--Ads--

ಚಪ್ಪಲಿ ಎಸೆತ ಸುಮೊಟೋ ಪ್ರಕರಣ ದಾಖಲಿಸುವಷ್ಟು ದೊಡ್ಡ ಅಪರಾಧವಲ್ಲ: ನಿಖಿಲ್ ಕುಮಾರಸ್ವಾಮಿ

On: June 30, 2026 2:58 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಚಪ್ಪಲಿ ಎಸೆತ ಸುಮೊಟೋ ಪ್ರಕರಣ ದಾಖಲಿಸುವಷ್ಟು ದೊಡ್ಡ ಅಪರಾಧವಲ್ಲ: ನಿಖಿಲ್ ಕುಮಾರಸ್ವಾಮಿ

ಚಿಕ್ಕಬಳ್ಳಾಪುರ: ಶನಿವಾರ ನಡೆದ ನಾಡ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್‌ ಅವರಿಗೆ ಚಪ್ಪಲಿ ಎಸೆದ ಪ್ರಕರಣದಲ್ಲಿ 9 ಜನರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಅಣಕನೂರು ಬಳಿಯ ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿತರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ಅಮಾಯಕ ಕಾರ್ಯಕರ್ತರನ್ನು, ಪ್ರಕರಣದಲ್ಲಿ ಶಾಮೀಲಾಗದ ವ್ಯಕ್ತಿಗಳನ್ನೂ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದರು.

ನಮ್ಮ ಕಾರ್ಯಕರ್ತರ ಮೇಲೆ ಸುಮೊಟೋ ಪ್ರಕರಣ ದಾಖಲಿಸಲಾಗಿದೆ. ಆದರೆ ಸುಮೋಟೋ ಕೇಸ್ ಹಾಕುವಷ್ಟು ದೊಡ್ಡ ಅಪರಾಧವನ್ನು ಇಲ್ಲಿ ಯಾರೂ ಮಾಡಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವವರನ್ನೇ ಗುರಿಯಾಗಿಸಲಾಗುತ್ತಿದೆ. ಬಂಧಿತರು ಸಾಕಷ್ಟು ಭಯಭೀತರಾಗಿದ್ದಾರೆ. ಬಂಧಿತರೆಲ್ಲಾ ಜೈಲಿನ ಸಂಸ್ಕೃತಿಯಿಂದ ಬಂದವರಲ್ಲಾ. ಬಂಧಿತರ ಕಣ್ಣಲ್ಲಿ ನೋವಿದೆ, ಭಯವಿದೆ. ಸಾಮಾನ್ಯ ಪ್ರಜೆಯನ್ನು ಟಾರ್ಗೆಟ್ ಮಾಡುವುದು ಸರಿಯಲ್ಲಾ. ಸದ್ಯ ಬಂಧಿತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬುತ್ತೇವೆ. ಧೈರ್ಯ ತುಂಬಿ ಮನೆ ಮಕ್ಕಳನ್ನು ಅತೀ ಶೀಘ್ರದಲ್ಲೇ ಮನೆಗೆ ಕಳುಹಿಸುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ರೆಡ್ಡಿ ಜೀಡಮಾಕಲಹಳ್ಳಿ ಅವರ ಬಂಧನವನ್ನು ಖಂಡಿಸಿದ ನಿಖಿಲ್, ಅಖಿಲ್ ರೆಡ್ಡಿ ಗೌರವಯುತವಾಗಿ ಬದುಕು ಕಟ್ಟಿಕೊಂಡವರು. ಒಳ್ಳೆಯ ಸಂಸ್ಕೃತಿಯ ಹಿನ್ನೆಲೆ ಇರುವ ವ್ಯಕ್ತಿಯನ್ನು ಜೈಲಿನಲ್ಲಿ ಕೂರಿಸುವುದು ತಪ್ಪು. ಈ ಘಟನೆಯಿಂದ ಬಂಧಿತರ ಕುಟುಂಬಗಳಿಗೆ ತೀವ್ರ ಆಘಾತವಾಗಿದೆ ಎಂದರು.

ಪ್ರದೀಪ್ ಈಶ್ವರ್‌ಮೇಲೆ ಎಫ್‌ಐಆರ್‌ಗೆ ಆಗ್ರಹ:

ಪ್ರಚೋದನೆ ನೀಡಿ ಉದ್ದೇಶಪೂರ್ವಕವಾಗಿ ನಮ್ಮವರನ್ನು ಒಳಗಡೆ ಹಾಕಿಸಿದ್ದಾರೆ. ಆ ವ್ಯಕ್ತಿಯನ್ನು ಇಲ್ಲಿಯವರೆಗೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಎಫ್ ಐಆರ್‌ ಯಾರ ಮೇಲೆ ದಾಖಲಾಗಬೇಕು ಎಂದು ಎಲ್ಲರಿಗೂ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್‌ ಅವರ ಹೆಸರು ಪ್ರಸ್ತಾಪಿಸದೆ ಆಗ್ರಹಿಸಿದರು.

ನಾಡ ಕೆಂಪೇಗೌಡರು ನಾಡಿನ ಪ್ರಭುಗಳು, ಸರ್ವ ಜನಾಂಗದ ನಾಯಕರು. ಅವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತರಲ್ಲ. ಈಗ ನಾನು ಯಾರ ಬಗ್ಗೆಯೂ ಮಾತನಾಡಲು ಇಷ್ಟಪಡಲ್ಲಾ. ಇದರ ಬಗ್ಗೆ ಮಾತನಾಡುವವರು ಮಾತನಾಡ್ತಾರೆ ಎಂದು ಹೇಳಿದರು.

ಬಂಧಿತರ ಕುಟುಂಬಗಳಿಗೆ ನಿಖಿಲ್ ಸಾಂತ್ವನ:

ನಿಖಿಲ್ ಕುಮಾರಸ್ವಾಮಿಯವರು, ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ಜೆಡಿಎಸ್ ಕೋರ್‌ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಸೇರಿ ಪಕ್ಷದ ಮುಖಂಡರೊಂದಿಗೆ ಅಣಕನೂರು ಬಳಿಯ ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಬಳಿಕ ಬಂಧಿತ ಅಖಿಲ್ ರೆಡ್ಡಿ ಅವರ ಜೀಡಮಾಕಲಹಳ್ಳಿಯ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ ಸಂಪೂರ್ಣ ಕಾನೂನು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಇಬ್ಬರು ಭದ್ರತಾ ಸಿಬ್ಬಂದಿಯ ಜಗಳ ಕೊಲೆಯಲ್ಲಿ ಅಂತ್ಯ ಪೋಲಿಸರು ದೂರು ದಾಖಲಿಸಿ ತನಿಖೆ

ಶಾಸಕ ಪ್ರದೀಪ್ ಈಶ್ವರ್ ತಮ್ಮ ಭಂಡತನದ ಧೋರಣೆಯನ್ನು ಬದಲಿಸಿಕೊಳ್ಳಬೇಕು : ಪೂಲಕುಂಟಲಹಳ್ಳಿ ರಘುನಾಥರೆಡ್ಡಿ

ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ “ಪಲ್ಸ್ ಪೋಲಿಯೊ ಹನಿ” ಹಾಕಿಸಿ ಪೋಲಿಯೋ ಮುಕ್ತ ಭಾರತ ಮಾಡೋಣ : ಶಾಸಕ ಬಿ.ಎನ್.ರವಿಕುಮಾ‌ರ್

ನಾನು, ನಂದು, ನಾನೇ, ನನ್ನಿಂದ…? ಎನ್ನುವ ಮಾತುಗಳನ್ನು ಆಂಜಿನಪ್ಪ(ಪುಟ್ಟು) ಮೊದಲು  ಬಿಡಿ : ರಾಜೀವ್ ಗೌಡ

ಶಿಡ್ಲಘಟ್ಟ ನಗರದಲ್ಲಿ 517ನೇ ನಾಡಪ್ರಭು ಕೆಂಪೇಗೌಡರ ಜಯಂತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗು ಪಲ್ಲಕ್ಕಿಗಳ ಮೆರವಣಿಗೆ

ಅರಣ್ಯಾಧಿಕಾರಿಗಳ ರೈತ, ದಲಿತ ವಿರೋಧಿ ನೀತಿಯನ್ನು ಖಂಡಿಸಿ  ಜೂನ್-29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ