಉಡುಪನ್ನು ದೇವನಹಳ್ಳಿಯ ಕೊಡಗುರ್ಕಿಯಲ್ಲಿ
ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್. ಮಹೇಶ್ ಅವರು ಜಂಟಿಯಾಗಿ ತಂಡದ ಲೋಗೋ ಬಿಡುಗಡೆ ಮಾಡಿ, ಆಟಗಾರರಿಗೆ ಶುಭ ಹಾರೈಸಿದರು.

ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಜೆಡಿಎಸ್‌ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಯುವ ಜನತಾದಳದ ವತಿಯಿಂದ ಮೇ 15, 16 ಮತ್ತು 17ರಂದು ಬೆಂಗಳೂರಿನ ಮಾದಾವರದ ನೈಸ್ ಗ್ರೌಂಡ್ ನಲ್ಲಿ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ತಂಡವು ಉತ್ತಮ ಪ್ರದರ್ಶನ ನೀಡಿ ಗೆದ್ದು ಬರಲಿ,” ಎಂದು ಹಾರೈಸಿದರು.

ತಂಡದ ನಾಯಕ ಮನು ನೇತೃತ್ವದಲ್ಲಿ ಆಟಗಾರರಾದ ಸಂತೋಷ್, ರಾಮ್ ಎಸ್. ಬಾಲಕೃಷ್ಣ ವಿ.ಎಂ., ಪ್ರದೀಪ್ ಕೆ.ಎನ್, ನಿಖಿಲ್ ಬಿ.ಕೆ, ಗೌತಮ್, ಮುರಳಿಧರ್, ಮಹೇಶ್ ಬಾಬು ಎಸ್., ವೆಂಕಟೇಶ, ಭರತ್ ಜಿ.ಪಿ., ಕೆಂಪೇಗೌಡ.ಜಿ, ಪುನೀತ್ ಗೌಡ ಆರ್ ಮತ್ತು ನಿಶ್ಚಲ್ ಅವರು ಹೊಸ ಉಡುಪನ್ನು ಧರಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯ ದರ್ಶಿ ಮನೋಹ‌ರ್, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಟಿ. ರವಿ, ಮುಖಂಡರಾದ ಜಗದೀಶ್, ವೆಂಕಟೇಶ್ ಮೂರ್ತಿ, ಗೌರೀಶ್, ಚೇತನ್, ಮಂಜುನಾಥ್, ಮುರುಳಿ, ಅಭಿ, ಮನು, ಸೋಮ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now