--Ads--

ಮಾನವೀಯ ಮೌಲ್ಯಗಳಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಕ ಶಕ್ತಿ ನಾಡಪ್ರಭು ಕೆಂಪೇಗೌಡರು

On: July 6, 2026 1:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಾನವೀಯ ಮೌಲ್ಯಗಳಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಕ ಶಕ್ತಿ ನಾಡಪ್ರಭು ಕೆಂಪೇಗೌಡರು

ಕೆಂಗೇರಿ: ಜಾತಿ ಮತ ಪಂಥಗಳ ಎಲ್ಲೆ ಮೀರಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾಗಿದ್ದ ಕೆಂಪೇಗೌಡರು ಪ್ರಾತಃ ಸ್ಮರಣೀಯರು ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ಆಂದ್ರಹಳ್ಳಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ರಾಮಸ್ವಾಮಿ ಬಡಾವಣೆಯಲ್ಲಿ ಆಯೋಜಿಸಿದ್ದ Soder 517fe wor ನಾಡಪ್ರಭು ಹಾಗೂ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿ ಚಿಂತನೆಗಳ ಫಲವಾಗಿ ಇಂದು ಬೆಂಗಳೂರು ವಿಶ್ವಮಾನ್ಯ ತೆಯನ್ನು ಪಡೆದಿದೆ ಎಂದರು. ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಸಸಿಗಳನ್ನು ನೆಟ್ಟು ಪರಿಸರ ಸಮತೋಲನದೊಂದಿಗೆ ಉತ್ತಮವಾದ ಹವಾಮಾನ ಹೊಂದಲು ಅವರ ಮುಂದಾಲೋಚನೆಯೇ ಕಾರಣ ಎಂದರು.

ವಿಧಾನ ಪರಿಷತ್ ಸದಸ್ಯಟಿ.ಎನ್. ಜವರಾಯಿಗೌಡ ಮಾತನಾಡಿ ನಾಡು ಪ್ರಭು ಕೆಂಪೇಗೌಡರ ತತ್ವ ಸಿದ್ಧಾಂತ ಆದರ್ಶಗಳನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ನಿತ್ಯವೂ ನೆನಪಿಸಿಕೊಂಡು ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಮಲ್ಲೇಶ್ ಮಾತನಾಡಿ ವಿಶ್ವ ಭೂಪಟದಲ್ಲಿ ಬೆಂಗಳೂರು ನಗರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನ ದೊರೆತಿರುವ ಹಿಂದೆ ನಾಡು ಪ್ರಭು ಕೆಂಪೇಗೌಡರ ಮತ್ತು ಅಪಾರ ಕೊಡುಗೆ ಇದೆ ಎಂದರು. ಎಲ್ಲ ಸಮುದಾಯದವರು ಪ್ರೀತಿ ವಿಶ್ವಾಸ, ಬಾಂಧವ್ಯ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಗೌರವಾಧ್ಯಕ್ಷ ಎಂ. ಗಂಗಣ್ಯ ಸಂಘದ ಪದಾಧಿಕಾರಿಗಳಾದ ರಾಮಸ್ವಾಮಿ, ರಘು ಜಿ. ಶ್ರೀನಿವಾಸ್ ರವಿ ಎಸ್, ಶಿವೇಗೌಡ,ಸತೀಶ್ ಎಂ ಕಾರ್ಯಾಧ್ಯಕ್ಷ ಮಂಜುನಾಥ್, ಜೆಡಿಎಸ್ ಮುಖಂಡ ಅರುಣ್ ಗೌಡ, ಸತೀಶ್, ಕಾಂಗ್ರೆಸ್ ಮುಖಂಡ ಸತೀಶ್, ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಲಾತಂಡಗಳೊಂದಿಗೆ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಮಹಾ ಸ್ವಾಮೀಜಿಯವರನ್ನು ಪೂರ್ಣ ಕುಂಭ ಹೊತ್ತ ಮಹಿಳೆಯರ ಸ್ವಾಗತ. ದೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ವೇದಿಕೆಗೆ ಕರೆ ತರಲಾಯಿತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಶಿಕ್ಷಕರು, ವೈದ್ಯರು ಎಂದು ನಿವೃತ್ತರಾಗುವುದಿಲ್ಲ, ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು :-ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು

30 ವರ್ಷಗಳಿಂದ ಅಡುಗೆಮನೆಯ ಆದ್ಯತೆಯ ಆಯ್ಕೆಯಾಗಿರುವ ಸನ್‌ಪ್ಯೂರ್, ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಸಾರಥ್ಯದಲ್ಲಿ ಹೊಸ ಮಾಧ್ಯಮ ಅಭಿಯಾನ ಆರಂಭಿಸಿದೆ

ಅಕ್ಕಿಪೇಟೆ ಮುಖ್ಯರಸ್ತೆಯ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ: ಅಭಿವೃದ್ಧಿ ಕಾಮಗಾರಿಗಳಿಗೆ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಪಾರ್ಶ್ವವಾಯು ಮತ್ತು ಎದೆನೋವು ಆರೈಕೆಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಎರಡು ಪ್ರಮಾಣೀಕರಣ ಪಡೆದ ಮೊದಲ ಸಂಸ್ಥೆಯಾಗಿದೆ

ಪ್ರಾಥಮಿಕ , ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಬೇರನ್ನು ಗಟ್ಟಿಗೊಳಿಸಬೇಕು : ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್

ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಯಶಸ್ವಿ ಅರೋಗ್ಯ ಶಿಬಿರ.