--Ads--

ಬಿಡದಿ ಟೌನ್ ಶಿಪ್ ರೈತರ ಭೂಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಕಾರವಾರ ಜೆಡಿಎಸ್ ನಿಂದ  ಬೆಂಬಲ 

On: June 20, 2026 7:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬಿಡದಿ ಟೌನ್ ಶಿಪ್ ರೈತರ ಭೂಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಕಾರವಾರ ಜೆಡಿಎಸ್ ನಿಂದ  ಬೆಂಬಲ 

ಇದು ಕೇವಲ ಬಿಡದಿ ಸಮಸ್ಯೆಯಲ್ಲ, ಇದು ಕರ್ನಾಟಕದ ಪ್ರತಿಯೊಬ್ಬ ರೈತನ ಅಸ್ತಿತ್ವದ ಪ್ರಶ್ನೆ!

ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ₹33,562 ಕೋಟಿ ಮೊತ್ತದ ಭೂಸ್ವಾಧೀನ ಹಾಗೂ ರಿಯಲ್ ಎಸ್ಟೇಟ್ ದಂಧೆಗೆ ವಿರೋಧವಾಗಿ ರಾಜ್ಯಾದ್ಯಂತ ರೈತರು, ಕಾರ್ಮಿಕರು ಮತ್ತು ಭೂಮಿಯ ಹಕ್ಕಿಗಾಗಿ ಹೋರಾಡುವ ಜನರು ಒಂದಾಗುತ್ತಿದ್ದಾರೆ.

ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ನಿಯೋಗವು ಜಿಲ್ಲಾಧಿಕಾರಿಗಳಾದ ಕಾರವಾರ ಡಿಸಿ ಅವರಿಗೆ ಮನವಿ ಸಲ್ಲಿಸಿ ರೈತರ ಪರ ಧ್ವನಿ ಎತ್ತಿದೆ.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಮೀನುಗಾರರ ಘಟಕದ ಉಪಾಧ್ಯಕ್ಷರಾದ ಕೃಷ್ಣ ತಾಂಡೇಲ್, ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಸೂರಜ್ ನಾಯ್ಕ್ ಸೋನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಮೊಹಿನಿ ನಾಯ್ಕ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡುವಂತೆ ಆಗ್ರಹಿಸಿದರು.

“ನಮ್ಮ ಭೂಮಿ ನಮಗೆ ಕೇವಲ ಮಣ್ಣಲ್ಲ; ಅದು ನಮ್ಮ ಅಸ್ತಿತ್ವ, ನಮ್ಮ ಬದುಕು ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ.”

ಜೂನ್ 21 ರಂದು ನಡೆಯಲಿರುವ ಪಾದಯಾತ್ರೆಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ, ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ನ್ಯಾಯಯುತ ಹೋರಾಟಕ್ಕೆ ಉತ್ತರ ಕನ್ನಡ ಜೆಡಿಎಸ್ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ