ವಿಜಯ ದರ್ಪಣ ನ್ಯೂಸ್…
ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬ ಆಚರಣೆ

ಕೋಲಾರ, ಮೇ 18: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ 94ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ನಗರದ ಸಾಯಿಬಾಬಾ ಮಂದಿರದಲ್ಲಿ ದೇವೇಗೌಡರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತ ರೊಂದಿಗೆ ಕೇಕ್ ಕತ್ತರಿಸಿ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ದೇಶದಲ್ಲಿ ಪ್ರಧಾನಮಂತ್ರಿಯಾಗಿ ರೈತ ನಾಯಕರಾಗಿ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ರಾಜಕೀಯ ವಲಯದಲ್ಲಿ ಎಲ್ಲಾ ಪಕ್ಷಗಳ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ ಕೃಷಿ ನೀರಾವರಿ, ಗ್ರಾಮೀಣ ವಲಯಕ್ಕೆ ಅವರ ಕೊಡುಗೆ ಅಪಾರ ತಮ್ಮ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು
ದೇವೇಗೌಡರ ಗರಡಿಯಲ್ಲಿ ಬೆಳದ ಎಷ್ಟೋ ನಾಯಕರು ಇವತ್ತು ರಾಜಕಾರಣದಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ ದೇಶದ ಹಿತಾಸಕ್ತಿ ಹಾಗೂ ರೈತರ ಹಿತಾಸಕ್ತಿಯಲ್ಲಿ ಇವತ್ತು ಕೂಡ ರಾಜ್ಯಸಭೆಯಲ್ಲಿ ಇದ್ದು ಪ್ರಶ್ನೆ ಮಾಡಿದ್ದಾರೆ. ಅವರ ವ್ಯಕ್ತಿತ್ವ ಹಾಗೂ ಮೌಲ್ಯಾಧಾರಿತ ಸಿದ್ಧಾಂತವು ಇವತ್ತಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ ಡಿ ದೇವೇಗೌಡರು ಮತ್ತು ಹೆಚ್ ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಜನಪರ, ರೈತಪರ ಆಡಳಿತ ಬರಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ದೇಶದ ರಾಜಕೀಯ ಇತಿಹಾಸ ದಲ್ಲಿ ವಿಶಿಷ್ಟ ಛಾಪು ಮೂಡಿಸಿದ ನಾಯಕ, ರೈತರ ಸಮಸ್ಯೆ, ಗ್ರಾಮೀಣಾಭಿವೃದ್ಧಿ ಹಾಗೂ ಜನಸಾಮಾನ್ಯರ ಪರ ಹೋರಾಟದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರ ಸರಳತೆ ಮತ್ತು ಜನಪರ ಆಡಳಿತ ಇಂದಿಗೂ ಅನೇಕರಿಗೆ ಪ್ರೇರಣೆ. ಅವರ ಜನ್ಮದಿನ ಹಬ್ಬದಂತೆ ದೇಶಾದ್ಯಂತ ಆಚರಿಸುತ್ತಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ರಾಜ್ಯದಿಂದ ಹೋಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಮೊದಲಿಗರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಅದರ ಆಸ್ತಿತ್ವವನ್ನು ಉಳಿಸಿದ್ದಾರೆ ಎಂದರೆ ಅದಕ್ಕೆ ಕಾರಣ ದೇವೇಗೌಡರು ಕಾರಣ ಅವರಿಗೆ ದೇವರು ಆರೋಗ್ಯ ಆಯಸ್ಸು ಹೆಚ್ಚಾಗಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.
ಸಂದರ್ಭದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅನುಷ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಡಿ.ಕೆ ರಮೇಶ್, ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಕೋಮುಲ್ ನಿರ್ದೇಶಕ ವಡಗೂರು ಹರೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ ಮುಖಂಡರಾದ ಯಲವಾರ ಸೊಣ್ಣೇಗೌಡ, ಮೂರಾಂಡಹಳ್ಳಿ ಬಾಬು, ವಡಗೂರು ರಾಮು. ಲಕ್ಷಣ್ ಗೌಡ, ಲೋಕೇಶ್ ಮರಿಯಪ್ಪ, ಕುರಗಲ್ ರಮೇಶ್, ಯಲುವಗುಳಿ ನಾಗರಾಜ್, ಬಲಿಜ ಸಂಘದ ತೋಟಗಳ ಅಶೋಕ್, ಚಂಬೆ ರಾಜೇಶ್, ದುದುವಾಡಿ ಮಂಜುನಾಥ್, ಛತ್ರಕೋಡಿಹಳ್ಳಿ ಕುಮಾರ್, ಅಮ್ಮನಲ್ಲ ರಮೇಶ್, ಹೊಳೇರಹಳ್ಳಿ ಅಶೋಕ್, ಜಯನಗರ ಕಾರ್ತಿಕ್, ಜನಪನಹಳ್ಳಿ ಆನಂದ್, ವಿಜಯ್ ಗೌಡ, ವಿಕೆ ರಾಜೇಶ್, ಮುಂತಾದವರು ಇದ್ದರು
ಮಳೇರಾಯ
ಮರಗಿಡಗಳೊಂದಾಗಿ
ಚಾಮರವ ಬೀಸುತಿವೆ
ಎಲ್ಲಿರುವೆ ಮಳೇರಾಯ ಬಾ ಬುಮಿಗೆ
ಕೆರೆಕಟ್ಟೆಗಳೆಲ್ಲಾ ಒಣಗಿಬಾಯ್ದೆರೆದಿವೆ
ಹೆಚ್ಚಾಗಿ ಬಿಸೀಲಿನಾ ಬೆಗುದಿಗೆ !!ಪ!!
ರಂಟೇ ಕುಂಟೆಗಳಿಂದ ಹಸನಾದ
ಭುತಾಯಿ ಬಾಯ್ದೇರೆದು ನಿಂತಿಹಳು
ಈ ಭಾನಿಗೆ
ಸೃಷ್ಟಿಯಾ ಸಕಲ ಜೀವಗಳ. ಹಸಿದೋಡಲ ತುಂಬಲು ಕಾದಿಹಳು
ಈ ಭುಮಿಗೆ
ರೈತರೆಲ್ಲಾ ಕುಡಿ ಹವನ ಹೋಮವಮಾಡಿ ವೃತ ವಗೈದರು
ನಿನ್ನ ಶ್ರೀಪಾದಕೆ
ಋಶಿ ಮುನಿಗಳೆಲ್ಲ ಯಜ್ಞನವನು ಕೈಗೊಂಡು ತಪಗೈದರು ನಿನ್ನ ಸನ್ನಿದಿಗೆ
ಹಸಿವು ನೀರಿನ ದಾಹ ಹೇಚ್ಚಾಗಿ ಎಲ್ಲೆಡೆ ಅರಚಾಟ ಕಿರುಚಾಟ ಕೇಳಿಲ್ಲವೆ
ನಿ ಬರದೆ ಇದ್ದರೆ ಬ್ರಮ್ಹಾಂಡ ಕೆಳಗಾಗಿ
ಅಲ್ಲೊಲ ಕಲ್ಲೊಲ ತಾನಲ್ಲವೆ
ಪ್ರಾಣಿ ಪಕ್ಷೀಗಳಿಗೆ ಹಸಿದ ಕಂದಮ್ಮನಿಗೆ ಧರೆಗಿಳಿದು ನೀರುಣಿಸು
ಈ ಧರಣಿಗೆ
ನಿಬಂದು ತಂಪಾಗಿ ಬೇಳೆ ಭೆಳೆದು ಸೊಂಪಾಗಿ ಸಿರಿಯನ್ನು ಚಿಮ್ಮಿಸು
ಈ ನಾಡಿಗೆ
ಸಾಹಿತ್ಯ ರಚನೆ
ಮಲ್ಲೇಶ ದಂಡಿನ ಸಾಹಿತಿಗಳು
ಸೋಮನಕಟ್ಟಿ ,ಹಾವೇರಿಜಿಲ್ಲೆ
9972149612










